ಎಲ್ಲ ಕ್ಷೇತ್ರಗಳಿಗೂ ಬಂಪರ್ ನೀಡಿದ ಸಿಎಂ ಬೊಮ್ಮಾಯಿ; ಶಾಸಕ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

Must Read

 

ಗೋಕಾಕ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಎಲ್ಲ ಕ್ಷೇತ್ರಗಳಿಗೆ ಅನುದಾನದ ಮಹಾಪೂರವೇ ಹರಿದು ಬಂದಿದೆ ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.

ಕೃಷಿ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದ್ದು, ಇದೊಂದು ಜನಪರ ಹಾಗೂ ರೈತ ಪರ ಬಜೆಟ್ ಆಗಿದೆ. ೯ ಲಕ್ಷ ಹಾಲು ಉತ್ಪಾದಕರಿಗೆ ೧೦೬೭ ಕೋಟಿ ರೂ. ಪ್ರೋತ್ಸಾಹ ಧನ, ರೈತರಿಗಾಗಿ ಭೂಸಿರಿ ಯೋಜನೆ, ಕಿಸಾನ್ ಕಾರ್ಡ್ ಹೊಂದಿರುವ ರೈತರಿಗೆ ೧೦ ಸಾವಿರ ರೂ. ಹೆಚ್ಚಿನ ಸಹಾಯಧನ, ಕ್ರೀಮಿ ನಾಶಕ, ರಸಗೊಬ್ಬರ, ಬೀಜ ಖರೀದಿಗೆ ಅನುಕೂಲವಾಗಲಿದ್ದು, ೫೦ ಲಕ್ಷ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ರೈತರಿಗೆ ರೂ. ೫ ಲಕ್ಷ ತನಕ ಶೂನ್ಯ ಬಡ್ಡಿ ದರ, ಮಹಿಳೆಯರ ಅಭಿವೃದ್ಧಿ ಗೆ ಗೃಹಿಣಿ ಶಕ್ತಿ, ಶ್ರಮ ಶಕ್ತಿ ಯೋಜನೆ, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್, ಪಜಾ.ಪಪಂ ಬಿಪಿಎಲ್ ಅಮೃತ ಕಾಲ,ನಿರುದ್ಯೋಗ ಯುವಕರಿಗೆ ಯುವ ಸ್ನೇಹಿ, ಗ್ರಾ.ಪಂ‌ ಸದಸ್ಯರ ಗೌರವ ಧನ ಹೆಚ್ಚಳ, ಕಿತ್ತೂರ ಕರ್ನಾಟಕ ಅಭಿವೃದ್ಧಿ ಮಂಡಳಿ  ಸೇರಿದಂತೆ ಎಲ್ಲ ವರ್ಗಗಳಿಗೆ ಈ ಬಜೆಟ್ ಪೂರಕವಾಗಿದೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group