ಚಿಕ್ಕ ಮಕ್ಕಳ ಉಚಿತ ಹೃದಯ ತಪಾಸಣಾ ಶಿಬಿರ

Must Read

ಸವದತ್ತಿ:ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ ಹಾಗೂ ವಿಹಾನ್ ಹಾರ್ಟ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹುಬ್ಬಳ್ಳಿ ಇವರ ಜಂಟಿ ಸಹಯೋಗದಲ್ಲಿ ಸವದತ್ತಿ ತಾಲೂಕಿನ ೧೮ ವರ್ಷ ವಯಸ್ಸಿನ ಒಳಗಿನ ಶಾಲಾ ಮಕ್ಕಳಿಗೆ ಈ ಸಂದರ್ಭದಲ್ಲಿ ಉಚಿತ ತಪಾಸಣೆ ನಡೆಸಲಾಯಿತು.

ಸಾಮಾನ್ಯವಾಗಿ, ಹೃದಯರಕ್ತನಾಳದ ಕಾಯಿಲೆಯು ಹೃದಯದ ಮೇಲೆ ಪರಿಣಾಮ ಬೀರುವ ಅಸ್ವಸ್ಥತೆಗಳ ವ್ಯಾಪ್ತಿಯನ್ನುವಿವರಿಸುತ್ತದೆ. ರಕ್ತನಾಳಗಳ ಕಿರಿದಾಗುವಿಕೆ ಹೃದ್ರೋಗದ ಸಾಮಾನ್ಯ ರೂಪವಾಗಿದೆ. ಸಿವ್ಹಿಡಿ ಪರಿಧಮನಿಯ ಕಾಯಿಲೆ ಸೇರಿದಂತೆ ರೋಗಗಳನ್ನು ಒಳಗೊಳ್ಳುತ್ತದೆ; ಹೃದಯದ ಲಯದ ತೊಂದರೆಗಳು, ಅಥವಾ ಆರ್ಹೆತ್ಮಿಯಾ; ಹೃದಯ ಸೋಂಕುಗಳು; ಮತ್ತು ಜನ್ಮಜಾತ ಹೃದಯ ದೋಷಗಳು.ಇಂತಹ ತೊಂದರೆ ಗಳನ್ನು ಆರಂಭಿಕ ಹಂತದಲ್ಲಿ ಕಂಡು ಕೊಂಡು ತಪಾಸಣೆ ಜರುಗಿಸುವ ಮೂಲಕ ಹೃದಯ ಕ್ಕೆ ಆಗುವ ತೊಂದರೆ ನಿವಾರಿಸಲು ಅನುಕೂಲ ಎಂದು ಡಾ ಅರುಣ ಬಬಲೇಶ್ವರ ಈ ಸಂದರ್ಭದಲ್ಲಿ ತಿಳಿಸಿದರು.

ವೇದಿಕೆಯಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ. ಡಿ. ಎಲ್ ಭಜಂತ್ರಿ. ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯ ಕ್ರಮ ದ ವೈದ್ಯರಾದ ಡಾ. ಶಿವನಗೌಡ ಹಚಡದ, ಡಾ.ಗೀತಾ ಸೂಡಿ, ಡಾ. ಶಶಿಕಲಾ ತಡಕೋಡ, ಡಾ.ವಿಜಯಲಕ್ಷ್ಮೀ ಹುಚ್ಚೇಲಿ, ಡಾ.ಖಾಜಪ್ಪ ಹೊಸಮನಿ,  ಮಕ್ತುಂಬಿ ಹಂಪಿಹೊಳಿ, ಸಂಜೀವ ಪರಪ್ಪನವರ ಉಪಸ್ಥಿತರಿದ್ದ ರು.

ತಾಲೂಕಿನ ವಿವಿಧ ಭಾಗಗಳಿಂದ ತಮ್ಮ ಮಕ್ಕಳೊಂದಿಗೆ ಆಗಮಿಸಿದ್ದ ಪಾಲಕರು ಮಕ್ಕಳ ಆರೋಗ್ಯ ತಪಾಸಣೆ ಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಹೃದಯ ತಪಾಸಣಾ ಶಿಬಿರ ವನ್ನು ಯಶಸ್ವಿಗೊಳಿಸಿದರು.

ತಪಾಸಣಾ ಶಿಬಿರ ದ ಪ್ರಾರಂಭದಲ್ಲಿ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಡಿ ಎಲ್ ಭಜಂತ್ರಿ ಸ್ವಾಗತಿಸಿದರು. ಡಾ. ಶಿವನಗೌಡ ಹಚಡದ ಕಾರ್ಯ ಕ್ರಮ ದ ಉದ್ದೇಶ ತಿಳಿಸಿದರು. ವೈ ಬಿ ಕಡಕೋಳ ನಿರೂಪಿಸಿದರು. ಡಾ. ಗೀತಾ ಸೂಡಿ ವಂದಿಸಿದರು

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group