Homeಸುದ್ದಿಗಳುವಿದುಷಿ ಡಾ.ಸುಮ ಹರಿನಾಥ್‌ರಿಂದ ಸುಗಮ ಸಂಗೀತ

ವಿದುಷಿ ಡಾ.ಸುಮ ಹರಿನಾಥ್‌ರಿಂದ ಸುಗಮ ಸಂಗೀತ

ಮೈಸೂರು -ನಗರದ ರಾಮಕೃಷ್ಣನಗರದಲ್ಲಿರುವ ಸ್ವರಾಲಯ ಸಂಗೀತ ಸಂಸ್ಥೆ ಅಧ್ಯಕ್ಷೆ ಹಾಗೂ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ವಿದುಷಿ ಡಾ.ಸುಮ ಹರಿನಾಥ್ ಅವರು ಸಹ ಗಾಯಕಿ ಕು.ಜಿ.ಅನಘಾ ಅವರೊಂದಿಗೆ ಮೈಸೂರು ದಸರಾ ವಸ್ತುಪ್ರದರ್ಶನ ಪ್ರಾಧಿಕಾರ ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಗಮ ಸಂಗೀತ ನಡೆಸಿಕೊಟ್ಟರು.

ಇವರಿಗೆ ಪಕ್ಕವಾದ್ಯದಲ್ಲಿ ಕೀ ಬೋರ್ಡ್ನಲ್ಲಿ ವಿದ್ವಾನ್ ಮೋಹನ್ ದೇವಯ್ಯ ಹಾಗೂ ತಬಲಾದಲ್ಲಿ ವಿದ್ವಾನ್ ಉದಯಕುಮಾರ್ ಎಂ.ಆರ್. ಅವರು ಸಹಕಾರ ನೀಡಿದರು.

ಈ ಸಂದರ್ಭದಲ್ಲಿ ದಸರಾ ಉಪ ಸಮಿತಿ ಉಪಾಧ್ಯಕ್ಷ ರಂಗಸ್ವಾಮಿ ಪಾಪು, ಈಶ್ವರ, ಮಲ್ಲಿಕಾರ್ಜುನ ಹಾಗೂ ಯುವ ನಿರೂಪಕ ಅಜಯ್ ಶಾಸ್ತ್ತಿ, ಸ್ವರಾಲಯ ಕಾರ್ಯದರ್ಶಿ ಹೆಚ್.ಎಸ್.ಶ್ರೀಕಾಂತಾಮಣಿ, ಪದಾಧಿಕಾರಿಗಳಾದ ಶುಭ ಗಣೇಶ, ರೂಪ ನರಸಿಂಹನ್ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಮುಗಿದ ನಂತರ ದಸರಾ ಉಪ ಸಮಿತಿ ವತಿಯಿಂದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

RELATED ARTICLES

Most Popular

error: Content is protected !!
Join WhatsApp Group