spot_img
spot_img

ಆಧುನಿಕ ಭಗೀರಥ ದಿ.ಎಂ ಸಿ ಮನಗೂಳಿಯವರಿಗೆ ಹಾಲಿನ ಅಭಿಷೇಕ

Must Read

- Advertisement -

ಸಿಂದಗಿ: ದಿ.ಶಾಸಕ ಎಂ.ಸಿ.ಮನಗೂಳಿ ಅವರು ನಮ್ಮಿಂದ ಅಗಲಿರಬಹುದು ಆದರೆ ಅವರು ಮಾಡಿದ ಕಾರ್ಯಗಳು ನಮ್ಮೊಂದಿಗಿವೆ ಅವರು ನೀರಾವರಿ ಯೋಜನೆಗೆ ಹೆಚ್ಚು ಮಹತ್ವ ನೀಡುವ ಮೂಲಕ ಆಧುನಿಕ ಭಗೀರಥ ಎಂದು ಕರೆಯಿಸಿಕೊಂಡವರು ಅವರು ಮಾಡಿದ ಕಾರ್ಯವನ್ನು ಗ್ರಾಮಸ್ಥರು ಸ್ಮರಿಸಿಕೊಳ್ಳುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಭಂಥನಾಳ ಹಿರೇಮಠದ ವೃಷಭಲಿಂಗ ಸ್ವಾಮೀಜಿ ಹೇಳಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಚಿಮ್ಮಲಗಿ ಏತನೀರಾವರಿ ಹೋರಾಟ ಸಮಿತಿ ಚಿಕ್ಕಸಿಂದಗಿ ವತಿಯಿಂದ ಕೋರವಾರ ಬ್ರ್ಯಾಂಚ್ ಕಾಲುವೆ ಡಿಸ್ಟ್ರಿಬ್ಯೂಟರ-1 ರಿಂದ 6ರ ವರೆಗೆ ನೀರಾವರಿ ಯೋಜನೆ ಮಂಜೂರು ಆಗಲು ಶ್ರಮಿಸಿದ ದಿ.ಮಾಜಿ ಸಚಿವ ಎಂ.ಸಿ.ಮನಗೂಳಿ ಅವರಿಗೆ ಚಿಕ್ಕಸಿಂದಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರ ವತಿಯಿಂದ ಸ್ಮರಣೆ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ನುಡಿದಂತೆ ನಡೆದ ವ್ಯಕ್ತಿತ್ವ ಹೊಂದಿದ ವ್ಯಕ್ತಿ ದಿ.ಎಂ.ಸಿ.ಮನಗೂಳಿ ಅವರು ಕ್ಷೇತ್ರದಲ್ಲಿ ಮಾಡಿದ ಕಾರ್ಯ ಶಾಶ್ವತವಾಗಿ ಜನತೆಯ ಮನದಲ್ಲಿ ಉಳಿದಿವೆ ಎಂದರು.

ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, ದಿ.ಎಂ.ಸಿ.ಮನಗೂಳಿಯವರು 2018ರ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ತಾಲೂಕಿನ ಚಿಕ್ಕಸಿಂದಗಿ ಸೇರಿದಂತೆ 10 ಹಳ್ಳಿಗಳ ಜನರು ಸುಮಾರು 25 ವರ್ಷಗಳ ಬೇಡಿಕೆಯಾದ ಚಿಮ್ಮಲಗಿ ಏತನೀರಾವರಿಗೆ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ಸಮ್ಮಿಶ್ರ ಸರಕಾರದಲ್ಲಿ ಶಾಶ್ವತ ಪರಿಹಾರ ನೀಡುವಲ್ಲಿ ಪಟ್ಟ ಪರಿಶ್ರಮ ಸಾರ್ಥಕತೆಯಿಂದ ಈ ಭಾಗದಲ್ಲಿ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸಮ್ಮಿಶ್ರ ಸರಕಾರದಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ನೀರಾವರಿ ಸಚಿವ ಡಿ.ಕೆ.ಶಿವಕುಮಾರ ಅವರು ರೂ 97 ಕೋಟಿ ವೆಚ್ಚದ ಯೋಜನೆ ಮಂಜೂರು ನೀಡುವಲ್ಲಿ ಶ್ರಮಿಸಿದ್ದರಿಂದ ಈ ಭಾಗದ ನೀರಾವರಿ ಯೋಜನೆಗೆ ಮೊದಲ ಹಂತದಲ್ಲಿ ರೂ. 36 ಕೋಟಿ ಕೋಟಿಗಳ ಟೆಂಡರ ಕರೆಯಲಾಗಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಈ ಯೋಜನೆಯಿಂದ ಸಿಂದಗಿ ಪಟ್ಟಣ, ಚಿಕ್ಕಸಿಂದಗಿ, ಕನ್ನೋಳ್ಳಿ, ಕೊಕಟನೂರ, ಬೋರಗಿ, ಪುರದಾಳ, ಬಮ್ಮನಜೋಗಿ, ಓತಿಹಾಳ ಗ್ರಾಮಗಳ 1400ಕ್ಕೂ ಅಧಿಕ ಪ್ರದೇಶ ನೀರಾವರಿ ಸೌಲಭ್ಯಕ್ಕೆ ಒಳಪಡಲಿವೆ ಸಿಂದಗಿ ಪಟ್ಟಣದಲ್ಲಿ ಮುಂದಿನ 2055 ವರ್ಷ ವರೆಗಿನ ಜನತೆಗೆ ಶಾಶ್ವತ ಕುಡಿಯುವ ಯೋಜನೆಗೆ ರೂ.27.10 ಕೋಟಿ ವೆಚ್ಚದಲ್ಲಿ ಬಳಗಾನೂರ ಕೆರೆಯಿಂದ ನೀರು ಹರಿಸುವ ಯೋಜನೆ ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳಲಿದೆ ಹೀಗೆ ಅನೇಕ ಶಾಶ್ವತ ಕಾಮಗಾರಿಗಳ ಯೋಜನೆಗಳನ್ನು ತರುವ ಮೂಲಕ ಜನಮಾನಸದಲ್ಲಿ ದಿ.ಎಂ.ಸಿ.ಮನಗೂಳಿಯವರು ಉಳಿದುಕೊಂಡಿದ್ದಾರೆ ಎಂದು ವಿವರಿಸಿದರು.

- Advertisement -

ಈ ಸಂದರ್ಭದಲ್ಲಿ ಶಂಕರಲಿಂಗ ಮಾಗಣಗೇರಿ, ಎಂ.ಎಸ್.ಬಿರಾದಾರ ಶ್ರೀನಿವಾಸ ಓಲೇಕಾರ, ಸಿದ್ದು ಭೂಶೆಟ್ಟಿ, ಮಲ್ಲು ಅವಟಿ ಸೇರಿದಂತೆ ಅಅನೇಕರು ಮಾತನಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಮಹಿಳೆಯರು ಸೇರಿದಂತೆ ಯುವಕರು ದಿ.ಎಂ.ಸಿ.ಮನಗೂಳಿ ಅವರು ಭಾವಚಿತ್ರಕ್ಕೆ ತುಪ್ಪ ಹಾಗೂ ಹಾಲೆರೆದು ಅಭಿಷೇಕ ಮಾಡಿ ಸ್ಮರಿಸಿದರು. ಅಲ್ಲದೆ ನೀರಾವರಿ ಯೋಜನೆಗೆ ಶ್ರಮಿಸಿದ ಮುಖಂಡ ಅಶೋಕ ಮನಗೂಳಿಯವರಿಗೆ ಚಿಕ್ಕಸಿಂದಗಿ, ಬ್ಯಾಕೋಡ, ಕನ್ನೋಳ್ಳಿ, ಬಂದಾಳ ಸೇರಿದಂತೆ ವಿವಿಧ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಪಂಚಯ್ಯ ಹಿರೇಮಠ, ಗುರಣ್ಣಗೌಡ ಪಾಟೀಲ ನಾಗಾವಿ, ರೈತಮುಖಂಡ ಸಿದ್ರಾಮಪ್ಪ ರಂಜುಣಗಿ, ಸೋಮನಗೌಡ ಬಿರಾದಾರ, ಸಂಗಯ್ಯ ಹಿರೇಮಠ, ನಿಂಗಣ್ಣ ಗೊಬ್ಬೂರ, ಶಿವಣ್ಣ ಭೂಶೆಟ್ಟಿ, ಮಲ್ಲಿಕಾರ್ಜೂನ ಮಾಗಣಗೇರಿ, ಶಿವಯ್ಯ ಹಿರೇಮಠ, ಎಂ.ಡಿ.ಪಾಟೀಲ, ಸಂಗನಗೌಡ ಬಿರಾದಾರ, ರಮೇಶ ಹೆಬ್ಬಾಳ, ವಿ.ಬಿ.ಕುರುಡೆ, ಸದಾನಂದ ಹಿರೇಮಠ, ಡಾ. ಯಮನೇಶ ಮಾಗಣಗೇರಿ, ಷನ್ಮುಖ ವಾಲೀಕಾರ, ಅಂಬಣ್ಣ ಓಲೇಕಾರ, ದುಂಡಪ್ಪ ಜೋಗುರ, ಸಂಜೀವ ಬಮ್ಮನಳ್ಳಿ, ಮಹಾದೇವಿ ಕರಲಗಿ, ನೀಲಮ್ಮ ಮಠಪತಿ, ಮಲಕಮ್ಮ ಮೇತ್ರಿ, ಮಹಾದಧೇವಿ ಬಾಸಗಿ, ಬಸಮ್ಮ ಬಿರಾದಾರ, ಲಗಮವ್ವ ಮಾಗಣಗೇರಿ, ದುಂಡಮ್ಮ ಜಮಾದಾರ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.

- Advertisement -

ಗುರುನಾಥ ಮೈಂದದರಗಿ ಪ್ರಾರ್ಥಿಸಿದರು. ರೈತಮುಖಂಡ ಚಂದ್ರಕಾಂತ ಬೂದಿಹಾಳ ಸ್ವಾಗತಿಸಿದರು. ಪ್ರೊ.ಶಿವಪುತ್ರ ನಿಗಡಿ ಹಾಗೂ ಬಿ.ಎಸ್.ಅರಳಗುಂಡಗಿ ನಿರೂಪಿಸಿದರು. ಗುಂಡು ಮೋರಟಗಿ ವಂದಿಸಿದರು.


ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group