spot_img
spot_img

ಕಲ್ಲೋಳಿಯ ಶಿವಾ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಗೆ ರೂ.52.51 ಲಕ್ಷ ಲಾಭ

Must Read

- Advertisement -

ಮೂಡಲಗಿ: ‘ಕಲ್ಲೋಳಿಯ ಶಿವಾ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಯು 2023-24ನೇ ಆರ್ಥಿಕ ವರ್ಷದ ಕೊನೆಯಲ್ಲಿ ರೂ.52.51 ಲಕ್ಷ ನಿವ್ವಳ ಲಾಭವನ್ನು  ಪಡೆದು ಪ್ರಗತಿಯಲ್ಲಿ ಸಾಗುತ್ತಲಿದೆ’ ಎಂದು ಸೊಸಾಯಿಟಿಯ ಅಧ್ಯಕ್ಷ ಗಿರಿಮಲ್ಲಪ್ಪ ಎಂ. ಸವಸುದ್ದಿ ಅವರು ತಿಳಿಸಿದರು.

ಸೊಸಾಯಿಟಿಯ ಆಡಳಿತ ಮಂಡಳಿಯ ಸಭಾ ಭವನದಲ್ಲಿ ಜರುಗಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಸೊಸೈಟಿಯಲ್ಲಿ 1975 ಸದಸ್ಯರಿದ್ದು ರೂ. 44.67 ಲಕ್ಷ ಶೇರು ಬಂಡವಾಳ, ರೂ.1.89 ಕೋಟಿ ನಿಧಿಗಳನ್ನು ಹೊಂದಿದೆ ಎಂದರು.

ಸೊಸಾಯಿಟಿಯು ರೂ.14.14 ಕೋಟಿ ದುಡಿಯುವ ಬಂಡವಾಳ, ರೂ.11.14 ಕೋಟಿ ಠೇವುಗಳನ್ನು ಸಂಗ್ರಹಿಸಿದ್ದು, ಈ ವರೆಗೆ ರೂ.12.70 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲವನ್ನು ವಿತರಿಸಲಾಗಿದೆ ಎಂದರು. 

- Advertisement -

ಸಂಸ್ಥೆಯ ಉಪಾಧ್ಯಕ್ಷ ರೇವಪ್ಪ ಮರ್ದಿ, ನಿರ್ದೇಶಕರಾದ ಅಶೋಕ ಮಕ್ಕಳಗೇರಿ, ಮಾರುತಿ ಹೂಗಾರ, ಅಡಿವೆಪ್ಪ ಸವಸುದ್ದಿ, ಶಶಿಕಾಂತ ಕಡಲಗಿ, ಬಾಳಪ್ಪ ಕಡಾಡಿ, ಸುರೇಶ ತಹಶೀಲ್ದಾರ್, ಶಿವಾನಂದ ಹೆಬ್ಬಾಳ, ಭೀಮಪ್ಪ ಪಾಗಾದ, ಹನಮಂತ ಕುರಬೇಟ, ಮುತ್ತೆಪ್ಪ ಭಜಂತ್ರಿ, ಚಂದ್ರಶೇಖರ ಕಲಾಲ, ಲೋಳಸೂರ ಶಾಖೆ ಅಧ್ಯಕ್ಷ ಮನೋಹರ ಗಡಾದ, ಸಾವಳಗಿ ಶಾಖಾ ಅಧ್ಯಕ್ಷ ಅಣ್ಣಪ್ಪ ಬಡಿಗೇರ, ಬೈಲಹೊಂಗಳ ಶಾಖಾ ಅಧ್ಯಕ್ಷ ಗಂಗಪ್ಪ ಗುಗ್ಗರಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಸಿದ್ದಪ್ಪ ಮಾಯನ್ನವರ ಇದ್ದರು.

- Advertisement -
- Advertisement -

Latest News

ಕನ್ಯಾಕುಮಾರಿಯಲ್ಲಿ ಮೋದಿ ಧ್ಯಾನ ಆರಂಭ

ತಿರುವನಂತಪುರಂ - ಲೋಕಸಭಾ ಚುನಾವಣೆಯ ಕೊನೆಯ ಹಂತದ ಚುನಾವಣಾ ಪ್ರಚಾರ ಮುಗಿಸಿದ ಕೂಡಲೆ ನರೇಂದ್ರ ಮೋದಿ ತಮ್ಮ ೪೫ ತಾಸುಗಳ ಧ್ಯಾನ ಪೂರೈಸಲು ತಮಿಳುನಾಡಿನ ಕನ್ಯಾಕುಮಾರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group