spot_img
spot_img

ಅಸಂಘಟಿತ ಕಾರ್ಮಿಕರು ಇ-ಶ್ರಮ ಯೋಜನೆಯಲ್ಲಿ ಸೇರಬೇಕು – ಈರಣ್ಣ ಕಡಾಡಿ

Must Read

- Advertisement -

ಮೂಡಲಗಿ: ಕಾರ್ಮಿಕರ ಬಗ್ಗೆ ಕಾಳಜಿಯಿಂದ ಕೇಂದ್ರ ಸರ್ಕಾರ ಅಸಂಘಟಿತ ಕಾರ್ಮಿಕ ರಾಷ್ಟ್ರೀಯ ಡಾಟಾ ಬೇಸ್ ಇ-ಶ್ರಮ ಯೋಜನೆ ಜಾರಿಗೆ ಬಂದಿದ್ದು, ಎಲ್ಲ ವರ್ಗದ ಅಸಂಘಟಿತ ಕಾರ್ಮಿಕರು ನೊಂದಣಿ ಮಾಡುವ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಲಹಾ ಸಮಿತಿ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಶುಕ್ರವಾರ ಆ 27 ರಂದು ಅರಭಾಂವಿ ವಿಧಾನಸಭಾ ಮತಕ್ಷೇತ್ರದ ಕಲ್ಲೋಳಿ ಪಟ್ಟಣ ಪಂಚಾಯತ ಆವರಣದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ಹಾಗೂ ಕಾರ್ಮಿಕ ಇಲಾಖೆಯಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದ ಈರಣ್ಣ ಕಡಾಡಿ ಅವರು, ಅಸಂಘಟಿತ ಕಾರ್ಮಿಕರು ಇ-ಶ್ರಮ ಯೋಜನೆಯಲ್ಲಿ 15 ರೂ. ಪಾವತಿಸಿ ನೋಂದಾಯಿಸಿಕೊಂಡರೆ 2 ಲಕ್ಷದವರೆಗೆ ಸಾಲ ಸಿಗಲಿದೆ. ಈಗಾಗಲೇ 16 ಲಕ್ಷ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ ಎಂದರು.

- Advertisement -

ಅಸಂಘಟಿತ ವಲಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು, ಪಶು ಸಂಗೋಪನಾಗಾರರು, ಬಡಗಿತನ, ಆಶಾ ಕಾರ್ಯಕರ್ತರು, ಪೋಟೋಗ್ರಾಫರ್, ಮನೆ ಕೆಲಸಕಾರರು, ಅಂಗಡಿ ವ್ಯಾಪಾರಸ್ಥರು, ಹೊಟೇಲ ಕಾರ್ಮಿಕರು ಸೇರಿದಂತೆ 28 ವಿವಿಧ ವೃತ್ತಿಯಲ್ಲಿನ ಕಾರ್ಮಿಕರು ಇ-ಶ್ರಮ ಯೋಜನೆಯಲ್ಲಿ ನೊಂದಾಯಿಸಿಕೊಂಡು ಇಲಾಖೆಯ ಯೋಜನೆಗಳ ಉಪಯೋಗ ಪಡೆಯಬೇಕೆಂದು ಹೇಳಿದರು.

ಕೋವಿಡ್-19 ಮೂರನೆಯ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂದರು. ಕಲ್ಲೋಳಿ, ನಾಗನೂರ, ತುಕ್ಕಾನಟ್ಟಿ ಗ್ರಾಮಗಳಿಗೆ ತೆರಳಿ ಪಂಚಾಯತ ಆವರಣದಲ್ಲಿ ಆಹಾರ ಸಾಮಗ್ರಿ ಕಿಟ್‍ಗಳನ್ನು ವಿತರಿಸಲಾಯಿತು.

ಕಲ್ಲೋಳಿ ಪಟ್ಟಣದ ಪ್ರಮುಖರಾದ ರಾವಸಾಹೇಬ ಬೆಳಕೂಡ, ಮಲ್ಲಪ್ಪ ಕಡಾಡಿ, ಈರನಗೌಡ ಪಾಟೀಲ, ಮಹಾದೇವ ಮಧಬಾಂವಿ, ಬಸವರಾಜ ಕಡಾಡಿ, ಗೋಕಾಕ ಕಾರ್ಮಿಕ ನೀರಿಕ್ಷಕ ಪಾಂಡುರಂಗ ಮಾವರಕರ, ಪಿಕೆಪಿಎಸ್ ಅಧ್ಯಕ್ಷ ಈರಪ್ಪ ಹೆಬ್ಬಾಳ, ಹಣಮಂತ ಸಂಗಟಿ, ಪ್ರಭು ಕಡಾಡಿ, ಶಂಕರ ಗೋರೋಶಿ, ಶ್ರೀಶೈಲ ತುಪ್ಪದ, ಈರಣ್ಣ ಮುನ್ನೋಳಿಮಠ, ಕೆಂಪಣ್ಣ ಮಕ್ಕಳಗೇರಿ, ಉಮೇಶ ಪಾಟೀಲ, ಬಸವರಾಜ ಭಜಂತ್ರಿ, ಬಾಳೇಶ ಸಕ್ರೆಪ್ಪಗೋಳ, ದುಂಡಪ್ಪ ನಂದಗಾಂವ, ಸುರೇಶ ಮಠಪತಿ, ಪುಂಡಲಿಕ ಅರಭಾವಿ, ಕುಮಾರ ಮರ್ದಿ, ಪಿರಾಜ ಗದಾಡಿ, ಪರಸಪ್ಪ ಹುಲಕುಂದ, ವೀರಭದ್ರ ನಾಂವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group