ಚಂದ್ರ ವಂಶದಲ್ಲಿ ಹುಟ್ಟಿದ ಧೀರ್ಘತಮನ ಮಗನಾಗಿ ಹುಟ್ಟಿದವ ಈ ಧನ್ವ0ತರಿ ದೇವ. ಚಂದ್ರನಂತಹ ಹಾಲಿನ ಬೆಳಕಿನ ಬಣ್ಣ ಹೊಂದಿದವ. ಆ ಚಂದ್ರ ಮಂಡಲದಲ್ಲಿ ಧನ್ವಂತರಿ ಎರಡು ಕೈಗಳಲ್ಲಿ ಅಮೃತ ಕಲಶಗಳನ್ನು ಹಿಡಿದಿದ್ದಾನೆ.
ಇವನು ಕಮಲದಂತೆ ಅಗಲವಾದ ಕಣ್ಣುವುಳ್ಳ , ಅಶ್ವಿನಿ ದೇವತೆಗಳಿಂದ ಸ್ತೋತ್ರಿಸಿಕೊಂಡು ಪೂಜಿತನಾಗಿ ಅನುಗ್ರಹಿಸಿದವನು. ಚಂದ್ರನ ಮೂಲಕ ಧರೆಯ ತಾಪವನ್ನು ಓಡಿಸಿ , ಚಂದ್ರನಿಂದ ಜನಿಸಿದ ಗಿಡ ಬಳ್ಳಿ , ಪೊದೆಗಳ ಬೆಳಿಸಿ ಔಷಧಯನ್ನು ಧನ್ವಂತರಿ ಕೊಡುವನು.
ತುಳಸಿಯ ಜನಕ ಧನ್ವಂತರಿ. ಧನ್ವಂತರಿಯ ಆನಂದ ಭಾಷ್ಪಗಳು ಅಮೃತ ಕಲಶದಲ್ಲಿ ಬಿದ್ದಾಗ ಅದರಿಂದ ಜನಿಸಿದವಳೆ ತುಳಸಿ.
ಮುಂದೆ ಸುರಾಸುರರು ಮಂದಾರ ಪರ್ವತ ತಂದು ಸಮುದ್ರದಲ್ಲಿ ಮಥಿಸಿದಾಗ ನಗುನಗುತ್ತಾ ಅಮೃತ ಕಲಶ ಹಿಡಿದು ಹುಟ್ಟಿದ ಈ ಧನ್ವಂತರಿ ದೇವಗೆ ಸಮನಾರು ಇಲ್ಲ. ಅಂತಹ ನಿನ್ನ ಮಹಿಮೆಗೆ ನಮಸ್ಕಾರಗಳು. ಬ್ರಹ್ಮ , ರುದ್ರಾದಿ , ದೇವತಾ ಸಮೂಹ , ಋಷಿಗಳು ಕೂಡಿ ಎಲ್ಲರೂ ಸ್ತುತಿಸುವರು. ದಶ ದಿಕ್ಕುಗಳಲ್ಲಿ ವೈದ್ಯಮೂರ್ತಿ ಸರ್ವ ಪ್ರಾಣಿಗಳ ಇಂದ್ರಿಯ ರೋಗಗಳನ್ನು ಕಳೆಯುತ್ತಾನೆ.
ಪ್ರತಿ ಮನುಷ್ಯನು ತಾನು ಮಾಡಬೇಕಾದ ಕರ್ಮಗಳಲ್ಲಿ ಅನುಕ್ಷಣವು ಅವನ ನೆನೆದರೆ , ಆರೋಗ್ಯ ಶುಭದಾಯಕ ಆಗುವದು.
ಪ್ರಿಯಾ ಪ್ರಾಣೇಶ ಹರಿದಾಸ ಆದರ್ಶ ನಗರ ವಿಜಯಪುರ