spot_img
spot_img

ಸಂಸ್ಕೃತಿಯು ಭಾರತೀಯರ ಅಸ್ಮಿತೆ, ಅದು ಹೊರಗಿನಿಂದ ಬರುವ ಕಲಿಕೆಯಲ್ಲ – ನಿರ್ಮಲಾನಂದ ಶ್ರೀ

Must Read

- Advertisement -

ಸಂಸ್ಕೃತಿಯು ಭಾರತೀಯರ ಅಸ್ಮಿತೆ, ಅದು ಹೊರಗಿನಿಂದ ಬರುವ ಕಲಿಕೆಯಲ್ಲ ಅಂತರಂಗದ ಸಂಸ್ಕಾರ ಎಂಬುದಾಗಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ  ವಹಿಸಿ ಆಶೀರ್ವಚನ ನೀಡಿದರು.

ದಿನಾಂಕ: 18.04.2024 ರಂದು ಗುರುವಾರ ಸಂಜೆ 5.00 ಗಂಟೆಗೆ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ವತಿಯಿಂದ ಶೇಷಾದ್ರಿಪುರಂ ಸಂಜೆ ಕಾಲೇಜು 2023-24 ನೇ ಶೈಕ್ಷಣಿಕ ವರ್ಷದಲ್ಲಿ NACC (ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ) ಯಿಂದ A ಶ್ರೇಣಿ ಮಾನ್ಯತೆ ಪಡೆದಿದ್ದು, ನ್ಯಾಕ್‍ನ ವೆಬ್ ಸೈಟ್ ನ ಪ್ರಕಾರ ಭಾರತದಲ್ಲಿ A ಶ್ರೇಣಿ ಪಡೆದ ಎರಡನೇ ಸಂಯೋಜಿತ ಸಂಜೆ ಕಾಲೇಜು ಹಾಗೂ ದಕ್ಷಿಣ ಭಾರತದಲ್ಲಿ A ಶ್ರೇಣಿ ಪಡೆದ ಮೊದಲ ಸಂಯೋಜಿತ ಸಂಜೆ ಕಾಲೇಜು ಎಂಬ ಪ್ರಶಂಸೆಗೆ ಪಾತ್ರವಾಗಿದೆ. ಈ ಶುಭ ಸಂದರ್ಭದಲ್ಲಿ ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಭಿನಂದನಾ ಸಮಾರಂಭವನ್ನು ಶೇಷಾದ್ರಿಪುರಂ ಶಿಕ್ಷಣದತ್ತಿ ಸಭಾಂಗಣದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ವತಿಯಿಂದ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಅಧ್ಯಕ್ಷರಾದ ಎನ್.ಆರ್.ಪಂಡಿತಾರಾಧ್ಯ ಮಾತನಾಡಿ, ಭಾರತೀಯರಾದ ನಮಗೆ ಸಂಸ್ಕೃತಿ ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಹೆಗ್ಗುರುತು ಎಂದು ಹೇಳಿದರು

- Advertisement -

ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಶಿಕ್ಷಣ ತಜ್ಞ ನಾಡೋಜ ಡಾ.ವೂಡೇ ಪಿ. ಕೃಷ್ಣ ಮಾತನಾಡಿ, ಶಿಕ್ಷಣ ಮತ್ತು ಸಂಸ್ಕಾರ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಗಳ ತಳಹದಿ ಪ್ರಪಂಚದಾದ್ಯಂತ ಇರುವ ಸಾವಿರಾರು ವಿದ್ಯಾರ್ಥಿಗಳು ವಿವೇಕಯುತ ಜೀವನ ಕಟ್ಟಿಕೊಳ್ಳಲು ನಮ್ಮ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ ಅವಿರತವಾಗಿ ಶ್ರಮಿಸಿದೆ, ನಮ್ಮ ಸಂಜೆ ಕಾಲೇಜಿನ ಸಾಧನೆ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದೆ ಈ ಸಾಧನೆಗೆ ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲರಿಗೆ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಅಭಿನಂದನೆಗಳನ್ನು ತಿಳಿಸಿದರು.

ಈ ಸಮಾರಂಭದಲ್ಲಿ ಶೇಷಾದ್ರಿಪುರಂ ಸಂಜೆ ಕಾಲೇಜು A ಶ್ರೇಣಿ ಮಾನ್ಯತೆ ಪಡೆಯಲು ಶ್ರಮಿಸಿದ ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಧರ್ಮದರ್ಶಿಗಳೂ ಆದ  ಡಬ್ಲ್ಯು ಡಿ ಅಶೋಕ್ ಅವರಿಗೆ ಹಾಗೂ ಕ್ರಿಯಾಶೀಲ ಪ್ರಾಂಶುಪಾಲರಾದ ಡಾ.ಎನ್.ಎಸ್. ಸತೀಶ್ ಅವರಿಗೆ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಸಂಯೋಜಕರಾದ ಶ್ರೀಮತಿ ನಾಗಸುಧಾ ಆರ್ ಇವರುಗಳಿಗೆ ಸನ್ಮಾನ ನೆರವೇರಿಸಲಾಯಿತು ಹಾಗೂ ಸಮಸ್ತ ಸಿಬ್ಬಂದಿವರ್ಗಕ್ಕೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾದ ಟಿ.ಎಸ್.ಹೆಂಜಾರಪ್ಪ, ಉಪಾಧ್ಯಕ್ಷರಾದ ಡಬ್ಲ್ಯು.ಹೆಚ್.ಅನಿಲ್ ಕುಮಾರ್, ಗೌರವ ಖಜಾಂಚಿಗಳಾದ ಬಿ.ಎಂ. ಪಾರ್ಥಸಾರಥಿ, ಗೌರವ ಜಂಟಿ ಕಾರ್ಯದರ್ಶಿಗಳಾದ ಎಸ್.ಶೇಷನಾರಾಯಣ, ಗೌರವ ಸಹಾಯಕ ಕಾರ್ಯದರ್ಶಿಗಳಾದ ಎಂ.ಎಸ್. ನಟರಾಜ್, ಪಿ.ಸಿ.ನಾರಾಯಣ ಅಧ್ಯಕ್ಷರು, ಅಡಳಿತ ಸಲಹಾ ಮಂಡಳಿ ಶೇಷಾದ್ರಿಪುರಂ ಸಂಜೆ ಕಾಲೇಜು
ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು.

- Advertisement -

ಬಿಬಿಎ ವಿಭಾಗದ ಸಂಯೋಜಕರಾದ  ವಿನಯ್ ಸಾಗರ್ ಎಲ್.ಎಸ್. ಕಾರ್ಯಕ್ರಮವನ್ನು ನಿರೂಪಿಸಿದರು, ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥರಾದ  ಧರೆಪ್ಪ ಕೊನ್ನೂರ್ ಅವರು ಕಾರ್ಯಕ್ರಮಕ್ಕೆ ವಂದನೆಗಳನ್ನು ಸಲ್ಲಿಸಿದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group