ಶೀಘ್ರ ವಿದ್ಯುತ್ ಸ್ಟೇಶನ್ ಕಾಮಗಾರಿ ಆರಂಭ – ರಮೇಶ ಭೂಸನೂರ

0
406
ಪಟ್ಟಣದ ಹುಬ್ಬಳಿ ವಿದ್ಯುತ್ ಪ್ರಸರಣ ಕಂಪನಿಯ ಉಪವಿಬಾಗಾಧಿಕಾರಿಗಳ ಕಚೇರಿ ಕಟ್ಟಡ ಕಾಮಗಾರಿ ಭೂಮಿಪೂಜೆ ನೆರವೇರಿಸಿದ ಶಾಸಕ ರಮೇಶ ಭೂಸನೂರ ಮಾತನಾಡುತ್ತಿರುವುದು.

ಸಿಂದಗಿ; ಈ ಕ್ಷೇತ್ರದ ರೈತರ ಜಮೀನುಗಳಿಗೆ ವಿದ್ಯುತ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಆಹೇರಿಯಲ್ಲಿ 220 ಕೆ.ವ್ಹಿ. ಸ್ಟೇಷನ್ ಸೇರಿದಂತೆ 5 ಗ್ರಾಮಗಳಲ್ಲಿ 110 ಕೆ/ವ್ಹಿ ಸ್ಟೇಷನ್‍ಗಳ ಶೀಘ್ರದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಪ್ರಸರಣ ನಿಗಮದ ಆವರಣದಲ್ಲಿ ರೂ.1.20 ಲಕ್ಷ ವೆಚ್ಚದ ಉಪವಿಭಾಗ ಕಛೇರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಒಟ್ಟು 5 110 ಕೆವ್ಹಿ ಸ್ಟೇಷನ್‍ಗಳ ಕಾಮಗಾರಿ ಶೀಘ್ರದಲ್ಲಿ ಪ್ರಾರಂಭವಾಗಲಿದೆ ಅಲ್ಲದೆ ರೈತರ ಜಮೀನುಗಳಿಗೆ ನೀರಿನ ಕೊರತೆಯನ್ನು ನೀಗಿಸಲು ಗುತ್ತಿಬಸವಣ್ಣ ಏತನೀರಾವರಿ ಕಾಲುವೆಗೆ ನೀರು ಹರಿದು ಬರುವಂತೆ 6 ಮೋಟಾರುಗಳನ್ನು ಪ್ರಾರಂಭಿಸುವಂತೆ ಸೂಚಿಸಲಾಗಿದೆ ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದರು.

ಹೆಸ್ಕಾಂ ನಿಗಮದ ನಿರ್ದೇಶಕ ಪುಟ್ಟು ಸಾವಳಸಂಗ, ಲಿಂಬೆ ಅಭಿವೃಧ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ಗುರು ಗಡಗಿ, ಈರಣ್ಣಾ ರಾವೂರ, ಗುತ್ತಿಗೆದಾರ ಎ.ಎಚ್. ರುಣವಾಲ, ಸಂತೋಷ ಪಾಟೀಲ ಡಂಬಳ, ರವಿ ನಾಯ್ಕೋಡಿ, ಇಂಡಿ ಉಪವಿಬಾಗಧಿಕಾರಿ ಎಇಇ ಎಸ್‍ಎಸ್ ಬಿರಾದಾರ, ಸಿಂದಗಿ ಹೆಸ್ಕಾಂ ಅಧಿಕಾರಿ ಮಂಜುನಾಥ ನಾಯಕ ಸೇರಿದಂತೆ ಅನೇಕರಿದ್ದರು.