spot_img
spot_img

ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ

Must Read

- Advertisement -

ಬೆಳಗಾವಿ – ವಚನ ಪಿತಾಮಹ ಡಾ.ಫ ಗು ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ 21.07.2024. ರಂದು ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಉಪನ್ಯಾಸ ಜರುಗಿತು

ಪ್ರಾರಂಭದಲ್ಲಿ ಜಯಶ್ರೀ ಚಾವಲಗಿ ಪವಿತ್ರಾ ನರಗುಂದ ಸುವರ್ಣ ಗುಡಸ, ವಿ ಕೆ ಪಾಟೀಲ್, ಸುಶೀಲಾ ಗುರವ, ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು. ಸುರೇಶ ನರಗುಂದ ಸಾಮೂಹಿಕ ಪ್ರಾಥನೆ ನಡೆಸಿಕೊಟ್ಟರು ಡಾ. ಜಯಾನಂದ ಧನವಂತ ವೈದ್ಯಾಧಿಕಾರಿಗಳು ಮಳೆಗಾಲದಲ್ಲಿ ಬರುವ ಕಾಯಿಲೆಗಳು ಕುರಿತು ಉಪನ್ಯಾಸ ನೀಡಿದರು

ಮನೆ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಲ್ಲಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ತೆಂಗಿನ ಸೊಟ್ಟೆಯಲ್ಲಿಯ ನೀರನ್ನು ಬೋರಲು ಹಾಕಬೇಕು. ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆಯನ್ನು ಇಟ್ಟು ಸಂತಾನೋತ್ಪತ್ತಿ ಮಾಡುವವು. ಕಾರಣ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆ ಪರದೆ ಉಪಯೋಗಿಸಬೇಕು. ವೈದ್ಯರ ಸಲಹೆ ಇಲ್ಲದೆ ಮಾತ್ರೆಗಳನ್ನು ತೆಗೆದುಕೊಳ್ಳಕೂಡದು. ವೈಯಕ್ತಿಕ ಸ್ವಚ್ಛತೆಯು ಮುಖ್ಯ ಎಂದು ತಿಳಿಸಿದರು. ಶಂಕರ್ ಗುಡಸ ಇತರರು ಮಾತನಾಡಿದರು. ಸುಶೀಲಾ ಗುರವ ದಾಸೋಹಸೇವೆ ಸಲ್ಲಿಸಿದರು.ಎಂ. ವಾಯ್.ಮೆಣಸಿನಕಾಯಿ ಅವರು ಪರಿಚಯಿಸಿದರು.

- Advertisement -

ಈ ವಾರದಲ್ಲಿ ಜನಿಸಿದ ಶರಣ ಶರಣೆಯರನ್ನು ಸತ್ಕರಿಸಲಾಯಿತು. ವಿರುಪಾಕ್ಷಿ ದೊಡ್ಡಮನಿ,ಮಂಗಲಾ ಕಾಗತಿಕರ,ಗುತ್ತಿಗೋಳಿ ಅನ್ನಪೂರ್ಣ ಕಾಡಣ್ಣವರ, ಕಮಲಾ ಗಣಾಚಾರಿ, ಶಿವಾನಂದ ತಲ್ಲೂರ ಇತರರು ಉಪಸ್ಥಿತರಿದ್ದರು ಸುರೇಶ ನರಗುಂದ ಕಾರ್ಯಕ್ರಮ ನಡೆಸಿ ಕೊಟ್ಟರು. ಮಂಗಲದೊಂದಿಗೆ ಮುಕ್ತಾಯಗೊಂಡಿತು.

- Advertisement -
- Advertisement -

Latest News

ವಾಲ್ಮೀಕಿ ಒಂದು ಹೆಸರಾಗದೆ ಶಕ್ತಿಯಾಗಿದೆ – ಶಶಿಧರ ಅವಟಿ

ಸಿಂದಗಿ; ಬದಲಾವಣೆ ಜಗದ ನಿಯಮ ಅನ್ನುವಂತೆ ಒಬ್ಬ ಬೇಡ ಕುಲದಲ್ಲಿ ಜನಿಸಿದ ರತ್ನಾಕರ ಬೇಟೆಗಾರರಾಗಿ, ದರೋಡೆಕೊರರಾಗಿದ್ದ ವಾಲ್ಮಿಕಿಯವರು ನಾರದ ಮುನಿಗಳ ಮಾತಿಗೆ ಕಟ್ಟುಬಿದ್ದು ೧೨ ವರ್ಷ...
- Advertisement -

More Articles Like This

- Advertisement -
close
error: Content is protected !!
Join WhatsApp Group