ಚಾಮರಾಜನಗರ: ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಥದ ಬೀದಿಯ ಶಾಖೆಯಲ್ಲಿ (ಶಾಖೆ ಕೋಡ್ 40062)ದಿನಾಂಕ 14-11-2022ರಿಂದ 19-11-2022 ರವರೆಗೆ ನಾಣ್ಯಗಳ ಮೇಳವನ್ನು ನಡೆಸಲಾಗುತ್ತದೆ ಎಂದು ಶಾಖಾ ವ್ಯವಸ್ಥಾಪಕರಾದ ಸಕ್ಸೇನ ತಿಳಿಸಿದ್ದಾರೆ.
5, 10 ಮತ್ತು 20 ರೂ ಮುಖ ಬೆಲೆಯ ನಾಣ್ಯಗಳನ್ನು ಯಾವುದೇ ಮೊತ್ತಕ್ಕೆ ಬದಲಾಯಿಸಬಹುದು ರೂ.10 ಮತ್ತು 20ರ ನಾಣ್ಯಗಳೊಂದಿಗೆ (ಕನಿಷ್ಟ 1 ಬ್ಯಾಗ್)ವಿನಿಮಯ ಮಾಡಿಕೊಳ್ಳಿ ಮತ್ತು ಉಡುಗೊರೆಯನ್ನು ಬೆಳಗ್ಗೆ 11.00 ರಿಂದ ಮಧ್ಯಾಹ್ನ 3.30 ರವರೆಗೆ ಪಡೆಯಬಹುದು ಎಂದು ತಿಳಿಸಿದ್ದಾರೆ.