spot_img
spot_img

ಅರಭಾವಿ ಶಾಸಕರಿಂದ ತುಚ್ಛ ರಾಜಕಾರಣ – ಲಕ್ಕಣ್ಣ ಸವಸುದ್ದಿ ಆರೋಪ

Must Read

spot_img

ಸರ್ಕಾರಿ ಅಧಿಕಾರಿಗಳ ವಾಹನದಲ್ಲೆ ಅಕ್ರಮ ಸಾಗಾಟ ನಡೆಯಬಹುದು- ಗುರು ಗಂಗಣ್ಣವರ

ಮೂಡಲಗಿ: ಮೂಡಲಗಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬರುವ ಬ್ಯಾನರ್ ಗಳನ್ನು ಶಾಸಕರ ಬೆಂಬಲಿಗರು ರಾತೋರಾತ್ರಿ ಹರಿದು ಹಾಕುತ್ತಿದ್ದು ಇಂಥ ತುಚ್ಛ ರಾಜಕೀಯವನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಡಬೇಕು ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಕಟುವಾಗಿ ನುಡಿದರು.

ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾನು ಸತ್ಯವನ್ನೇ ನುಡಿಯುತ್ತೇನೆ ಸತ್ಯವನ್ನಲ್ಲದೆ ಬೇರೇನೂ ಹೇಳುವುದಿಲ್ಲ ಎಂದು ಆರಂಭಿಸಿದ ಅವರು, ಸಿದ್ಧರಾಮಯ್ಯ ಅವರ ಬ್ಯಾನರ್ ಹರಿಯುವ ಮೂಲಕ ಶಾಸಕರು ಹಾಲುಮತದ  ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಬೇರೆ ಸಮಾಜದವರು ಬೆಳೆಯುವುದನ್ನು ಇವರು ಸಹಿಸುವುದಿಲ್ಲ ಎಂಬುದು ಇದರಿಂದ ಗೊತ್ತಾಗುತ್ತದೆ.

ಇಂಥ ಮನಸ್ಥಿತಿ ಒಳ್ಳೆಯದಲ್ಲ. ಹೋಗುವಾಗ ನಾವೇನೂ ಜೊತೆಯಲ್ಲಿ ಕೊಂಡೊಯ್ಯುವುದಿಲ್ಲ. ಹೀಗೆ ಮಾಡುತ್ತಿರುವುದು ಶಾಸಕರು ಹತಾಶರಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದರು.

ಬ್ಯಾನರ್ ಹರಿದ ಬಗ್ಗೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಲಾಗಿದೆ ಎಂದ ಅವರು, ಉಪ್ಪಾರ ಸಮಾಜದ ಮುಖಂಡ ಹಂದಿಗುಂದ ಅವರ ಬ್ಯಾನರ್ ಗಳನ್ನೂ ಹರಿದು ಹಾಕಿದ್ದಾರೆ ಇದೂ ಕೂಡ ಖಂಡನೀಯ.

ಇದಷ್ಟೇ ಅಲ್ಲದೆ ಶಾಸಕರೇ, ಹಿಂದೆ  ನಿಮ್ಮದೇ ಪಕ್ಷದ ರಾಜ್ಯ ಸಭಾ ಸದಸ್ಯರ ಕಾರಿನ ಮೇಲೆ ಕಲ್ಲು ಹಾಕಿ ಪಂಚಮಸಾಲಿ ಸಮಾಜಕ್ಕೆ ಅವಮಾನ ಮಾಡಿದ್ದೀರಿ ನಿಮಗಿಂತ ಹಿರಿಯರಾದ ಅವರಿಗೆ ಅವಮಾನ ಮಾಡಿದ್ದು ಯಾವ ರೀತಿಯ ರಾಜಕೀಯ ಎಂದು ಪ್ರಶ್ನೆ ಮಾಡಿದರು.

ಜತ್ತ ಜಾಂಬೋಟಿ ಹೆದ್ದಾರಿ ಸಿದ್ಧರಾಮಯ್ಯನವರ ಕೊಡುಗೆ, ಮೂಡಲಗಿ ತಾಲೂಕಾಗಲು ಸಿದ್ಧರಾಮಯ್ಯ ಕಾರಣ, ನೀವು ಬರೀ ಸುಣ್ಣ ಬಣ್ಣ ಹಚ್ಚುವ ಕೆಲಸ ಮಾಡಿದ್ದೀರಿ.

ಇನ್ನೊಬ್ಬ ನಾಯಕರಿಗೆ, ಸಮಾಜಕ್ಕೆ ಅಪಮಾನ ಮಾಡುವ ಕೆಲಸ ಮಾಡಿದರೆ ಒಳ್ಳೆಯದಾಗುವುದಿಲ್ಲ. ಗುರು ಗಂಗಣ್ಣವರ ಮೇಲೆ ಹಲ್ಲೆ ಮಾಡಿದೀರಿ ಅಷ್ಟೇ ಯಾಕೆ ಸ್ವತಃ ನನ್ನ ಮೇಲೆಯೇ ಹಲ್ಲೆ ಮಾಡುವ ಸಂಭವ ಇದೆಯೆಂದು ಗೊತ್ತಾಗಿ ನಾನು ಗೃಹ ಸಚಿವರಿಗೆ ದೂರು ನೀಡಿ ತಪ್ಪಿಸಿಕೊಂಡಿದ್ದೇನೆ ಅದರ ಬಗ್ಗೆ ಈಗ ಬಹಿರಂಗ ಮಾಡುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಲೇ ಹೀಗೆ, ಇನ್ನು ಚುನಾವಣೆಯಲ್ಲಿ ಎಂಥ ಅಕ್ರಮಗಳು ನಡೆಯಬಹುದು ಎಂದು ಊಹಿಸಿ ಎಂದ ಅವರು, ಚುನಾವಣಾ ಅಧಿಕಾರಿಗಳನ್ನು ಬೇರೆ ಕಡೆಯಿಂದ ಕರೆಸಿಕೊಳ್ಳಬೇಕು ಇಲ್ಲದಿದ್ದರೆ ಅರಭಾವಿ ಕ್ಷೇತ್ರದಲ್ಲಿ ಬೂತ್ ಕ್ಯಾಪ್ಚರಿಂಗ ನಂಥ ಘಟನೆಗಳು ನಡೆಯಬಹುದು. ಇದನ್ನು ತಡೆಯಬೇಕು ಎಂದು ಸವಸುದ್ದಿ ಆಗ್ರಹಿಸಿದರು.

ಗುರು ಗಂಗಣ್ಣವರ ಮಾತನಾಡಿ, ಇಂಥ ಬೆಳವಣಿಗೆಗಳು ಒಳ್ಳೆಯದಲ್ಲ. ಈ ಅಧಿಕಾರಿಗಳು ಬ್ಯಾನರ್ ಗಳನ್ನು  ತೆರವುಗೊಳಿಸಲು ನಮಗಷ್ಟೇ ಒತ್ತಡ ಹಾಕಲು ಕಾರಣವೇನು ನೀತಿ ಸಂಹಿತೆ ಜಾರಿಯಾಗದೆ ಈ ರೀತಿ ಒತ್ತಡ ಹಾಕಲು ಕಾರಣವೇನು ? ಶಾಸಕರ ಒತ್ತಾಯವೇನಾದರೂ ಇದೆಯಾ ಎಂಬುದನ್ನು ಅಧಿಕಾರಿಗಳು ಹೇಳಬೇಕು.

ನಾವೂ ಶುಲ್ಕ ಕಟ್ಟಿ ಪರವಾನಿಗೆ ತೆಗೆದುಕೊಂಡಿದ್ದೇವೆ. ಆದರೆ ಪಂಚಾಯಿತಿ ಅಧಿಕಾರಿಗಳು  ಶಾಸಕರ ಕಡೆಯಿಂದ ಎಷ್ಟು ಹಣ ತಗೆದುಕೊಂಡಿದ್ದೀರಿ ಎಂಬುದನ್ನು ಬಹಿರಂಗ ಮಾಡಬೇಕು ಎಂದರು.

ಇದನ್ನೆಲ್ಲ ನೋಡಿದರೆ ಚುನಾವಣೆಯಲ್ಲಿ ಅಕ್ರಮ ನಡೆಯುವ ಸಂಭವವಿದೆ. ಸರ್ಕಾರಿ ಅಧಿಕಾರಿಗಳ ವಾಹನಗಳಲ್ಲೆ ಅಕ್ರಮ ಹಣ ಸಾಗಾಟ ನಡೆಯಬಹುದು ಎಂಬ ಗುಮಾನಿಯಿದೆ. ಇದನ್ನು ತಡೆದು ನ್ಯಾಯಯುತ ಚುನಾವಣೆ ನಡೆಸಬೇಕು. ನಮ್ಮ ಬ್ಯಾನರ್ ಗಳಿಗೆ ಹಾನಿಯಾದರೆ ಅದಕ್ಕೆ ಶಾಸಕರೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಮಹಾಲಿಂಗಯ್ಯಾ ನಂದಗಾವಿಮಠ, ರೈತ ಸಂಘಟನೆಯ ಮೂಡಲಗಿ ತಾಲೂಕಾ ಅಧ್ಯಕ್ಷ ಹನುಮಂತ ಮುಗಳಖೋಡ, ಸುಭಾಸ ಲೋಕನ್ನವರ, ಗದಿಗೆಪ್ಪ ತೆಗ್ಗಿನಮನಿ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ವಿಧಿವಶ- ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಂಬನಿ

ಬೆಂಗಳೂರು- ಶ್ರವಣ ಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕಂಬನಿ ಮಿಡಿದಿದ್ದಾರೆ. ಜೈನ್ ಸಮುದಾಯದ ಸಮಗ್ರ...
- Advertisement -

More Articles Like This

- Advertisement -
close
error: Content is protected !!