- Advertisement -
ಸಿಂದಗಿ : ವಿಜಯಪುರ ಜಿಲ್ಲಾ ಕಸಾಪ, ತಾಲೂಕಾ ಹಾಗೂ ನಗರ ಘಟಕಗಳ ಸಹಕಾರದಲ್ಲಿ ಪರಿಸರ ಗಣೇಶ ಉತ್ಸವ ಚಿಂತನಾ ಗೋಷ್ಠಿ ನಡೆಯಿತು
ವಿಜಯಪುರ ಜಿಲ್ಲಾ ಪರಿಷತ್ ಭವನದಲ್ಲಿ ಜರುಗಿದ ಪರಿಸರ ಗಣೇಶ ಉತ್ಸವ ಚಿಂತನ ಗೋಷ್ಠಿಯಲ್ಲಿ ಪತ್ರಕರ್ತರಾದ ಮಹಾಂತೇಶ ನೂಲಾನವರ ಹಾಗೂ ಮಲ್ಲು ಪಟ್ಟಣಶೆಟ್ಟಿ ಅವರಿಗೆ ಮಾಧ್ಯಮ ಪ್ರಶಸ್ತಿ ಹಾಗೂ ಜಿ.ಪಿ.ಪೋರವಾಲ ಕಾಲೇಜಿನ ದೈಹಿಕ ನಿರ್ದೇಶಕ ಡಾ.ರವಿ ಗೋಲಾ ಅವರಿಗೆ ಡಾಕ್ಟರೇಟ್ ಪದವಿ ಪಡೆದ ನಿಮಿತ್ತವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕೇಂದ್ರ ಕಸಾಪ ಗೌರವ ಕಾರ್ಯದರ್ಶಿ ಪದ್ಮಿನಿ ನಾಗರಾಜ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಸಿಂದಗಿ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ, ಆನಂದ ಕುಲಕರ್ಣಿ, ವಿದ್ಯಾವತಿ ಅಂಕಲಗಿ, ಸಂಗನಗೌಟ ಪಾಟೀಲ ಅಗಸಬಾಳ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಶಿವಕುಮಾರ ಸಬರದ, ಎಂ.ಎಂ.ಹಂಗರಗಿ, ಕಲ್ಲಪ್ಪ ನಂದರಗಿ, ಮಲ್ಲಿಕಾರ್ಜುನ ಅಲ್ಲಾಪುರ ಅಭಿಷೇಕ ಅಲ್ಲಾಪೂರ ಸೇರಿದಂತೆ ಸಾಹಿತ್ಯಾಭಿಮಾನಿಗಳು ಇದ್ದರು.