ಗ್ಯಾರಂಟಿಗಳಿಂದ ಕಾಂಗ್ರೆಸ್ ಜನರ ದಾರಿ ತಪ್ಪಿಸಿದೆ – ವಿಜುಗೌಡ ಪಾಟೀಲ

0
191

ಸಿಂದಗಿ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 5 ಗ್ಯಾರೆಂಟಿಗಳನ್ನು ಕೊಟ್ಟು ಜನರ ದಾರಿ ತಪ್ಪಿಸಿದೆ. ಈ ಗ್ಯಾರೆಂಟಿಗಳಿಂದ ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಕುಂಠಿತ ವಾಗಿದೆ ಅಲ್ಲದೆ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಆವಾಗ್ಗೆ ಬರಗಾಲ ಬೀಳುವುದು ಖಚಿತ ಆ ಕಾರಣಕ್ಕೆ ಮೋದಿಯವರ 10 ವರ್ಷದ ಸಾಧನೆಯ ಮೇಲೆ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು ಅದಕ್ಕೆ 22,23,24 ರಂದು ಮಹಾಸಂಪರ್ಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಬಾರಿ ಹೆಚ್ಚಿನ ಮತಗಳನ್ನು ನೀಡಿ ಮೋದಿಜಿಯವರ ಕೈಬಲಪಡಿಸಬೇಕು ಎಂದು ಸಿಂದಗಿ ವಿಧಾನ ಸಭಾ ಕ್ಷೇತ್ರದ ಸಂಘಟನೆಯ ಪ್ರಭಾರಿ ವಿಜುಗೌಡ ಪಾಟೀಲ ಮನವಿ ಮಾಡಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಗಜಿಣಗಿಯವರು 13 ಬಾರಿ ಚುನಾವಣೆಗಳನ್ನು ಎದುರಿಸಿ 12 ಬಾರಿ ಆಯ್ಕೆಯಾಗಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಅಧಿಕಾರ ಮಾಡಿದ್ದಾರೆ. ಕಳೆದ 10 ವರ್ಷದ ಅವಧಿಯಲ್ಲಿ ಸಂಸದ ಜಿಗಜಿಣಗಿಯವರು 1 ಲಕ್ಷ ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆ ಇಡೀದೇಶಾದ್ಯಂತ  ಪ್ರಾರಂಭವಾಗಿದ್ದು ಇದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಕಾಂಗ್ರೆಸಿಗರಿಗೆ ಯಾವುದೇ ಅಭಿವೃದ್ಧಿ ಮಾತನಾಡಲು ವಿಷಯವಿಲ್ಲ ಅದಕ್ಕೆ ಅನಗತ್ಯವಾಗಿ ಜಿಗಜಿಗಣಗಿಯವರನ್ನು ಹಿಯಾಳೀಸುವ ಟೀಕೆ ಟಿಪ್ಪಣೆ ಮಾಡುವ ಕೃತ್ಯಕ್ಕೆ ಕೈ ಹಾಕುತ್ತ ಬಂಜಾರ ಸಮುದಾಯಕ್ಕೆ ತುಚ್ಯವಾಗಿ ಮಾತನಾಡಿದ್ದಾರೆ ಎನ್ನುವುದು ತಿರುಚಿ ಗೊಂದಲ ಸೃಷ್ಟಿಸಿದ್ದಾರೆ ನಮ್ಮ ಪಕ್ಷದಿಂದ ಬಂಜಾರ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಜಿಗಜಿಣಗಿ ಆಯ್ಕೆ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಅಲ್ಲದೆ ದೇಶದ ಪ್ರಧಾನಿ ಮೋದಿ ಅವರು ಆಗುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಗುರು ತಳವಾರ, ಸಿದ್ದರಾಮ ಆನಗೊಂಡ, ಸಿದ್ದಸಲಿಂಗಯ್ಯ ಹಿರೇಮಠ ಇದ್ದರು.