ಮೂಡಲಗಿ: ಎಲ್ಲರೂ ಕೋವಿಡ್ ಲಸಿಕೆ ಪಡೆದು ಸರಕಾರದ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಗಾರ್ಡನ್ ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪತ್ರಕರ್ತ ಸುಭಾಸ ಗೊಡ್ಯಾಗೋಳ ಹೇಳಿದರು.
ಶುಕ್ರವಾರ ವಾರ್ಡ ನಂ 6ರಲ್ಲಿ ನಾಗಲಿಂಗ ನಗರದ ಚೈತನ್ಯ ಶಾಲೆಯಲ್ಲಿ ಹಮ್ಮಿಕೊಂಡ ಕೋವಿಡ್ ಲಸಿಕಾ ಶಿಬಿರದಲ್ಲಿ ಮಾತನಾಡಿದ ಅವರು, ಈ ಶಿಬಿರದಲ್ಲಿ 250 ಜನರಿಗೆ ಲಸಿಕೆ ನೀಡಲಿದ್ದು ಜನತೆ ಇದರ ಸದುಪಯೋಗ ಪಡೆಯಬೇಕು. ಸಮುದಾಯ ಆರೋಗ್ಯ ಕೇಂದ್ರದಿಂದ ಪಟ್ಟಣದ ಇತರ ವಾರ್ಡುಗಳಲ್ಲಿನ ಜನತೆಗೂ ಲಸಿಕೆ ಹಾಕಲಾಗುತ್ತಿದ್ದು ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಪುರಸಭೆ ಉಪಾಧ್ಯಕ್ಷೆ ರೇಣುಕಾ ಹಾದಿಮನಿ, ಮಾಜಿ ಸದಸ್ಯ ಶ್ರೀಶೈಲ ಗಾಣಿಗೇರ ಮುಖಂಡರಾದ ಭೀಮಶಿ ಢವಳೇಶ್ವರ, ಶಿವಲಿಂಗ ಹಾದಿಮನಿ ಆರೋಗ್ಯ ಸಿಬ್ಬಂದಿಗಳಾದ ವಿಠ್ಠಲ ಪಾಟೀಲ, ರಾಜು ಕುದರಿಮನಿ, ಚೇತನ ನಿಶಾನಿಮಠ, ಅಜ್ಜಪ್ಪ ಕರಿಮಸಿ ಆಶಾ ಕಾರ್ಯಕರ್ತೆಯರಾದ ಬೀಬಿ ಆಯೇಶಾ ಡಾಂಗೆ, ಮಹಾದೇವಿ ಹಣಬರ, ವಿಜಯಲಕ್ಷ್ಮೀ ರೇಳೆಕರ, ಶಕುಂತಲಾ ಗೋಲಶೆಟ್ಟಿ, ಲಕ್ಷ್ಮೀ ಹೊಸೂರ ಇದ್ದರು.