ಸವದತ್ತಿಃ ಕರ್ನಾಟಕ ರಾಜ್ಯ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು ಹಾಗೂ ಕೇಂದ್ರ ಸಂಘದ ಮಹಾ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶಗೌಡ ಗೌಡಪ್ಪ ಪಾಟೀಲ ಇಂದು ಅನಿರೀಕ್ಷಿತವಾಗಿ ರಾಮದುರ್ಗಕ್ಕೆ ಹೋಗುವಾಗ ಸವದತ್ತಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ನಿವೃತ್ತ ಮುಖ್ಯೋಪಾಧ್ಯಾಯ ಸುರೇಶ ಬೆಳವಡಿಯವರ ಮನೆಗೆ ಭೇಟಿ ಕೊಟ್ಟರು.
ಈ ಸಂದರ್ಭದಲ್ಲಿ ಅವರನ್ನು ಸವದತ್ತಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಸುರೇಶ ಬೆಳವಡಿಯವರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಜಯಕುಮಾರ ಹೆಬಳಿ ಮತ್ತು ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ಕೋಲಕಾರ ಅವರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶಗೌಡ ಪಾಟೀಲರು, ಸವದತ್ತಿಗೆ ಬರುವುದೆಂದರೆ ನನಗೆ ಎಲ್ಲಿಲ್ಲದ ಸಂತೋಷ. ಅದಕ್ಕೆ ಕಾರಣ ಸನ್ಮಾನ್ಯ ಜನಪ್ರಿಯ ಶಾಸಕರು ಮತ್ತು ವಿಧಾನಸಭಾ ಉಪಾಧ್ಯಕ್ಷರಾದ ಆನಂದಣ್ಣಾ ಮಾಮನಿಯವರು ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ನೌಕರರ ಸಂಘದ ಎಲ್ಲ ಪದಾಧಿಕಾರಿಗಳು. ನಮ್ಮ ಯಾವುದೇ ಚಟುವಟಿಕೆಗಳಿರಲಿ ಸಕಾರಾತ್ಮಕವಾಗಿ ಸ್ಪಂದಿಸುವ ಜೊತೆಗೆ ನಮ್ಮೊಂದಿಗೆ ಕೈ ಜೋಡಿಸುವವರು.
ಇವರ ಈ ಕಾರ್ಯ ನಮಗೆ ಪ್ರೋತ್ಸಾಹದಾಯಕವಾಗಿದೆ.ಬೆಳವಡಿಯವರ ನಿವೃತ್ತಿ ಮತ್ತು ಪೆಟ್ಲೂರವರು ನೂತನ ಅಧ್ಯಕ್ಷರಾದ ನಂತರ ಮೊಟ್ಟ ಮೊದಲ ಬಾರಿ ಸವದತ್ತಿಗೆ ಆಗಮಿಸುತ್ತಿದ್ದು. ನಾನು ಇವರೀರ್ವರನ್ನೂ ಸನ್ಮಾನಿಸುವ ಯೋಚನೆಯಿಂದ ಬಂದಿರುವೆನು. ನಂತರ ರಾಮದುರ್ಗದಲ್ಲಿ ಕಾರ್ಯವಿದ್ದು ಅಲ್ಲಿಗೆ ತೆರಳುವೆನು ಎನ್ನುತ್ತ ಸುರೇಶ ಬೆಳವಡಿ ಮತ್ತು ಎಚ್.ಆರ್.ಪೆಟ್ಲೂರರವರನ್ನು ಸನ್ಮಾನಿಸಿ ಗೌರವಿಸಿದರು. ಇದೊಂದು ಅನಿರೀಕ್ಷಿತ ಕಾರ್ಯಕ್ರಮ ತಮ್ಮ ಒಡನಾಟ ಸದಾ ಹೀಗೆಯೇ ಇರಲಿ”ಎಂದು ಆಶಿಸಿದರು.
ಜಿಲ್ಲಾ ಅಧ್ಯಕ್ಷರಿಂದ ಸನ್ಮಾನಗೊಂಡ ಸುರೇಶ ಬೆಳವಡಿಯವರು ಮತ್ತು ಎಚ್.ಆರ್.ಪೆಟ್ಲೂರವರು ಮಾತನಾಡಿ “ ಸವದತ್ತಿಯ ನೌಕರರ ಸಂಘ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸದಾ ತಮಗೆ ಬೆಂಬಲವಾಗಿರುವುದು.ತಮ್ಮ ಯಾವುದೇ ಕಾರ್ಯವಿರಲಿ ತಮ್ಮೊಂದಿಗೆ ನಾವಿದ್ದೇವೆ”ಎಂದು ನುಡಿದರು.