spot_img
spot_img

ಶರಣ ಸಾಹಿತ್ಯ : ತಪ್ಪು – ಒಪ್ಪು

Must Read

- Advertisement -

ಶರಣರು ಸನಾತನ ವ್ಯವಸ್ಥೆಗೆ ಪ್ರತಿಯಾಗಿ ಬಹುದೊಡ್ಡ ಆಂದೋಲನವನ್ನು ಹುಟ್ಟು ಹಾಕಿದರು. ಫ. ಗು. ಹಳಕಟ್ಟಿಯವರು, ಶಿ. ಶಿ. ಬಸವನಾಳವರು, ಆರ್ ಸಿ ಹಿರೇಮಠ ಅವರು, ಎಂ. ಎಂ ಕಲ್ಬುರ್ಗಿಯವರು ಶರಣಸಾಹಿತ್ಯದ ಸಲುವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದರು ಎಂದು ಡಾ. ಶಶಿಕಾಂತ ಪಟ್ಟಣ ಹೇಳಿದರು.

ವಚನ ಅಧ್ಯಯನ ವೇದಿಕೆ ಬಸವಾದಿ ಶರಣರ ಚಿಂತನ ಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂಗೈಕ್ಯ ಶರಣ ಬಿ.ಎಮ್.ಪಾಟೀಲ್ ಮತ್ತು ತಾಯಿಯವರಾದ ಲಿಂಗೈಕ್ಯ ಶರಣೆ ಅಕ್ಕಮಹಾದೇವಿ ಪಾಟೀಲ್ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 29 ನೆಯ ದಿವಸ ಮಾತನಾಡಿದರು

ಶರಣರು, ಬುದ್ದನ ನಂತರ ಎಷ್ಟೊಂದು ವರ್ಷಗಳ ಮೇಲೆ ಸಾರ್ವತ್ರಿಕವಾಗಿ ಬಂಡಾಯದ ಧ್ವನಿ ಎತ್ತಿ ಜಾತಿರಹಿತ ಸಮಾಜ ನಿರ್ಮಿಸಿದರು. ಹೊಸ ಪ್ರಕಾರದ ಅಭಿವೃಕ್ತಿ ಸ್ವಾತಂತ್ರ್ಯ, ಸಮಾನ ಸಂಸ್ಕೃತಿ,ಕಳಕಳಿ, ಆಲೋಚನೆಗಳಿಗೆ ಗಟ್ಟಿಯಾಗಿ ನಿಂತರು. ವೇದ ಸಂಸ್ಕೃತಿಯನ್ನು ವಿರೋಧಿಸಿ ಸುಲಿಗೆ ಶೋಷಣೆಯನ್ನು ತಡೆದು, ಹಲವು ಭಾಷೆಯ, ಹಲವು ನಾಗರೀಕರ ಹಲವು ಧರ್ಮಿಯರ ಜೊತೆಗೂಡಿ ಪರಿವರ್ತನೆಗೆ ನಾಂದಿ ಹಾಡಿದರು. ಬದುಕಿನ ಎಲ್ಲಾ ಹಂತದಲ್ಲೂ ನೆಲಮೂಲದ ಸಂಸ್ಕೃತಿಯನ್ನು ಬಿಂಬಿಸಿ, ಮೌಲಿಕ ರೂಪದ ಮೂಲಕ ಜನಸಾಮಾನ್ಯರಿಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟರು. 1976 ರಿಂದ 80ರ ವರೆಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಡಾ. ಜವಳಿ, ಡಾ.ಮಲ್ಲಾಪುರ್, ಡಾಕ್ಟರ್ ಎಂ ಎಂ ಕಲ್ಬುರ್ಗಿ ಅವರ ನೇತೃತ್ವದಲ್ಲಿ ವಚನ ಚಳವಳಿ ಆವಿಷ್ಕಾರದ ಸಂಶೋಧನೆ ನಡೆಯಿತು ಎನ್ನುವುದನ್ನು ನೆನಪು ಮಾಡಿಕೊಂಡರು.

- Advertisement -

ವಚನಗಳ ಪರಾಮರ್ಶೆ ಕಾಲಕಾಲಕ್ಕೆ ನಿಂತುಹೋಯಿತು
ವಚನಗಳ ಸತ್ಯಾಸತ್ಯತೆ ಇತ್ಯರ್ಥ ಮಾಡಿಕೊಂಡು ದಾಖಲೀಕರಣ ಮಾಡಬೇಕು. ಇದು ಅವಸರದಲ್ಲಿ ಮಾಡಲು ಹೋಗಿ ಹಳಿ ತಪ್ಪಿತು ಎಂದು ಹೇಳಬಹುದು ಎಂದು ನಾನು ಒಬ್ಬ ಸಾಮಾನ್ಯ ಓದುಗನಾಗಿ ಹೇಳುತ್ತಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸಿದರು.ಬಸವಣ್ಣನವರು ವೈದಿಕ ವ್ಯವಸ್ಥೆ ತೆಗೆದುಹಾಕಿ ಅಗ್ರಹಾರದ ಯಜಮಾನಿಕೆಯನ್ನು ಧಿಕ್ಕರಿಸಿ ಜನಿವಾರ ಕಿತ್ತೊಗೆದ ದಿಟ್ಟ ಶರಣರು. ಅಂದಿನಕಾಲದಲ್ಲಿ ಶೈವರೂ ಸಹ ವೈದಿಕ ಆಚರಣೆಯನ್ನು ಮಾಡತೊಡಗಿದರು. ನನಗೆ ಇದೆಲ್ಲ ಬೇಡ ಎಂದು ಪ್ರತಿಭಟನೆಯ ಧ್ವನಿ ಎತ್ತಿದವರಲ್ಲಿ ಬಸವಣ್ಣ ಮೊದಲಿಗರು. ಭೀಮಕವಿ, ಹಲಗೆ ಆರ್ಯ ಮುಂತಾದವರು ತಮ್ಮ ಪುಸ್ತಕಗಳಲ್ಲಿ ಬಹಳಷ್ಟು ವಿಷಯಗಳನ್ನು ತಪ್ಪಾಗಿ ಉಲ್ಲೇಖ ಮಾಡಿದರು.ನಾವು ಇದನ್ನೆಲ್ಲ ಪರಾಮರ್ಶೆ ಮಾಡದೆ ಇತ್ಯರ್ಥಕ್ಕೆ ಬಂದು ಬಿಡುತ್ತೇವೆ ಎನ್ನುವ ಕಳವಳ ವ್ಯಕ್ತಪಡಿಸಿದರು

ಹಂಪಿಗೆ ಹೋದಾಗ, ಶೈವ ಮಂದಿರಗಳನ್ನು ದ್ವoಸ ಮಾಡಿಲ್ಲ, ವೈಷ್ಣವರ ಮೂರ್ತಿಗಳನ್ನಷ್ಟೇ ಒಡೆದಿದ್ದಾರೆ ಎನ್ನುವುದು ಗಮನಕ್ಕೆ ಬಂತು ಎನ್ನುವುದನ್ನು ಹೇಳುತ್ತಾ,ವಿಜಯನಗರದ ಎರಡನೆಯ ಪ್ರೌಢದೇವರಾಯನ ಕಾಲದಲ್ಲಿ ವಚನ ಚಳವಳಿಯ ಸಲುವಾಗಿ ತನ್ನ ಸಂಪತ್ತನ್ನು ಮೀಸಲಿಟ್ಟ ಸಂದರ್ಭದಲ್ಲಿ, ನೂರೊಂದು ಕಂದಾಯ ಗ್ರಾಮದ ಆಸೆಯ ಸಲುವಾಗಿ, ಬಹಳಷ್ಟು ಕವಿಗಳು ವಚನಗಳನ್ನು ದಿಕ್ಕು ತಪ್ಪಿಸಿದರು. 15 ನೆಯ ಶತಮಾನದ ಕೊನೆಯಲ್ಲಿ, ಹರಿಹರ, ರಾಘವಾಂಕ, ಪಾಲ್ಗುರಿಕೆ ಸೋಮನಾಥ, ಕೆರೆಯ ಪದ್ಮರಸನಂಥವರು ಅತ್ಯಂತ ನವಿರಾಗಿ ಖೋಟಾ ವಚನಗಳನ್ನು ಸೇರಿಸಿದರು ಭೀಮಕವಿ, ಚಾಮರಸ, ಲಕ್ಕಣ್ಣ, ಸಿಂಗಿರಾಜ ಅಂಥವರು ಕಲಬೆರಕೆ ಮಾಡಿದರು ಎಂದು ಅಭಿಪ್ರಾಯ ಪಟ್ಟರು.

ನೂರು ಜನರು ಮಾಡದ ಕೆಲಸವನ್ನು ಎಂ. ಎಂ. ಕಲ್ಬುರ್ಗಿ ಒಬ್ಬರೇ ಮಾಡಿದ್ದಾರೆ ಎಂದು ಅವರನ್ನು ನೆನೆಯುತ್ತಾ ಈಗಿರುವ ಸತ್ಯಾಸತ್ಯತೆಯನ್ನು ಒಳಗೆ ನುಂಗುವ ಹಾಗಿಲ್ಲ, ಉಗುಳುವ ಹಾಗಿಲ್ಲ, ಸೂಕ್ಷ್ಮ ತೆಯಿಂದ ಕೆಲಸ ಮಾಡಬೇಕು ಎಂದು ಮಾರ್ಮಿಕವಾಗಿ ನುಡಿದರು.

- Advertisement -

ವಚನ ಪರಿಷ್ಕರಣೆಯನ್ನು ಹಗುರವಾಗಿ ತೆಗೆದುಕೊಳ್ಳಬಾರದು ಮತ್ತು ಏಕಸ್ವಾಮ್ಯತೆಯಿಂದ ಮಾಡಬಾರದು, ತಾತ್ವಿಕ ಮೀಮಾoಸೆಗಳಿಂದ ಗುರುತಿಸಬೇಕು. ಪದಗಳು ಪಲ್ಲಟಗೊಂಡಿರುತ್ತವೆ, ಅವುಗಳನ್ನು ಬದ್ಧತೆ ಮತ್ತು ನಿಷ್ಠೆಯಿಂದ ಸರಿ ಮಾಡಬೇಕು ಎನ್ನುವುದನ್ನು ಒತ್ತಿ ಹೇಳಿದರು.

ಪವಾಡಗಳು ಮತ್ತು ಪುರಾಣಗಳು ಮೇಲ್ಪoಕ್ತಿ ಪಡೆದಿವೆ, ವಚನಗಳ ಆಶಯವನ್ನು ಗುರುತಿಸಿ, ಪ್ರಮಾದಗಳನ್ನು ಸರಿಪಡಿಸಬೇಕು ಎನ್ನುತ್ತಾ ಪಾಠಾoತರ ಆದ ವಚನಗಳನ್ನು, ಅನಗತ್ಯವಾಗಿ ಸೇರ್ಪಡೆಯಾದ ಸಾಲುಗಳನ್ನು ಉದಾಹರಿಸುತ್ತಾ,ಇದೊಂದು ಕುಯುಕ್ತಿ ಎಂದು ಕಳವಳ ವ್ಯಕ್ತಪಡಿಸಿದರು.

ಮತ್ತೊಮ್ಮೆ ಫ. ಗು. ಹಳಕಟ್ಟಿ, ಶಿ. ಶಿ. ಬಸವನಾಳ, ಎಂ. ಎಂ. ಕಲ್ಬುರ್ಗಿ, ಅರ್. ಸಿ. ಹಿರೇಮಠ ಅವರನ್ನು ನೆನೆಯುತ್ತಾ, ಎಲ್ಲರೂ ವಚನ ಪರಿಷ್ಕರಣೆಗೆ ಕೈಜೋಡಿಸಿ ಎನ್ನುವ ಮನವಿಯನ್ನು ಮಾಡುತ್ತಾ, ತಮ್ಮ ಮಾತುಗಳನ್ನು ಮುಗಿಸಿದರು.

ರುದ್ರಮೂರ್ತಿ ಅವರ ನಿರೂಪಣೆ, ಕುಮಾರಿ ಗ್ರೀಷ್ಮಾ ಅವರ ವಚನ ಪ್ರಾರ್ಥನೆ, ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಮಂಗಳ, ಮತ್ತು ಬಹಳಷ್ಟು ಸಹೋದರ -ಸಹೋದರಿಯರು ಸಂವಾದದಲ್ಲಿ ಪಾಲ್ಗೊಂಡು ತಮ್ಮ ಅಮೂಲ್ಯವಾದ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮ ಮುಕ್ತಾಯವಾಯ್ತು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ – ಪುಣೆ

- Advertisement -
- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group