spot_img
spot_img

೨೩ ರಂದು ಜಿಲ್ಲಾ ಮಟ್ಟದ ಖೋಖೋ ಚದುರಂಗ ಹಾಗೂ ಯೋಗಾಸನ ಕ್ರೀಡಾಕೂಟ

Must Read

- Advertisement -

ಮುನವಳ್ಳಿ – ಸಿಂದೋಗಿ ಮುನವಳ್ಳಿಯ ಡಾ.ಬಿ.ವ್ಹಿ.ನಾಯಿಕ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ೨೦೨೧-೨೨ ನೇ ಶೈಕ್ಷಣಿಕ ಸಾಲಿನ ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿಗಳ ಬೆಳಗಾವಿ ಜಿಲ್ಲಾ ಮಟ್ಟದ ಖೋ-ಖೋ, ಚದುರಂಗ ಹಾಗೂ ಯೋಗಾಸನ ಕ್ರೀಡಾಕೂಟ ಮಂಗಳವಾರ ನವೆಂಬರ್ ೨೩ ಮುಂಜಾನೆ ೯.೩೦ ಗಂಟೆಗೆ ರಂದು ಜರುಗಲಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ನಾಗರಾಜ.ವಿ ಮಾಡುವರು.

ಅಧ್ಯಕ್ಷತೆಯನ್ನು ಶ್ರೀ ಗಜಾನನ ವಿದ್ಯಾವರ್ಧಕ ಮತ್ತು ಜನಕಲ್ಯಾಣ ಟ್ರಸ್ಟ(ರಿ)ಮುನವಳ್ಳಿಯ ಧರ್ಮದರ್ಶಿಗಳಾದ ಯಶವಂತ ಗೌಡರ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ,ಬೆಳಗಾವಿ ಜಿಲ್ಲಾ ಉಪನಿರ್ದೇಶಕರ ಕಚೇರಿಯ ಕ್ರೀಡಾ ಸಂಯೋಜಕರಾದ ಎಮ್.ಸಿ.ಧನ್ವಂತರ, ಸವದತ್ತಿ ತಾಲೂಕ ಕ್ರೀಡಾ ಸಂಯೋಜಕರಾದ ಆರ್.ಎಚ್.ಪಾಟೀಲ,ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿಗಳಾದ ವಾಯ್.ಎಂ.ಶಿಂಧೆ,ಮುನವಳ್ಳಿ ಪುರಸಭೆಯ ಮುಖ್ಯಾಧಿಕಾರಿಗಳಾದ ಮಹೇಂದ್ರ ತಿಮ್ಮಾಣಿ, ಸಿಂದೋಗಿ ಗ್ರಾಮ ಪಂಚಾಯತಿ ಪಿ.ಡಿ.ಓ.ರಮೇಶ ಬೆಡಸೂರ,ಸವದತ್ತಿ ತಾಲೂಕಾ ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಆರ್.ಆಯ್.ಸಿದ್ಲಿಂಗನವರ,ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಭವಾನಿ ಖೊಂದುನಾಯ್ಕ ಉಪಸ್ಥಿತರಿರುವರು.

ಸಂಜೆ ಮಂಜುನಾಥ ಬೆಟಗೇರಿಯವರ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣೆ ಮತ್ತು ಸಮಾರೋಪ ಸಮಾರಂಭ ಜರುಗುವುದು ಈ ಸಂದರ್ಭದಲ್ಲಿ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳಾದ ಎಸ್.ಜಿ.ಖೊದನ್ನವರ, ವ್ಹಿ.ಎಂ.ಸೂರ್ಯವಂಶಿ,ವಿ.ವಿ.ಕೋಳೆಕರ,ಡಾ.ವೈ.ಎಂ.ಯಾಕೊಳ್, ಬಿ.ಎಸ್.ದೇಸಾಯಿ, ಎಸ್.ಎಂ.ಅರಳಿಮಟ್ಟಿ, ಎಮ್.ಎಚ್.ಪಾಟೀಲ, ಕೆ.ಬಿ.ಕೋರಿ, ಎಸ್.ಎಂ.ವಾರೆಪ್ಪನವರ, ನಿರಂಜನ ಬಡಿಗೇರ, ಎಸ್.ಬಿ.ಗಣಾಚಾರಿ, ಶ್ರೀಮತಿ ಎಸ್.ಪಿ.ರಾವ್, ಎಚ್.ಎಸ್.ನದಾಫ ಅತಿಥಿಗಳಾಗಿ ಆಗಮಿಸಲಿರುವರು ಎಂದು ಪ್ರಕಟಣೆಯಲ್ಲಿ ಚೇರಮನ್‌ರು ಹಾಗೂ ಧರ್ಮದರ್ಶಿಗಳಾದ ಶ್ರೀಕಾಂತ ಮಿರಜಕರ ಹಾಗೂ ಡಾ.ಬಿ.ವ್ಹಿ.ನಾಯಿಕ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ.ಎನ್.ಅಲಮಣ್ಣವರ ಪ್ರಕಟಣೆಯಲ್ಲಿ ತಿಳಿಸಿರುವರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group