ಗಣಕ ರಂಗ ನಮ್ಮ ಸಂವಿಧಾನ ಕಥಾ ಸ್ಪರ್ಧೆ – ಡಾ. ಸುರೇಶ ನೆಗಳಗುಳಿ ಪ್ರಥಮ ಸ್ಥಾನ

Must Read

ಇತ್ತೀಚೆಗೆ 76ನೇಯ ಸಂವಿಧಾನ ದಿನಾಚರಣೆಯ ಅಂಗವಾಗಿ ಗಣಕರಂಗ (ರಿ) ಧಾರವಾಡ ಇವರು ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಬರಹಗಾರ ಹಾಗೂ ಮೂಲವ್ಯಾಧಿ ಚರ್ಮರೋಗ ಕ್ಷಾರ ತಜ್ಞ ,ವೈದ್ಯಕೀಯ ನಿರ್ದೇಶಕ ಕಣಚೂರು ಮತ್ತು ಮಂಗಳಾ ಆಸ್ಪತ್ರೆಯಲ್ಲಿ ಸಲಹಾ ವೈದ್ಯರೂ ಆಗಿರುವ ಡಾ ಸುರೇಶ ನೆಗಳಗುಳಿ ಇವರು ಬರೆದ ಸ್ವಯಂ ವಿಧಾನ ಶಿರೋನಾಮೆಯ ಕಥೆಗೆ ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ.

ರೂ. ಐದು ಸಾವಿರ ಹಾಗೂ ಪ್ರಮಾಣ ಪತ್ರ ಹೊಂದಿರುವ ಈ ಪ್ರಶಸ್ತಿಯು ಅಂತರ್ಜಾಲ ಮಟ್ಟದಲ್ಲಿ ಲಭಿಸಿದ್ದು ಪ್ರಥಮ ದ್ವಿತೀಯ, ತೃತೀಯ ಹಾಗೂ ಹತ್ತು ಮೆಚ್ಚುಗೆಯ ಬಹುಮಾನಗಳನ್ನು ಒಳಗೊಂಡಿತ್ತು.

ರಾಜ್ಯ ರಾಷ್ಟ್ರಾದ್ಯಂತದ ಹಲವು ಮಂದಿ ಕನ್ನಡಿಗರು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಸಂವಿಧಾನದ ಮಹತ್ವ ಸಾರುವ ವಿಭಿನ್ನ ಕಥೆಗಳ ಬಿತ್ತರವಾಯಿತು.

ಧಾರವಾಡದಲ್ಲಿ ವಿಜೃಂಭಣೆಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಶೀಘ್ರದಲ್ಲೇ ನಡೆಯಲಿದೆ ಎಂದು ಸಂಘಟಕ ಸಿದ್ಧರಾಮ‌ ಹಿಪ್ಪರಗಿ, ಗಣಪತಿ ಗೋ ಚಲವಾದಿ ಮತ್ತು ರವಿ ಚಲವಾದಿ ತಿಳಿಸಿರುತ್ತಾರೆ
ರಚನೆ ಮಾತ್ರವಲ್ಲದೆ ಮತ್ತು ವಾಚನವನ್ನೂ ಮಾಡಿದ ಈ ಸ್ಪರ್ಧೆಯಲ್ಲಿ ಡಾ ವಿ.ಜಿ ಪೂಜಾರ ತೀರ್ಪುಗಾರರಾಗಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group