spot_img
spot_img

ಕಾಂಗ್ರೆಸ್ ಸರಕಾರದಲ್ಲಿ ದಲಿತರ ಹಣ ಬೇರೆ ಯೋಜನೆಗೆ ಬಳಸಿದ್ದು ಪ್ರಶ್ನೆ ಮಾಡಿಲ್ಲ; ಜಿಗಜಿಣಗಿ

Must Read

- Advertisement -

ಸಿಂದಗಿ: ಕಾಂಗ್ರೆಸ್ ಪಕ್ಷದವರು ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾತನಾಡದೇ ಬರೀ ರಮೇಶ ಜಿಗಜಿಣಗಿ ಟೀಕಿಸುವುದರಲ್ಲಿ ಕಾಲಹಣರಣ ಮಾಡಲು ಮುಂದಾಗಿದ್ದಾರೆ. ರಾಜ್ಯ ಸರಕಾರದಲ್ಲಿ ದಲಿತರಿಗೆ ಬಳಕೆ ಮಾಡಲಾಗುತ್ತಿರುವ ಎಸ್‍ಸಿಪಿ ಟಿಎಸ್ಪಿ ಅನುದಾನ ಅಂದಾಜು 25 ಸಾವಿರ ಕೋಟಿ ಬೇರೆ ಯೋಜನೆಗೆ ಬಳಕೆ ಮಾಡಿದ್ದು ಪ್ರಶ್ನೆ ಮಾಡದಿರುವುದು ದಲಿತರಿಗೆ ಮಾಡಿದ ದೊಡ್ಡ ದುರಂತವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಿಗಜೀಣಗಿ ಚಾಟಿ ಬಿಸಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ವರ್ಷದ ಅವಧಿಯಲ್ಲಿ ಸಾಕಷ್ಠು ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ ಅದನ್ನು ಪ್ರಚಾರಕ್ಕೆ ತಂದಿಲ್ಲ. ಸದ್ಯದ ಲೋಕಸಭಾ ಚುನಾವಣಾ ಪ್ರಚಾರವನ್ನು ಹೊರ್ತಿ ರೇವಣಸಿದ್ದೇಶ್ವರ ಆಶ್ರಮದಿಂದ ಪ್ರಾರಂಭಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅಲೆ ಇಡೀ ದೇಶಾದ್ಯಂತ ಪ್ರಾರಂಭವಾಗಿದ್ದು ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಇದೇ ನಾನು ಸಮಾಜ ಕಲ್ಯಾಣ ಸಚಿವರಿದ್ದ ಸಂದರ್ಭದಲ್ಲಿ ದಲಿತರಿಗೆ ಬಳಸಬೇಕಾದ ಅನುದಾನ ಬೇರೆ ಯೋಜನೆಗೆ ವರ್ಗಾವಣೆ ಮಾಡುತ್ತೇವೆ ಎಂದು ಚರ್ಚೆ ನಡೆದರೆ ಅಂದು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾದಾಗ ಆ ಅನುದಾನ ದಲಿತರ ಬಳಕೆ ನೀಡುತ್ತೇನೆ ಎಂದಾಗ ರಾಜೀನಾಮೆ ಹಿಂಪಡೆದಿದ್ದೇನೆ ಇಂದು ದಲಿತ ಎನಿಸಿಕೊಂಡ ಎಚ್.ಸಿ.ಮಹದೇವಪ್ಪ ಅವರೇ ಸಮಾಜ ಕಲ್ಯಾಣ ಸಚಿವರಿದ್ದಾರೆ. ಎಸ್‍ಸಿಪಿ ಅನುದಾನದ ಬಗ್ಗೆ ಏಕೆ ಚರ್ಚೆ ನಡೆಸದೇ ದಲಿತರಿಗೆ ಅನ್ಯಾಯವೆಸಗುತ್ತಿದ್ದಾರೆ. ದಲಿತರ ಬಗ್ಗೆ ಚಿಂತನೆ ನಡೆಸದವರು ಹೇಗೆ ನ್ಯಾಯ ಒದಗಿಸಿಕೊಡುತ್ತಾರೆ. ಟೀಕೆ ಮಾಡುವುದನ್ನು ಬಿಟ್ಟು ನಿಮ್ಮ ಸರಕಾರದ ಸಾಧನೆ ತಿಳಿಸಿ ಎಂದು ಎದುರುತ್ತರ ನೀಡಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಮಾತನಾಡಿ, ಕಾಂಗ್ರೆಸ್ಸಿಗರಿಗೆ  ಅಭಿವೃದ್ಧಿ ಮಾತನಾಡಲು ಯಾವುದೇ ವಿಷಯವಿಲ್ಲ ಅದಕ್ಕೆ ಅನಗತ್ಯವಾಗಿ ಜಿಗಜಿಗಣಗಿಯವರನ್ನು ಹೀಯಾಳಿಸುವ ಟೀಕೆ ಟಿಪ್ಪಣೆ ಮಾಡುವ ಮೂಲಕ ಅವಮಾನಿಸುತ್ತಿದ್ದಾರೆ. ಅವರ 10 ವರ್ಷದ ಅವಧಿಯಲ್ಲಿ ಈ ಜಿಲ್ಲೆಯ ಅಭಿವೃಧ್ಧಿಗೆ 1 ಲಕ್ಷ ಕೋಟಿ ಅನುದಾನ ತಂದಿದ್ದಾರೆ ಇದರ ಬಗ್ಗೆ ಪುಸ್ತಕ ರೂಪದಲ್ಲಿ ಕೈಪಿಡಿ ಹೊರ ತಂದಿದ್ದಾರೆ ಅದರ ಸತ್ಯಾಸತ್ಯತೆಯನ್ನು ಅವಲೋಕನ ಮಾಡಿ ವಿನಾಕಾರಣ ಚರ್ಚೆ ಬೇಡ. 10 ವರ್ಷದ ಅವಧಿಯಲ್ಲಿ ಯಾವ ಕ್ಷೇತ್ರ ನೋಡಿಲ್ಲ ಅನ್ನುವವರು ಒಂದು ಪಕ್ಷದ ಜಿಲ್ಲಾಧ್ಯಕ್ಷನಾಗಿ 8 ಕ್ಷೇತ್ರಗಳನ್ನು ಒಂದು ಬಾರಿಯಾದವರು ನೋಡಿದ್ದಾರಾ ಎಂದು ಪ್ರಶ್ನೆ ಎಸೆದರು.     

- Advertisement -

ಬೇರೆಯವರ ಮೇಲೆ ಕೆಸರು ಎರಚುವುದನ್ನು ಬಿಟ್ಟು ನಿಮ್ಮ ಸಾಧನೆ ಬಗ್ಗೆ ಹೇಳಿ. ಈ ಬಾರಿಯ ಚುನಾವಣೆಯಲ್ಲಿ ಜಿಗಜಿಣಗಿ ಆಗುವಲ್ಲಿ ಯಾರಿಂದಲೂ ತಪ್ಪಿಸಲು ಆಗದು ಅಲ್ಲದೆ ದೇಶದ ಪ್ರಧಾನಿ ಮೋದಿ ಅವರು ಆಗುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.

ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿ, ಬಂಜಾರ ಸಮುದಾಯಕ್ಕೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ವಿನಾಕಾರಣ ಗೊಂದಲ ಸೃಷ್ಟಿಸಿದ್ದಾರೆ ನಮ್ಮ ಪಕ್ಷದಿಂದ ಬಂಜಾರ ಸಮುದಾಯಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಕಾಂಗ್ರೆಸ್‍ನವರು ರಾಜ್ಯದಲ್ಲಿ ಒಬ್ಬರಿಗೂ ಟಿಕೇಟ ನೀಡಿಲ್ಲ ಆದರೆ ಬಿಜೆಪಿಯಲ್ಲಿ ಎಲ್ಲ ಸಮುದಾಯಕ್ಕೆ ನ್ಯಾಯ ಕೊಟ್ಟಂತೆ ಕಲಬುರ್ಗಿಗೆ ಬಂಜಾರ ಸಮುದಾಯಕ್ಕೆ ಟಿಕೇಟ್ ನೀಡಿ ನ್ಯಾಯ ಒದಗಿಸಿಕೊಟ್ಟಿದೆ. ವಿನಾಕಾರಣ ಟೀಕೆ ಟಿಪ್ಪಣೆ ಬಿಟ್ಟು ಚುನಾವಣೆ ಎದುರಿಸಿ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಸಿದ್ದು ಬುಳ್ಳಾ, ಸಿದ್ದಸಲಿಂಗಯ್ಯ ಹಿರೇಮಠ ಇದ್ದರು.

- Advertisement -
- Advertisement -

Latest News

ಸಿಂದಗಿ ಅಧ್ಯಕ್ಷರಾಗಿ ಶಾಂತವೀರ, ಉಪಾಧ್ಯಕ್ಷರಾಗಿ ರಾಜಣ್ಣಿ ಆಯ್ಕೆ

ಸಿಂದಗಿ; ಪಟ್ಟಣದ ಪುರಸಭೆಯ ಅಧ್ಯಕ್ಷ, ಉಪಾದ್ಯಕ್ಷರ ಅವಧಿ ಮುಗಿದು ಹಲವು ವರ್ಷಗಳು ಕಳೆದಿತ್ತು ಅದು ಅ. ೨೮ ರಂದು ಚುನಾವಣೆ ಪ್ರಕ್ರಿಯೆ ಪ್ರಾರಂಭಿಸಿ ಸೆ.೯ ದಿನಾಂಕ...
- Advertisement -

More Articles Like This

- Advertisement -
close
error: Content is protected !!
Join WhatsApp Group