spot_img
spot_img

ರೋಗ ರುಜಿನಗಳಾದ ತಾಣವಾದ ಡಿ.ದೇವರಾಜ ಮಹಿಳಾ ಹಾಸ್ಟೆಲ್

Must Read

spot_img
- Advertisement -

ವಿಶೇಷ ವರದಿ : ಪಂಡಿತ ಯಂಪೂರೆ

ಸಿಂದಗಿ; ಸರ್ಕಾರವು ಗ್ರಾಮೀಣ ಮಟ್ಟದ ಬಡ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಸದ್ದುದೇಶದಿಂದ ವಸತಿ ನಿಲಯಗಳನ್ನು ಪ್ರಾರಂಭಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಆದರೆ ಸಿಂದಗಿ ನಗರದ ಹೃದಯ ಬಾಗದಲ್ಲಿರುವ ಹಿಂದುಳಿದ ವರ್ಗಗಳ ಇಲಾಖೆಯ ಡಿ.ದೇವರಾಜ ಮಹಿಳಾ ವಸತಿ ನಿಲಯದ ಸುತ್ತಲು ಕೊಳಚೆ ಆವರಿಸಿ ರೋಗ ರುಜಿನಗಳ ತಾಣವಾಗಿ ನಿರ್ಮಾಣವಾಗಿ ನಿತ್ಯ ವಿದ್ಯಾರ್ಥಿಯರು ಶಪಿಸುವಂತಾಗಿದೆ.

ಹೌದು. ಕರ್ನಾಟಕ ರಾಜ್ಯದ ಆಡಳಿತಾರೂಢ ಸರಕಾರ ಮಹಿಳೆಯರ ಸಬಲಿಕರಣಕ್ಕೆ ಗೃಹಲಕ್ಷ್ಮಿ, ಶಕ್ತಿ ಯೋಜನೆಯಂತಹ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದು ಉತ್ತೇಜನ ನೀಡುತ್ತಿದೆ ಅದಕ್ಕೆ ವಿರುದ್ದವಾಗಿ ಹಿಂದುಳಿದ ವರ್ಗಗಳ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ೧೨೫ ವಿದ್ಯಾರ್ಥಿನಿಯರಿಗಾಗಿ ನೂತನವಾಗಿ ಪ್ರಾರಂಭವಾಗಿದ್ದರು ಕೂಡಾ ಅಧಿಕಾರಿಗಳ ನಿರ್ಲಕ್ಷ ಧೋರಣೆಯಿಂದ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿ ಸರಕಾರದ ಅನುದಾನ ಪೋಲಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇದರ ಬಗ್ಗೆ ಅಧಿಕಾರಿಗೆ ವಸತಿ ನಿಲಯಕ್ಕೆ ಭೇಟಿ ನೀಡಿದ್ದ ಬಗ್ಗೆ ದೂರವಾಣಿ ಮೂಲಕ ವಿಚಾರಿಸಿದರೆ, ಕಳೆದ ತಿಂಗಳಲ್ಲಿ ಭೇಟಿ ನೀಡಿದ್ದೇನೆ ಸ್ವಚ್ಚತೆಯನ್ನು ಅವಲೋಕಿಸಿದ್ದೇನೆ ಸದ್ಯ ಮಹಿಳಾ ಆಯೋಗದ ಮೇಡಂ ಅವರು ಸಿಂದಗಿ ಪಟ್ಟಣಕ್ಕೆ ಆಗಮಿಸುತ್ತಿರುವುದರಿಂದ ಅಲ್ಲಿ ಬಿಜಿ ಆಗಿದ್ದೇನೆ ವಲಯ ಮೇಲ್ವಿಚಾರಕರಿಗೆ ತಿಳಿಸುವೆ ಎಂದು ಉಡಾಫೆ ಉತ್ತರ ನೀಡಿ ನುಣುಚಿಕೊಂಡರು.

- Advertisement -
oppo_0

ಹೊಸ ಹಾಸ್ಟೇಲ ಪ್ರಾರಂಭವಾಗಿನಿಂದಲೂ ಇದರ ಸುತ್ತಲು ಕೊಳಚೆ ನಿರ್ಮಾಣವಾಗಿದಲ್ಲದೆ ಮುಂದೆಯು ಕೂಡಾ ದುರ್ಗಂಧ ಬೀರುವ ಸದಾ ಮಲೀನ ನೀರು ತುಂಬಿದ ತೆರದ ಗಟಾರು ಇದರಿಂದ ಸೊಳ್ಳೆಗಳ ತಾಣವಾಗಿ ನಿರ್ಮಾಣವಾದ ವಾತಾವರಣದಿಂದ ಮೈ ಜಲ್ ಎನಿಸಿಕೊಂಡು ಊಟ ಮಾಡುವ ದುಸ್ಥಿತಿ ಉಂಟಾಗಿದೆ ಇದರ ಬಗ್ಗೆ ಮೇಲಾಧಿಕಾರಿಗಳು ಭೇಟಿ ನೀಡದೇ ನಿರ್ಲಕ್ಷ ಧೋರಣೆ ತಾಳಿದ್ದಾರೆ ಇಲ್ಲಿನ ಸಿಬ್ಬಂದಿಗೆ ತಿಳಿಸಿದರೆ ಶಿಕ್ಷಣಕ್ಕೆ ಒತ್ತು ನೀಡಬೇಕೆ ವಿನಃ ಸರಕಾರ ನೀಡುವ ಸೌಲಭ್ಯಗಳಿಗೆ ಬಾಯಿ ತೆರೆಯಬಾರದು ಎನ್ನುವ ಉತ್ತರ ಸಿಗುತ್ತದೆ ಕಾರಣ ಈ ಬಡ ವಿದ್ಯಾರ್ಥಿನಿಯ ಗೋಳು ಕೇಳುವವರಿಲ್ಲದಂತಾಗಿದೆ.

– ಹೆಸರು ಹೇಳಲು ಇಚ್ಚಿಸದ ವಿದ್ಯಾರ್ಥಿನಿ

೨೦೧೮ರಲ್ಲಿ ವಸತಿ ನಿಲಯದ ಕಟ್ಟಡ ಮುಗಿದು ೨೦೨೩ರಲ್ಲಿ ಇದಕ್ಕೆ ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದೇ ವಸತಿ ನಿಲಯ ಕಟ್ಟಡ ಲೋಕಾರ್ಪಣೆಗೊಳಿಸಿ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಮೂಲ ಸೌಕರ್ಯಗಳನ್ನು ಕ್ರೂಢೀಕರಣ ಮಾಡಲಾಗಿದೆ. ವಸತಿ ನಿಲಯದ ಸುತ್ತಲು ಕೊಳಚೆ ನಿರ್ಮಾಣವಾದ ಬಗ್ಗೆ ನನ್ನ ಗಮನಕ್ಕಿಲ್ಲ ಸದ್ಯ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಆಗಮಿಸುವ ಹಿನ್ನೆಲೆ ಕೆಲಸದ ಒತ್ತಡವಿದೆ ನಂತರ ನೋಡುವೆ.

- Advertisement -

    – ರವಿಂದ್ರ ಭಂಥನಾಳ
ವಲಯ ವಿಸ್ತಿರ್ಣಾಧಿಕಾರಿಗಳು.
ಹಿಂದೂಳಿದ ವರ್ಗಗಳ ಇಲಾಖೆ ಸಿಂದಗಿ.

ವಸತಿ ನಿಲಯವು ಪಟ್ಟಣದ ಹೃದಯ ಭಾಗದಲ್ಲಿದ್ದು ಇದರ ಸುತ್ತಲು ಮನೆಗಳಿದ್ದು ಆ ಮನೆಗಳಲ್ಲಿನ ಮಲೀನವಾದ ಕಸ ವಸತಿ ನಿಲಯದ ಮುಂದೆ ಹಾಕುತ್ತಿದ್ದು ತೆರೆದ ಗಟಾರುಗಳಲ್ಲಿ ಬಿದ್ದು ದುರ್ಗಂಧ ಸೂಸುತ್ತಿರುವ ಬಗ್ಗೆ ಪುರಸಭೆಯ ಅಧಿಕಾರಿಗಳ ಗಮನಕ್ಕೆ ೨-೩ ಬಾರಿ ಮೌಖಿಕವಾಗಿ ಹಾಗೂ ಲಿಖಿತವಾಗಿ ದೂರು ಸಲ್ಲಿಸಿದರೂ ಕೂಡಾ ಪ್ರಯೋಜನ ಕಂಡಿಲ್ಲ. ಅಲ್ಲದೆ ಕಸ ವಿಲೇವಾರಿ ವಾಹನಕ್ಕೆ ತಿಳಿಸಿದರೆ ಹಾಸ್ಟೆಲ್ ಮುಂದೆ ಬರುವುದಕ್ಕೆ ಆಗುವುದಿಲ್ಲ ಮುಖ್ಯ ರಸ್ತೆಗೆ ತಂದು ಕಸ ನೀವೆ ಹಾಕಿ ಎನ್ನುವ ಉತ್ತರ ನೀಡುತ್ತಾರೆ ಸುತ್ತಲಿನ ಮನೆಗಳ ಮಹಿಳೆಯರಿಗೂ ಕಸ ಹಾಕಬೇಡಿ ಎಂದು ಹೇಳಿದರು ಕೇಳುತ್ತಿಲ್ಲ ನಾವೇನು ಮಾಡೋದು.

 – ವಿಜಯಲಕ್ಷ್ಮಿ ಹದಗಲ್
ವಸತಿ ನಿಲಯ ಪಾಲಕರು ಸಿಂದಗಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಮುಖ್ಯಮಂತ್ರಿಗಳಿಗೆ ಮಾಧ್ಯಮ ಲೋಕದ ನೂತನ ಪುಸ್ತಕ: ಹಿರಿಯರ ಸೇವೆ ಶ್ಲಾಘನೀಯ ಎಂದ ಸಿಎಂ

ಬೆಂಗಳೂರು: ಅಮೃತ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಾಧ್ಯಮದ ಹಿರಿಯ ಪತ್ರಕರ್ತರ ಮನೆಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವೇ ಭೇಟಿ ನೀಡಿ ಕುಟುಂಬಸ್ಥರ ಸಮ್ಮುಖದಲ್ಲಿ ಹಿರಿಯರನ್ನು ಗೌರವಿಸಿರುವುದು ಅಭಿನಂದನಾರ್ಹವಾದದ್ದು...
- Advertisement -

More Articles Like This

- Advertisement -
close
error: Content is protected !!
Join WhatsApp Group