ಸಹಕಾರಿ ಸಂಘಕ್ಕೆ ಸತತ ಪರಿಶ್ರಮ ಅಗತ್ಯ – ಎಸ್ ಆರ್ ಪಾಟೀಲ

Must Read

ಬಾಗಲಕೋಟೆ : ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರೂ ಸತತ ಪರಿಶ್ರಮ ಪಟ್ಟರೆ ಸಂಘವನ್ನು ಉನ್ನತ ಮಟ್ಟದಲ್ಲಿ ಕೊಂಡೊಯ್ಯಬಹುದಾಗಿದ್ದು ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು, ಗ್ರಾಮೀಣ ಜನರು ಪಟ್ಟಣಕ್ಕೆ ಹೋಗಿ ತಮ್ಮ ಆರ್ಥಿಕ ಅನುಕೂಲಗಳನ್ನು ಕಲ್ಪಿಸಿಕೊಳ್ಳುವಲ್ಲಿ ಸಾಕಷ್ಟು ಕಷ್ಟ ಪಡುತ್ತಿದ್ದು ಅದನ್ನು ತಪ್ಪಿಸಲು ಗ್ರಾಮೀಣ ಭಾಗಗಲ್ಲಿಯೇ ಹೆಚ್ಚೆಚ್ಚು ಶಾಖೆಗಳನ್ನು ತೆರೆಯುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯದ ಮಾಜಿ ಸಚಿವರು ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಎಸ್ ಆರ್ ಪಾಟೀಲ ರವರು ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕ ಕಂದಗಲ್ಲ ಗ್ರಾಮದ ನಾಡಗೌಡ್ರ ಕಾಂಪ್ಲೆಕ್ಸ್ ದಲ್ಲಿ ಪ್ರಾರಂಭಗೊಂಡ ಬಾಪೂಜಿ ಪತ್ತಿನ ಸಹಕಾರಿ ಸಂಘದ 80 ನೇ ಶಾಖೆಯನ್ನು ಉದ್ಘಾಟನೆ ಮಾಡಿ ಮಾತನಾಡಿದರು.

ನಂದವಾಡಗಿ ಶ್ರೀ ಮಠದ ಕಿರಿಯ ಪೂಜ್ಯರಾದ ಡಾ ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸುಕ್ಷೇತ್ರ ಸಜ್ಜಲಗುಡ್ಡ -ಕಂಬಳಿಹಾಳ ಮಠದ ಪೂಜ್ಯ ಶ್ರೀ ದೊಡ್ಡಬಸವಾರ್ಯ ತಾತನವರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಭೆಯ ಅಧ್ಯಕ್ಷತೆ ವಹಿಸಿ ಕಂದಗಲ್ಲ ಶಾಖೆಯ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಪ್ರಗತಿಪರ ರೈತರಾದ ಚನ್ನಪ್ಪಗೌಡ್ರ ನಾಡಗೌಡ್ರ ಮಾತನಾಡಿದರು.
ಮುಖ್ಯ ಅತಿಥಿಗಳಾದ ಸಿಂಗನಗುತ್ತಿ ಗ್ರಾಮದ ಪರತಗೌಡ್ರ ಪಾಟೀಲ, ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಎಸ್ ಸಿ ಮೋಟಗಿಯವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಾಜಿ ಸಚಿವರು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಎಸ್ ಆರ್ ಪಾಟೀಲ್ ರವರನ್ನು ಗ್ರಾಮದ ವತಿಯಿಂದ ಸ್ಥಳೀಯ ಶಾಖೆಯಿಂದ ಕುರುಪೇಟೆ ಓಣಿ ಹಾಗೂ ಬಸವೇಶ್ವರ ಸಹಕಾರಿ ಸಂಘದಿಂದ ಸನ್ಮಾನಿಸಲಾಯಿತು. ಇದೆ ಸಂದರ್ಭದಲ್ಲಿ ಉಭಯ ಶ್ರೀಗಳನ್ನು ಅಧ್ಯಕ್ಷರನ್ನು ಹಾಗೂ ವೇದಿಕೆಯಲ್ಲಿದ್ದ ಎಲ್ಲರನ್ನು ಸನ್ಮಾನಿಸಲಾಯಿತು.

ಗ್ರಾಮದ ಹಿರಿಯರಾದ ಶಶಿಧರ ನಾಡಗೌಡ್ರ, ಮಹಾಂತೇಶ ಕಡಿವಾಲ, ಬಸ್ಸೆಟ್ಟೆಪ್ಪ ಸಜ್ಜನ, ಅಮೀರಹಮಜಾಸಾಹೇಬ ಭಾವಿಕಟ್ಟಿ ಚೌಡೇಶ್ವರಿ ದೇವಸ್ಥಾನದ ಅರ್ಚಕರಾದ ಕೋನಪ್ಪ ನಾಯಕ, ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಅಳ್ಳೊಳ್ಳಿ, ಯುವ ಮುಖಂಡ ಶಿವಪ್ಪ ಭಜಂತ್ರಿ,ಮಾಜಿ ಸೈನಿಕರಾದ ರಾಮನಗೌಡ ಬೆಳ್ಳಿಹಾಳ, ಬಸವೇಶ್ವರ ಸಹಕಾರಿ ಸಂಘದ ಅಧ್ಯಕ್ಷ ಅಮಾತೆಪ್ಪ ಯರದಾಳ, ಗ್ರಾಮ ಪಂಚಾಯತ ಸದಸ್ಯ ರೆಹಮಾನಸಾಬ ಬಾಗವಾನ, ಸಂಸ್ಥೆಯ ಉಪಾಧ್ಯಕ್ಷ ಸಂಗಣ್ಣ ಹವಾಲ್ದಾರ, ಸಂಸ್ಥಾಪಕ ಸದಸ್ಯರಾದ ಎಂ ಎಸ್ ಪಾಟೀಲ, ಎ ಎಸ್ ನಾಗಲೋಟಿ, ಸುರೇಶ ತಳವಾರ, ಸ್ಥಳೀಯ ಶಾಖೆಯ ಸಲಹಾ ಸಮಿತಿ ಸದಸ್ಯರಾದ ಶರಣಪ್ಪಗೌಡ ಸಣ್ಣಅಯ್ಯನಗೌಡ್ರ, ಬಸಪ್ಪ ವಿಟ್ಲಾಪುರ, ಶರಣಯ್ಯ ಮಠ, ವಿರೇಶ ಪಾಟೀಲ, ಚಂದ್ರಶೇಖರಯ್ಯ ಗುರುವಿನಮಠ, ಹಣಮಂತಗೌಡ ದಾದ್ಮಿ, ಚನ್ನಪ್ಪ ಜಾಲಿಹಾಳ, ಶ್ರೀನಿವಾಸ ಕುಲಕರ್ಣಿ,ಗ್ಯಾನಪ್ಪ ಹುತಗಣ್ಣನವರ,ಮಲ್ಲಿಕಾರ್ಜುನ ಪೋತನಾಳ, ಮಂಜುನಾಥ ಪೂಜಾರಿ, ಕಂದಗಲ್ಲ ಶಾಖೆಯ ವ್ಯವಸ್ತಾಪಕರಾದ ಮಹಾಂತೇಶ ಸoದೂರಿ ಹಾಗೂ ಸುತ್ತಮುತ್ತಲಿನ ಶಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಶ್ವಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಲಹಾ ಸಮಿತಿಯ ಪಂಪಣ್ಣ ಸಜ್ಜನ ಸ್ವಾಗತಿಸಿದರು, ಮಹಮ್ಮದಸಾಬ ಭಾವಿಕಟ್ಟಿ ವಂದಿಸಿದರು, ಪತ್ರಕರ್ತ ವೀರೇಶ ಶಿಂಪಿ ನಿರೂಪಿಸಿದರು.

Latest News

ಕವನ : ದೀಪಾವಳಿ

ದೀಪಾವಳಿ ಸಾಲು ಸಾಲು ದೀಪಗಳು ಕಣ್ಣುಗಳು ಕೋರೈಸಲು ಒಳಗಣ್ಣು ತೆರೆದು ನೋಡಲು ಜೀವನದ ಮರ್ಮ ಕರ್ಮ ಧರ್ಮಗಳನು ಅರಿಯಲು ಸಾಲು ಸಾಲು ದೀಪಗಳು ಮೌಢ್ಯವ ಅಳಿಸಲು ಜ್ಞಾನವ ಉಳಿಸಿ ಬೆಳೆಸಲು ಸಾಲು ಸಾಲು ದೀಪಗಳು ಮನೆಯನು ಬೆಳಗಲು ಮನವನು ತೊಳೆಯಲು ಸಾಲು ಸಾಲು ದೀಪಗಳು ನಮ್ಮ ನಿಮ್ಮ ಎಲ್ಲರ ಮನೆ ಹಾಗೂ ಮನವನು ಬೆಳಗಲಿ ಮಾನವೀಯತೆಯ ಜ್ಯೋತಿ ಎಲ್ಲೆಡೆ ಪಸರಿಸಲಿ ಶುಭ ದೀಪಾವಳಿ 🌹ಡಾ....

More Articles Like This

error: Content is protected !!
Join WhatsApp Group