- Advertisement -
ಮೈಸೂರು -ನಗರದ ಕರ್ನಾಟಕ ದಸರಾ ವಸ್ತುಪ್ರದರ್ಶನ ಪ್ರಾಧಿಕಾರದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ರವಿವಾರ ಮಂಜುಳ ಮತ್ತು ತಂಡದವರು ಹಾಸ್ಯ ರಸಮಂಜರಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ಹಾಸ್ಯ ನಟ ಡಿಂಗ್ರಿ ನಾಗರಾಜ್, ರೇಖಾದಾಸ್, ಮಿಮಿಕ್ರಿ ಗೋಪಿ, ಜ್ಯೂ.ಅಂಬರೀಷ್, ಜ್ಯೂ.ವಿಷ್ಣುವರ್ಧನ್, ಜ್ಯೂ.ಶಂಕರ್‌ನಾಗ್, ಜ್ಯೂ.ಮಾಲಾಶ್ರೀ ಹಾಗೂ ಇತರ ನಟ, ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಸಿಇಓ ರುದ್ರೇಶ್, ಸಾಂಸ್ಕೃತಿಕ ಉಪ ಸಮಿತಿ ಅಧ್ಯಕ್ಷ ರಘುರಾಜೇ ಅರಸ್, ಉಪಾಧ್ಯಕ್ಷರಾದ ಅಕ್ರಂ ಪಾಷಾ, ಮಲ್ಲಿಕಾರ್ಜುನ್, ರಾಜೇಶ್ ಸಿ.ಗೌಡ, ಸಂಚಾಲಕ ರಂಗಸ್ವಾಮಿ ಸಿ. (ಪಾಪು), ಸದಸ್ಯರಾದ, ರಾಕೇಶ್, ಚಂದ್ರಕಲಾ, ಕೋಮಲಾ, ಮಹೇಶ್, ನಿರೂಪಕ ಅಜಯ್ ಶಾಸ್ತ್ರೀಜಿ, ಮಹೇಂದ್ರ ಕಾಗಿನೆಲೆ, ಹಾಗೂ ಮುಂತಾದವರು ಉಪಸ್ಥಿತರಿದ್ದರು. ಮಳೆಯ ಸಿಂಚನದ ನಡುವೆಯೂ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.