spot_img
spot_img

Chennaveer Kanavi: ಕರ್ನಾಟಕದ ಹೆಸರನ್ನು ಅರಳಿಸಿದ ‘ಚೆಂಬಳಕಿ’ನ ಕವಿ ಚೆನ್ನವೀರ ಕಣವಿ -ನಾಡೋಜ ಡಾ.ಮಹೇಶ ಜೋಶಿ

Must Read

- Advertisement -

ಬೆಂಗಳೂರು: ʻʻಹೆಸರಾಯಿತು ಕರ್ನಾಟಕ.. ಉಸಿರಾಗಲಿ ಕನ್ನಡ.. ಹಸಿಗೋಡೆಯ ಹರಳಿನಂತೆ..ʼʼ ಬಹಳ ಅರ್ಥಪೂರ್ಣ ಎನಿಸಬಲ್ಲಂತಹ ಈ ಸಾಲುಗಳನ್ನು ಬರೆದ ಕವಿ ಚೆನ್ನವೀರ ಕಣವಿ. ಭಾವಗೀತೆಯ ಪ್ರಕಾರಕ್ಕೆ ಹೊಸ ರೂಪವನ್ನು ನೀಡಿದ ಕಣವಿ ಅವರು ಕರ್ನಾಟಕದ ಹೆಸರನ್ನು ಅರಳಿಸಿದ ʻಚೆಂಬಳಕಿʼನ ಕವಿ ಕಣವಿ ಅವರು ಕನ್ನಡ ಸಾಹಿತ್ಯಕ್ಕೆ  ಹೊಸ ನೋಟಗಳನ್ನು ನೀಡಿದವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಪಂಪ ಸಭಾಂಗಣದಲ್ಲಿ ಹಮ್ಮಿಕೊಂಡ ಚೆಂಬಳಕಿನ ಕವಿ ನಾಡೋಜ ಡಾ. ಚೆನ್ನವೀರ ಕಣವಿ ಅವರ ೯೫ನೆಯ ಜನ್ಮದಿನಾಚರಣೆಯ ಪುಷ್ಪನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜೋಶಿ ಅವರು, ಡಾ. ಚೆನ್ನವೀರ ಕಣವಿ ಒಬ್ಬ ಕನ್ನಡದ ಮಹತ್ವದ ಸಾಹಿತಿಗಳಲೊಬ್ಬರು. ಬಾಲ್ಯದಿಂದಲೇ ಹಳ್ಳಿಯ ಸೊಗಡು, ತೋಟ, ಗದ್ದೆ, ಗುಡ್ಡ, ಕಣಿವೆ ನೋಡುತ್ತ ಭಾವ ಜೀವನದಲ್ಲಿ ಬೆಳೆದ ಅವರ ಜೀವನವೇ ಕಾವ್ಯ. ಕಾವ್ಯವೇ ಜೀವನ ಎಂದು ಬದುಕಿದ ನಾಡಿನ ಪ್ರಮುಖ ದಾರ್ಶನಿಕರು. 

ಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕು ಹೊಂಬಳ ಗ್ರಾಮದಲ್ಲಿ 1928 ಜೂನ್ 28ರಂದು ಹುಟ್ಟಿದ ಅವರಿಗೆ ಜೂನ್ ತಿಂಗಳ ಋತುಮಾನ ಕಣವಿಯ ಅವರ ಕವಿಯ ಬದುಕಿನ ಮೇಲೆ ಪ್ರಭಾವ ಬೀರಿತ್ತು. ಪರಿಣಾಮ ಅವರ ಕವಿತೆಯ ಸಾಲುಗಳಲ್ಲಿ ಮಳೆಗಾಲವು ಮೇಲಿಂದ ಮೇಲೆ ಕಾಣಿಸಿಕೊಂಡಿದ್ದರಿಂದ ಕವಿ ಪ್ರೊ. ಜಿ.ಎಸ್. ಶಿವರುದ್ರಪ್ಪನವರು ಕಣವಿ ಅವರನ್ನು ಮಳೆಗಾಲದ ಕವಿ ಎಂದು ಬಣ್ಣಿಸಿದ್ದರು.

- Advertisement -

ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ನಿಕಟ ಬಾಂಧವ್ಯ ಇಟ್ಟು ಕೊಂಡಿದ್ದ ಕಣವಿ ಹಾಸನದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಆರಂಭದಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ತಮಗೆ ನೃಪತುಂಗ ಪ್ರಶಸ್ತಿ ಬಂದಾಗ ಪ್ರಶಸ್ತಿಯ ಮೊತ್ತವನ್ನು ನೆರೆಸಂತ್ರಸ್ಥರ ಪರಿಹಾರ ನಿಧಿಗೆ ಸಮರ್ಪಿಸಿದ್ದರು. ಸದಾ ನನ್ನ ಮಾರ್ಗದರ್ಶಕರಾಗಿದ್ದ ಕಣವಿಯವರು ನಾನು ಕನ್ನಡ ಸಾಹಿತ್ಯ ಪರಿಷತ್ತಿನ ೨೬ನೇ ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಪರಿಷತ್ತಿನ ಬೆಳವಣಿಗೆಗೆ ಅವರ ಸಲಹೆ ಸೂಚನೆಗಳ ನಿರೀಕ್ಷೆಯಲ್ಲಿ ಇದ್ದಾಗಲೇ ನಮ್ಮನ್ನು ಅಗಲಿ ಬಿಟ್ಟಿದ್ದರು ಎಂದು ಚೆಂಬಳಕಿನ ಕವಿ ನಾಡೋಜ ಡಾ. ಚೆನ್ನವೀರ ಕಣವಿಯವರನ್ನು ಅವರು ನೆನಪಿಸಿಕೊಂಡರು. 

ಚೆನ್ನವೀರ ಕಣವಿಯವರೊಂದಿಗಿನ ತಮ್ಮ ನಿಕಟ ಒಡನಾಟವನ್ನು ನೆನಪಿಸಿಕೊಂಡ ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್.ಎಸ್. ಶ್ರೀಧರಮೂರ್ತಿಯವರು, ಕಣವಿಯವರು ಕನ್ನಡ ಸಾಹಿತ್ಯದ ಪರಿವರ್ತನೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದ್ದರು. ಅವರ ʻಮಣ್ಣಿನ ಮೆರವಣಿಗೆʼ ಬಹಳ ಮುಖ್ಯವಾದ ಸಂಕಲನ. ಭಾವಗೀತೆಗಳಿಗೂ ಹೊಸ ಚೇತನ ನೀಡಿದ್ದ ಅವರು ಕಿರಿಯರನ್ನು ಸದಾ ಪ್ರೋತ್ಸಾಹಿಸುತ್ತಿದ್ದರು. ಎಂದಿಗೂ ದಂತಗೋಪುರದ ಬರಹಗಾರರಾಗದ ಅವರು ಕನ್ನಡ ಚಳವಳಿಯಲ್ಲಿ ಕೂಡ ಸಕ್ರಿಯರಾಗಿದ್ದರು. ಗೋಕಾಕ್‌ ಚಳವಳಿ ರೂಪುಗೊಳ್ಳುವಲ್ಲಿ ಕೂಡ ಅವರ ಪಾತ್ರ ಬಹಳ ಮುಖ್ಯವಾದದ್ದು. ಧಾರವಾಡದಲ್ಲಿ ನಡೆಯುತ್ತಿದ್ದ ʻಸಾಹಿತ್ಯ ಸಂಭ್ರಮʼದಲ್ಲಿ ಕೂಡ ಅವರ ಪಾತ್ರ ಮುಖ್ಯವಾದದ್ದು. ತಮ್ಮ ಮನೆ ಬಾಗಿಲಿಗೆ ಬಂದಿದ್ದ ಸಾಹಿತ್ಯ ಅಕಾಡಮಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿ ತಮ್ಮ ಶಿಷ್ಯ ಗುರುಲಿಂಗ ಕಾಪಸೆಯವರಿಗೆ ನೀಡಿದ ಹಿರಿತನ ಅವರದ್ದು ಎಂದರು.

ಡಾ. ಚನ್ನವೀರ ಕಣವಿ ಅವರ ೯೫ನೆಯ ಜನ್ಮದಿನಾಚರಣೆಯ ಪುಷ್ಪನಮನ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹಾಗೂ ಪರಿಷತ್ತಿನ ಪದಾಧಿಕಾರಿಗಳು ಮತ್ತು ಸಿಬ್ಬಂದಿಗಳು ಪುಷ್ಪನಮನವನ್ನು ಸಲ್ಲಿಸಿದರು. ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ. ಪಟೇಲ್ ಪಾಂಡು, ಹಾವೇರಿ ಜಿಲ್ಲಾಧ್ಯಕ್ಷರಾದ ಲಿಂಗಯ್ಯ ಹಿರೇಮಠ, ಪ್ರಕಟಣಾ ವಿಭಾಗದ ಸಂಚಾಲಕರಾದ ಪ್ರೊ. ಎನ್. ಎಸ್. ಶ್ರೀಧರ ಮೂರ್ತಿ, ವಿಶೇಷ ಕರ್ತವ್ಯಾಧಿಕಾರಿ ಚಿಕ್ಕತಿಮ್ಮಯ್ಯ ಸಿ. ಹಾಗೂ ಸಿಬ್ಬಂದಿಗಳು ಕಣವಿ ಅವರ ಪುಷ್ಪನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

- Advertisement -

ಶ್ರೀನಾಥ್ ಜೆ.

ಮಾಧ್ಯಮ ಸಲಹೆಗಾರರು

ಕನ್ನಡ ಸಾಹಿತ್ಯ ಪರಿಷತ್ತು , ಬೆಂಗಳೂರು

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group