spot_img
spot_img

ಆಶಾಕಿರಣ ಬುದ್ಧಿಮಾಂದ್ಯ ಮಕ್ಕಳ ವಸತಿ ವಿಶೇಷ ಶಾಲೆಗೆ ದೇಣಿಗೆ

Must Read

- Advertisement -

ಬೆಳಗಾವಿ – ದಿನಾಂಕ: ೦೨ ರಂದು ಧಾರವಾಡದ ಶ್ರೀಮತಿ ಸುಮನಾ ವಜ್ರಕುಮಾರ ಅವರು ಎರ್ಮಾಳು ಬೀಡು ಡಾ. ಎನ್ ವಜ್ರಕುಮಾರ ಅವರ ದ್ವಿತೀಯ ಪುಣ್ಯಸ್ಮರಣೆ ಆಚರಣೆಯ ಪ್ರಯುಕ್ತ, ಬೆಳಗಾವಿಯ ಅಟೋ ನಗರದ ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಅವಶ್ಯವಿದ್ದ ೧೦೦ ಲೀ ಸಾಮರ್ಥ್ಯದ ರೂ. ೧೨,೫೦೦/- ಬೆಲೆಯುಳ್ಳ ಸ್ಟೇನ್ಲೆಸ್ ಸ್ಟೀಲ್ ಕುಡಿಯುವ ನೀರಿನ ಟ್ಯಾಂಕನ್ನು ದೇಣಿಗೆ ನೀಡುವದರೊಂದಿಗೆ ಶಾಲೆಯ ಬುದ್ದಿಮಾಂದ್ಯ ಮಕ್ಕಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಸಿಹಿ ಊಟದ ವ್ಯವಸ್ಥೆಯನ್ನು ಮಾಡಿದ್ದರು.

ಜಯಶ್ರೀ ಮಾಳಗಿ, ಆರ್.ಬಿ. ಬನಶಂಕರಿ ಎ.ಪಿ. ಮಾಳಗಿ, ಅಶೋಕ್ ಶೆರೆಗಾರ ಅವರು ಜಿನೈಕ್ಯ ಡಾ ಎನ್. ವಜ್ರಕುಮಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದ್ವಿತೀಯ ಪುಣ್ಯಸ್ಮರಣೆಯ ಕಾರ್ಯಕ್ರಮ ನೆರವೇರಿಸಿದರು.

ಅತಿಥಿಗಳಾಗಿ ಆಗಮಿಸಿದ, ನಿವೃತ್ತ ಉಪನ್ಯಾಸಕರಾದ ಪ್ರೊ. ಬಿ.ಎಸ್. ದೊಡಬಂಗಿ ಹಾಗೂ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಎಮ್. ವಾಯ್. ಮೆಣಸಿನಕಾಯಿ ಅವರು ಮಾತನಾಡಿ, ವಿಶೇಷ ಶಾಲೆಯ ಮಕ್ಕಳ ಸೇವೆ ದೇವರ ಸೇವೆಯಾಗಿದ್ದು. ಇಂತಹ ಬೃಹತ್ ಹಾಗೂ ವಿಶಾಲವಾದ ಕಟ್ಟಡದಲ್ಲಿ ಓದುವ ಭಾಗ್ಯವನ್ನು ಪಡೆದ ಮಕ್ಕಳು ಧನ್ಯರೆಂದು ಹೇಳುತ್ತ, ಜಿನೈಕ್ಯ ಡಾ ಎನ್ ವಜ್ರಕುಮಾರ ಅವರ ದ್ವಿತೀಯ ಪುಣ್ಯಸ್ಮರಣೆಗೆ ಶುಭ ಕೋರಿದರು.

- Advertisement -

ವಿಶ್ರಾಂತ ಉಪನಿರ್ದೇಶಕರು ಹಾಗೂ ಸಂಸ್ಥೆಯ ಸಲಹಾ ಸಮಿತಿ ಸದಸ್ಯರಾದ ಆರ್. ಬಿ. ಬನಶಂಕರಿ ಅವರು ಪ್ರಾಸ್ತಾವಿಕವಾಗಿ ಸಂಸ್ಥೆಯ ಬಗ್ಗೆ ಮಾತನಾಡುತ್ತ, ಆಶಾಕಿರಣ ಬುದ್ದಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ ಹುಟ್ಟು , ಬೆಳವಣಿಗೆಯ ಬಗ್ಗೆ ತಿಳಿಸಿ, ಧಾರವಾಡದ ಜೆ.ಎಸ್.ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರಿ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಜಿನೈಕ್ಯ ಡಾ ಡಾ. ಎನ್‌ ವಜ್ರಕುಮಾರ ಅವರಿಂದ ವಿದ್ಯಾಭ್ಯಾಸ ಪಡೆದ ಪ್ರಯುಕ್ತ ಅವರ ಧರ್ಮಪತ್ನಿ ಶ್ರೀಮತಿ ಸುಮನಾ ವಜ್ರಕುಮಾರ ಅವರ ಮಾರ್ಗದರ್ಶನದಲ್ಲಿ ಡಾ. ಎನ್ ವಜ್ರಕುಮಾರ್ ಅವರ ದ್ವಿತೀಯ ಪುಣ್ಯಸ್ಮರಣೆ ಆಚರಿಸಿ, ಗುರುವಿಗೆ ಶಿರಸಾಷ್ಟಾಂಗ ಭಕ್ತಿಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯಾಧ್ಯಕ್ಷರಾದ ಜಯಶ್ರೀ ಮಾಳಗಿ ಅವರು ವಹಿಸಿಕೊಂಡು ಶ್ರೀಮತಿ ‌ಸುಮನಾ ವಜ್ರಕುಮಾರ ಅವರು ಪತಿಯ ದ್ವಿತೀಯ ಪುಣ್ಯಸ್ಮರಣೆ ಪ್ರಯುಕ್ತ ಬುದ್ದಿಮಾಂದ್ಯ ವಿಶೇಷ ಮಕ್ಕಳ ವಸತಿಯುತ ಶಾಲೆಗೆ ದೇಣಿಗೆ ನೀಡಿರುವುದಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸಮಾರಂಭದಲ್ಲಿ ಅಧ್ಯಕ್ಷರಾದ ಅನೀಲಕುಮಾರ ಮಾಳಗಿ, ನಿರ್ದೇಶಕರಾದ ಅಶೋಕ್ ಕುಮಾರ್ ಮಾಳಗಿ, ‌ಸಲಹಾ ಸಮಿತಿ ಸದಸ್ಯರಾದ ಅನೀಲ ಗುಡಮಟ್ಟಿ, ಶಿಕ್ಷಕಿ ಸುರ್ವಣಾ ಲೋಕೊಳಕರ, ಸಿಬ್ಬಂದಿ ವರ್ಗದವರಾದ ಶಿವಕುಮಾರ್ ಶೆರೆಗಾರ, ಸುಭ್ರಾವ ಹಾದಿಮನಿ, ಪ್ರಕಾಶ್ ಮಲಗನ್ನವರ, ಲಕ್ಷ್ಮೀ ಖಾನಗೌಡರ ಹೊಸತೋಟ, ಯಶೋಧಾ ತುರಾಯಿ, ಬಸಮ್ಮ ಹಳೇಮನಿ, ಕು. ಶ್ರೀನಿಧಿ ಮಾಳಗಿ‌ ಹಾಗೂ ಕು. ಚೇತನಾ ಮಾಳಗಿ ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group