ಅಪ್ಪು: ಯಾವ ಅಭಿಮಾನಿ ಬರೆದನೋ ಗೊತ್ತಿಲ್ಲ…

Must Read

ಅಪ್ಪು ಅಗಲಿಕೆಯ ನೋವನ್ನು ಚುಟುಕುಗಳಲ್ಲಿ ವ್ಯಕ್ತಪಡಿಸಿದ್ದಾರೆ. ವಾಟ್ಸಪ್ ನಲ್ಲಿ ಬಂದ ಈ ಹೃದಯಸ್ಪರ್ಶಿ ಚುಟುಕುಗಳು……


ಅಪ್ಪು

.
ಗಾಜನೂರಿನ
ಗಾಜು ಒಡೆದುಹೋಯಿತು..
ಕನ್ನಡಿಗರ ಮನಸ್ಸೂ
ಚೂರುಚೂರಾಯಿತು !!!


.
ಅಪ್ಪನಂತೆ ಹಾಡುತ್ತಿದ್ದ..
ಅಪ್ಪನಂತೆ ನಟಿಸುತ್ತಿದ್ದ..
ಅಪ್ಪನಂತೆ ಹೊರಟುಹೋದ !!!


.
ಹೃದಯಾಘಾತ
ಇಡೀ ನಾಡಿಗೆ ಆಗಿದೆ..
ಎದೆನೋವು ಬಂದದ್ದು
ಅವನಿಗೆ ಮಾತ್ರ!!!


.
ಕನ್ನಡ ರಾಜ್ಯೋತ್ಸವಕ್ಕೆ
ಅಣ್ಣಾ ಬಾಂಡಿಲ್ಲ !!
ಬೊಂಬೆ ಹಾಡುತೈತೆ
ಅರಮನೆಯಲ್ಲಿ ರಾಜಕುಮಾರನಿಲ್ಲ !!!


.
ಲೋಕದ ಹಣೆಬರಹವಿಷ್ಟೆ,
ಪಾಪಿಗಳು ಬೇಗ ಸಾಯುವುದಿಲ್ಲ…
ಅಜಾತಶತ್ರುಗಳಿಗೆ ದೇವರು
ಆಯುಷ್ಯ ಕೊಡುವುದಿಲ್ಲ !!!


೬.
ಇದೊಂದು ಸೀನನ್ನು
ಕಟ್ ಮಾಡಿಬಿಡಿ..
ಅಪ್ಪು ರೀಟೇಕ್ ಮಾಡುತ್ತಾರೆ
ಒಮ್ಮೆ ಯ್ಯಾಕ್ಷನ್ ಅಂದುಬಿಡಿ !!!


.
ಇನ್ನೂ ಇಂಟರ್ವಲ್ಲೇ
ಆದಂತಿಲ್ಲ…
ಹಾಡು ಮುಗಿಯುವ ಮೊದಲೇ
ಕುಣಿತ ನಿಲ್ಲಿಸಿದೆಯಲ್ಲ?!!

Latest News

ಕವನ : ಬೆಳಕಿನ ಹಬ್ಬ ದೀಪಾವಳಿ

ಬೆಳಕಿನ ಹಬ್ಬ ದೀಪಾವಳಿ ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿಸ್ವಾರ್ಥ ಹೃದಯದಿ ನಿಸ್ವಾರ್ಥದ...

More Articles Like This

error: Content is protected !!
Join WhatsApp Group