spot_img
spot_img

ಅಪಾರ ಜೀವನ ಪ್ರೀತಿಯ ಸಮಾಜಮುಖಿ ನಾಟಕಕಾರ ಬೇಲೂರು ಕೃಷ್ಣಮೂರ್ತಿ

Must Read

- Advertisement -

ಕಡು ಬಡತನದಲ್ಲಿ ಹುಟ್ಟಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಲೇ ನೂರತ್ತಕ್ಕೂ ಹೆಚ್ಚು ನಾಟಕಗಳನ್ನು ಬರೆದ ಬೇಲೂರು ಕೃಷ್ಣಮೂರ್ತಿಯವರು ಅಪಾರ ಜೀವನ ಪ್ರೀತಿಯಿಂದ ಸ್ಥಿತಪ್ರಜ್ಞರಾಗಿ ಬದುಕನ್ನು ತಪಸ್ವಿಯಂತೆ ನಿರ್ವಹಿಸಿದ ನಾಟಕ ಸಂತ ಎಂದು ದಿಬ್ಬೂರು ರಮೇಶ್ ತಿಳಿಸಿದರು.

ಹಾಸನದ ಮನೆ ಮನೆ ಕವಿಗೋಷ್ಠಿಯ ೩೨೧ನೇ ತಿಂಗಳ ಕಾರ್ಯಕ್ರಮ ನಟ ಯಲಗುಂದ ಶಾಂತಕುಮಾರ್ ಅವರ ನಿವಾಸದಲ್ಲಿ ನಡೆದು ಸಾಮಾಜಿಕ ನಾಟಕ ಕ್ಷೇತ್ರಕ್ಕೆ ಬೇಲೂರು ಕೃಷ್ಣಮೂರ್ತಿ ಕೊಡುಗೆ ವಿಷಯವಾಗಿ ಮಾತನಾಡಿದ ಅವರು, ಕಾದಂಬರಿಕಾರ ಛಾಯಾಗ್ರಾಹಕ ನಟನೆ ಚಿತ್ರರಂಗ ಹೀಗೆ ಕೃಷ್ಣಮೂರ್ತಿಯವರ ಬದುಕು ಮತ್ತು ವ್ಯಕ್ತಿತ್ವವು ಒಂದೇ ಜೀವಿತದಲ್ಲಿ ಹತ್ತಾರು ಜನ್ಮಗಳಲ್ಲಿ ಗಳಿಸಬಹುದಾದ ಅನುಭವಗಳ ಬುತ್ತಿಯಾಗಿದೆ. ಅವರ ಆತ್ಮಕಥನ ವೈಕುಂಠ ಬೀದಿ ಅವರ ಸಮಗ್ರ ಬದುಕನ್ನು ತೆರೆದಿಟ್ಟಿದೆ. ಇವರ ನಾಟಕಗಳಲ್ಲಿ ಕಥಾವಸ್ತು ಪಾತ್ರ ನಿರೂಪಣೆ ಭಾಷಾ ಶೈಲಿ ಸುಲಲಿತವಾಗಿ ಗ್ರಾಮ್ಯ ಪರಿಸರದ ನಂಬಿಕೆ ಮೂಢನಂಬಿಕೆಗಳ ನಡುವಿನ ಗೊಂದಲಗಳಲ್ಲಿ ಹೈರಾಣಾದ ಸಮಾಜದ ಅಸಹಾಯಕತೆಯನ್ನು ನಿರೂಪಿಸಿದೆ ಎಂದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ವಿದ್ಯಾರ್ಥಿ ದಿನಗಳಲ್ಲಿ ಅವರ ನಾಟಕಗಳನ್ನು ನೋಡಿದೆವು. ಎಲ್‌ಎಲ್‌ಬಿ ಓದುವಾಗ ಅವರ ಸಾವಿತ್ರಿಯ ಸವಾಲು ನಾಟಕದಲ್ಲಿ ಪಾತ್ರ ನಿರ್ವಹಿಸಿ ರಂಗಭೂಮಿಗೆ ಕಾಲಿಟ್ಟು ನಾಟಕಗಳನ್ನು ಬರೆದಾಡಿಸಿದೆ. ಸಾಕ್ಷರತಾ ಅಂದೋಲನದಲ್ಲಿ ಬೇಲೂರು ಕೃಷ್ಣಮೂರ್ತಿ ಪಠ್ಯ ಪುಸ್ತಕ ರಚನಾ ಸಮಿತಿ ಅಧ್ಯಕ್ಷರಾಗಿ ನಾನು ಕಾರ್ಯದರ್ಶಿಯಾಗಿದ್ದೆ. ೧೧ನೇ ಹಾಸನ ಜಿಲ್ಲಾ ಸಾಹಿತ್ಯ ಸಮ್ಮೇಳನ ಬೇಲೂರಿನಲ್ಲಿ ನಡೆದು ಕೃಷ್ಣಮೂರ್ತಿಯವರು ಸಮ್ಮೇಳನಾಧ್ಯಕ್ಷರಾಗಿ ಆ ವೇಳೆ ಕ.ಸಾ.ಪ ಜಿಲ್ಲಾ ಗೌ. ಕಾರ್ಯದರ್ಶಿಯಾಗಿ ಅವರೊಂದಿಗಿನ ಒಡನಾಟ ಸ್ಮರಿಸಿಕೊಳ್ಳುತ್ತಾ ಒಂದು ಕಾಲಘಟ್ಟದಲ್ಲಿ ಬೇಲೂರು ಕೃಷ್ಣಮೂರ್ತಿ ಅವರ ನಾಟಕಗಳು ಶಾಲಾ ಕಾಲೇಜುಗಳ ವಾರ್ಷಿಕೋತ್ಸವಕ್ಕೆ ಮನರಂಜನೆ ನೀಡಿವೆ. ಅವರ ಲಚ್ಚಿ ತ್ಯಾಗಿ ನಾಟಕಗಳು ಜನಪ್ರಿಯ ನಾಟಕಗಳಾಗಿ ಹತ್ತಾರು ಬಾರಿ ಮರುಮುದ್ರಣಗೊಂಡಿವೆ. ಹಳ್ಳಿ ಹಳ್ಳಿಗಳಲ್ಲಿ ಅವರ ನಾಟಕಗಳು ಪ್ರದರ್ಶನಗೊಂಡಿದ್ದನ್ನು ಮರೆಯುವಂತಿಲ್ಲ ಎಂದರು.

- Advertisement -

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಸೀಗೆನಾಡು ಸಂಸ್ಥಾನದ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಬಡತನ ಮನುಷ್ಯನಿಗೆ ಒಂದು ಅನುಗ್ರಹವಿದ್ದಂತೆ. ಬಡತನದಲ್ಲಿ ಮನುಷ್ಯನಿಗೆ ಲಭಿಸುವ ಅನುಭವಗಳು ಅವನನ್ನು ಪರಿಪೂರ್ಣ ಮಾನವೀಯ ನೆಲೆಯಲ್ಲಿ ರೂಪಿಸುತ್ತವೆ. ಕೃಷ್ಣಮೂರ್ತಿಗಳ ನಾಟಕಗಳನ್ನು ಓದಿದ್ದೇನೆ. ನಾಟಕಗಳ ಮೂಲಕ ಅವರು ಸಮಾಜದಲ್ಲಿ ಜಾತ್ಯತೀತ ಮನಸ್ಥಿತಿ ನಿರ್ಮಾಣವಾಗಲೆಂಬ ಸಂದೇಶ ನೀಡಿದ್ದಾರೆ ಎಂದರು.

ಕವಿಗೋಷ್ಠಿಯಲ್ಲಿ ರೇಖಾ ಪ್ರಕಾಶ್, ಜೆ.ಆರ್. ರವಿಕುಮಾರ್, ರುಮಾನ ಜಬೀರ್, ಆರ್. ವೆಂಕಟೇಶ್, ಕಾಮಾಕ್ಷಿ ಕೃಷ್ಣಮೂರ್ತಿ, ಎನ್.ಎಲ್. ಚನ್ನೇಗೌಡ, ಗೊರೂರು ಅನಂತರಾಜು, ರಾಣಿ, ಬೇಲೂರು ನಾಗೇಶ್ ಕವಿತೆ ವಾಚಿಸಿದರು. ಕಲಾವಿದ ಗ್ಯಾರಂಟಿ ರಾಮಣ್ಣ, ಜಿಲ್ಲಾ ಸರ್ಕಾರಿ ನೌಕಕರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ನಿವೃತ್ತ ತಹಸೀಲ್ದಾರ್ ಎ.ವಿ.ರುದ್ರಪ್ಪಾಜಿರಾವ್, ಬಿ.ಎನ್.ಮಹಾಂತೇಶ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷರು ನವಿಲೆ ಪರಮೇಶ್, ನಿರ್ದೇಶಕರು ಹೆಚ್.ಎಲ್.ವಿಜಯಕುಮಾರ್, ಪ್ರಗತಿಪರ ಕೃಷಿಕ ಯೋಗೀಶಪ್ಪ, ಬಸವರಾಜಪ್ಪ ಮೊದಲಾದವರನ್ನು ಸನ್ಮಾನಿಸಲಾಯಿತು.

ಜಯದೇವಪ್ಪ, ಯೋಗೇಶ್ ಡಿ.ಎನ್. ಜಿ.ಕುಮಾರ್, ಯಾಕೂಬ್, ಡಿ.ಪಿ.ಶಿವರಾಜು, ಆರ್.ಸುಧಾಕರ್, ಹೆಚ್.ಡಿ.ಲಕ್ಷ್ಮಿದೇವಿ, ವೈಷ್ಣವಿ ಮೂರ್ತಿ, ಟಿ.ಪಿ.ನಾಗರಾಜ್, ಶಿವಕುಮಾರ್. ಡಿ.ಪಿ. ಶಿವರಾಜು. ಕೆ.ವಿ.ಕಲ್ಲೇಶಾಚಾರ್ ಮೊದಲಾದವರು ಇದ್ದರು. ಆರ್.ಬಿ.ಶೋಭ ಹರೀಶ್ ಪ್ರಾರ್ಥಿಸಿದರು. ಯಲಗುಂದ ಶಾಂತಕುಮಾರ್ ಸ್ವಾಗತಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಬೇಕುಬೇಕೆಂಬುವ ಬಾವಿಜಲ‌ ಬತ್ತುವುದು ಸಾಕೆಂಬ ಸಾಗರವು ಬತ್ತಬಹುದೆ ? ಬೇಕೆನಲು ಭಿಕ್ಷುಕನು ಸಾಕೆನಲು‌ ಸಿರಿವಂತ ಸಂತೃಪ್ತಿಯಿಂದ ಸುಖ‌- ಎಮ್ಮೆತಮ್ಮ. ಶಬ್ಧಾರ್ಥ ಸಾಗರ = ಸಮುದ್ರ. ತಾತ್ಪರ್ಯ ಬಾವಿಯ ನೀರು ಮಳೆಗಾಲದಲ್ಲಿ‌ ಮಾತ್ರ ತುಂಬಿರುತ್ತದೆ.ಆದರೆ ಬೇಸಿಗೆಕಾಲ‌ ಬಂದಾಗ...
- Advertisement -

More Articles Like This

- Advertisement -
close
error: Content is protected !!
Join WhatsApp Group