ಡಾ.ಗೊರೂರು ಸಾಹಿತ್ಯ ವಿಚಾರ ಗೋಷ್ಠಿ

Must Read

ಹಾಸನ: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹಾಸನ, ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹಾಸನ ಜಿಲ್ಲಾ ಘಟಕ ಮತ್ತು ಗಾಂಧೀ ಸ್ಮಾರಕ ನಿಧಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸಾಹಿತ್ಯ ವಿಚಾರಗೋಷ್ಠಿಯನ್ನು ದಿನಾಂಕ ೨೧.೮.೨೦೨೪ರ ಬುಧವಾರ ಬೆ.೧೧ಕ್ಕೆ ಹಾಸನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.

ಡಾ. ಗೊರೂರರ ಸುಪುತ್ರಿ ಶ್ರೀಮತಿ ವಾಸಂತಿಮೂರ್ತಿ, ಕೆನಡಾ ಕಾರ್ಯಕ್ರಮವನ್ನು ಉದ್ಭಾಟಿಸಲಿದ್ದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಡಾ. ಕೆ.ಜಿ.ಕವಿತಾ ಅಧ್ಯಕ್ಷತೆ ವಹಿಸುವರು.

ಸಾಹಿತ್ಯ ವಿಚಾರ ಗೋಷ್ಠಿಯಲ್ಲಿ ಪ್ರೊ. ಕಮಲ ನರಸಿಂಹ, ಕಾದಂಬರಿಕಾರರು, ತುಮಕೂರು ಇವರು ಗೊರೂರರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಚಲನಚಿತ್ರ ಎಂಬ ವಿಷಯವಾಗಿ, ಡಾ. ಹಂಪನಹಳ್ಳಿ ತಿಮ್ಮೇಗೌಡರು, ನಿವೃತ್ತ ಪ್ರಾಧ್ಯಾಪಕರು ಇವರು ಗೊರೂರರ ಸಾಹಿತ್ಯದಲ್ಲಿ ಜನಪದ ಸಿದ್ಧಿ ಸಮೃದ್ಧಿ ಮತ್ತು ಗೊರೂರು ಅನಂತರಾಜು, ಲೇಖಕರು, ಹಾಸನ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಡಾ. ಗೊರೂರರ ಪಾತ್ರ ಎಂಬ ವಿಷಯವಾಗಿ ಪ್ರಬಂಧ ಮಂಡಿಸುವರು.

ಮುಖ್ಯ ಅತಿಥಿಗಳಾಗಿ ರವಿ ನಾಕಲಗೊಡು, ಸಂಪಾದಕರು, ಹಲೋ ಹಾಸನ್, ಸಂಜೆ ದಿನಪತ್ರಿಕೆ, ಡಾ. ಶ್ರೀನಿವಾಸ್ ಜಿ.ಎಸ್. ನಿವೃತ್ತ ಪ್ರಾಧ್ಯಾಪಕರು, ಬೆಂಗಳೂರು,  ಕೃಷ್ಣೇಗೌಡರು, ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಸನ ಜಿಲ್ಲಾಧ್ಯಕ್ಷರು ಮತ್ತು ಸುಂದರೇಶ್ ಡಿ.ಉಡುವೇರೆ, ಕ.ರಾ.ಬ.ಸಂಘ, ಹಾಸನ ಜಿಲ್ಲಾ ಘಟಕ ಅಧ್ಯಕ್ಷರು ಭಾಗವಹಿಸುವರು ಎಂದು ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರು ಮಧು ನಾಯ್ಕ್ ಲಂಬಾಣಿ, ಹೂವಿನಹಡಗಲಿರವರು ತಿಳಿಸಿದ್ದಾರೆ.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group