spot_img
spot_img

ಬೆಟಗೇರಿಯಲ್ಲಿ ಶೀಘ್ರವೇ ಡಿಸಿಸಿ ಬ್ಯಾಂಕ್ ಶಾಖೆ – ಸತೀಶ ಕಡಾಡಿ

Must Read

- Advertisement -

ಕೌಜಲಗಿ(ಬೆಟಗೇರಿ): ಗ್ರಾಮೀಣ ಭಾಗದ ಆರ್ಥಿಕ ಅಭ್ಯುಧಯಕ್ಕೆ ಹಣಕಾಸು ಸಂಸ್ಥೆಗಳು ಅವಶ್ಯಕತೆ ಇದ್ದು ಬೆಟಗೇರಿ ಗ್ರಾಮದಲ್ಲಿ ಶೀಘ್ರದಲ್ಲಿಯೇ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಶಾಖೆ ಪ್ರಾರಂಭಿಸಲಾಗುವುದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.

ಸಮೀಪದ ಬೆಟಗೇರಿ ಗ್ರಾಮಕ್ಕೆ ಶುಕ್ರವಾರ ಬಿಡಿಸಿಸಿ ಬ್ಯಾಂಕ ಶಾಖೆ ಪ್ರಾರಂಭಿಸಲು ರಚಿಸಿದ ಕಮೀಟಿ ಸದಸ್ಯರು ಭೇಟಿ ನೀಡಿದ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ಮಾತನಾಡಿ ಬೆಟಗೇರಿ ಹಾಗೂ ಸುತ್ತಮುತ್ತಲಿನ ಜನರ ಬೇಡಿಕೆಯಾದ ಬಿಡಿಸಿಸಿ ಬ್ಯಾಂಕ ಶಾಖೆ ತೆರೆಯುವ ಸಲುವಾಗಿ ಅಧ್ಯಕ್ಷ ರಮೇಶ ಕತ್ತಿ ಅವರು ಕಮೀಟಿ ರಚಿಸಿದ್ದಾರೆ ಎಂದರು.ಶಾಖೆ ಪ್ರಾರಂಭವಾದ ನಂತರ ಎಲ್ಲ ಸಹಕಾರಿಗಳು ಶಾಖೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ಕೇಳಿಕೊಂಡರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಹಕಾರ ವಲಯಕ್ಕೆ ಸೂಕ್ತ ಉತ್ತೇಜನ ನೀಡುತ್ತಿದ್ದು ರಾಜ್ಯದಲ್ಲಿ 559 ಪ್ರಾಥಮಿಕ ಕೃಷಿ ಸಹಕಾರ ಸಂಘಗಳನ್ನು ಸಾಮಾನ್ಯ ಸೇವಾ ಕೇಂದ್ರಗಳಾಗಿ ಮಾಡಲಾಗಿದೆ. ಪಿಕೆಪಿಎಸ್‌ಗಳು ರೈತರ ಬೆನ್ನಿಗೆ ನಿಂತಿವೆ, ದೇಶದಲ್ಲಿ ಸಹಕಾರಿ ಕ್ಷೇತ್ರ ಬೆಳೆದರೆ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಸಹಕಾರಿ ಕ್ಷೇತ್ರ ಇನಷ್ಠು ಹೆಮ್ಮರವಾಗಿ ಬೆಳೆಯಲಿ ರೈತರು, ಬಡವರು, ಕೂಲಿಕಾರ್ಮಿಕರು ಇದರ ಉಪಯೋಗ ಆರ್ಥಿಕವಾಗಿ ಮುಂದೆ ಬರಬೇಕೆಂದರು. ಬೆಟಗೇರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು,ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಸೌಹಾರ್ದ ಸಹಕಾರಿ ಸಂಘ ಸಂಸ್ಥೆಗಳ ನಿರ್ದೇಶಕರು, ಸದಸ್ಯರು ಆದಷ್ಟೂ ಬೇಗ ಬಿಡಿಸಿಸಿ ಬ್ಯಾಂಕ ಶಾಖೆ ಪ್ರಾರಂಭಿಸುವಂತೆ ನಿರ್ದೇಶಕ ಸತೀಶ ಕಡಾಡಿ ಅವರಿಗೆ ಮನವಿ ಸಲ್ಲಿಸಿದರು.

- Advertisement -

ಇದೇ ಸಂದರ್ಭದಲ್ಲಿ ಬೆಟಗೇರಿ ಸುತ್ತಮುತ್ತಲಿನ ಸಂಘ ಸಂಸ್ಥೆಗಳ ಪರವಾಗಿ ಬಾಳೇಶ ಗೌಡರ ಸೇರಿದಂತೆ ಅನೇಕ ಸಹಕಾರಿಗಳು ಬಿಡಿಸಿಸಿ ಬ್ಯಾಂಕ ನಿರ್ದೇಶಕ ಸತೀಶ ಕಡಾಡಿ ಅವರನ್ನು ಸನ್ಮಾನಿಸಲಾಯಿತು.

ದಿ ಬಿಡಿಸಿಸಿ ಬ್ಯಾಂಕ ಅಧಿಕಾರಿ ಶಶಿಧರ ಹಾದಿಮನಿ, ಶಾಖಾ ನಿಯಂತ್ರಣ ಮತ್ತು ತಪಾಸಣಾ ವಿಭಾಗ ಉಪಪ್ರಧಾನ ವ್ಯವಸ್ಥಾಪಕ ಎ ಸಿ ಕಲ್ಮಠ ಮಾತನಾಡಿದರು.

ಬೆಟಗೇರಿ ಗ್ರಾಮದ ಪ್ರಮುಖರಾದ ಬಸವಂತ ಕೋಣಿ,ತಾಪಂ ಮಾಜಿ ಸದಸ್ಯ ಲಕ್ಷ್ಮಣ ನೀಲನ್ನವರ,ಶ್ರೀಶೈಲ ಗಾಣಿಗಿ,ಸುರೇಶ ಸಿದ್ನಾಳ,ಶಿವಾಜಿ ನೀಲನ್ನವರ,ಈರಪ್ಪ ದೇಯನ್ನವರ, ಈಶ್ವರ ಮುಧೋಳ, ಶ್ರೀಕಾಂತ ಕರೆಪ್ಪಗೋಳ, ಈರಯ್ಯ ಹೀರೆಮಠ, ಮಾಯಪ್ಪ ಬಾಣಸಿ, ಸುಭಾಸ ಜಂಬಗಿ, ಡಿಸಿಸಿ ಬ್ಯಾಂಕ್ ಸುನೀಲ್ ಪಾಟೀಲ, ಟಿಸಿಓ ಮಹಾಂತೇಶ ಕುರಬೇಟ, ಎಂ ಐ ಮೋದಗಿ, ವಿನೋದ ವಾಲಿ ಸೇರಿದಂತೆ ಅನೇಕ ಸಹಕಾರಿಗಳು, ವ್ಯಾಪಾರಸ್ಥರು, ಪ್ರಗತಿಪರ ರೈತರು, ಸಹಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group