ಮೂಡಲಗಿ : ಬ್ಯಾಂಕಿನ ಆರ್ಥಿಕ ಸಾಕ್ಷರತೆಯ ಅರಿವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು ಇಂದಿನ ವ್ಯವಹಾರಿಕ ಕ್ಷೇತ್ರದಲ್ಲಿ ಬ್ಯಾಂಕುಗಳು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದು ಕೇವಲ ಹಣಕಾಸಿನ ನಿರ್ವಹಣೆ ಬ್ಯಾಂಕುಗಳಿಗೆ ಸೀಮತವಾಗಿರುವುದಿಲ್ಲ ಬ್ಯಾಂಕುಗಳು ಜನರ ಜೀವನದ ಮಟ್ಟ ಸುಧಾರಿಸುವಲ್ಲಿ ಕೃಷಿ, ಶಿಕ್ಷಣ, ವ್ಯಾಪಾರ, ವಾಣಿಜ್ಯೋಧ್ಯಮ ಹೀಗೆ ಹತ್ತಾರು ಕ್ಷೇತ್ರಗಳ ಅಭಿವೃದ್ಧಿಗೆ ತನ್ನದೇಯಾದ ಆದ್ಯತೆ ನೀಡಿ ಸಾಮಾಜಿಕ ಆರ್ಥಿಕ ಅಭಿವೃದ್ಧಿಯನ್ನು ಮಾಡುತ್ತಿವೆ ಬ್ಯಾಂಕುಗಳ ಕಾರ್ಯದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಿಸಿವುದು ಅವಶ್ಯಕವಿದೆ ಎಂದು ಮೂಡಲಗಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಪುತ್ರ ಚನ್ನಗೌಡರ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಸಹಯೋಗದಲ್ಲಿ ಆಯೋಜಿಸಿದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿ, ಬ್ಯಾಂಕುಗಳು ಗ್ರಾಹಕರ ಹಿತರಕ್ಷಣೆಯ ಜೊತೆಗೆ ಬ್ಯಾಂಕಿನಿಂದ ವ್ಯವಹಾರದಲ್ಲಿ ತೊಡಗುವದರಿಂದ ಪಾರದರ್ಶಕ ಮತ್ತು ಕಾನೂನು ಬದ್ದ ವ್ಯವಹಾರಗಳು ಜರುಗುತ್ತವೆ ಹಣಕಾಸಿನ ವ್ಯವಹಾರದಲ್ಲಿ ಮೋಸ ಇರುವುದಿಲ್ಲ ವ್ಯವಹಾರಗಳು ಬ್ಯಾಂಕ್ ಖಾತೆಗಳ ಮೂಲಕ ಹೆಚ್ಚು ವ್ಯವಹಾರ ನಡೆಸಲು ನಮ್ಮ ಗ್ರಾಹಕರು ಆಧ್ಯತೆ ನೀಡಬೇಕು ಅಲ್ಲದೇ ಬ್ಯಾಂಕಿನಿಂದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಸ್ವಾವಲಂಬಿ ವೃತ್ತಿಗಳಿಗೆ ಆರ್ಥಿಕ ನೆರವು ಇದ್ದು ಪ್ರತಿಯೊಬ್ಬ ಸಮುದಾಯದ ಸದಸ್ಯನು ಬ್ಯಾಂಕಿನ ಪ್ರಯೋಜನಗಳನ್ನು ಪಡೆದುಕೊಳ್ಳಲು ಮುಂದಾಗಬೇಕೆಂದರು.
ಕಾಲೇಜಿನ ಪ್ರಾಚಾರ್ಯ ಸತೀಶ ಗೋಟೂರೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕು ರೈತರ, ಮಹಿಳೆಯರ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುತ್ತಿದ್ದು ಯುವ ವಿದ್ಯಾರ್ಥಿಗಳು ಪದವಿ ಶಿಕ್ಷಣ ಪೂರ್ಣ ಗೊಳಿಸಿದ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುತ್ತಿದೆ ಅಲ್ಲದೇ ಗ್ರಾಮೀಣ ಯುವಕರಿಗೆ – ಯುವತಿಯರಿಗೆ ಅನೇಕ ವೃತ್ತಿತರಬೇತಿಗಳನ್ನು ಆಯೋಜಿಸಿ ಅವರ ಬದುಕಿಗೆ ಆಸರೆಯಾಗುತ್ತಿದೆ ಬ್ಯಾಂಕುಗಳ ಕಾರ್ಯದ ಅರಿವು ಹೊಂದುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ಪ್ರಶಾಂತ ಮಾವರಕರ, ಸಂಜೀವ ಮಂಟೂರ, ಮಲ್ಲಪ್ಪ ಪಾಟೀಲ, ಗೀತಾ ಹಿರೇಮಠ, ಹಾಜರಿದ್ದರು ವಿದ್ಯಾರ್ಥಿನಿ ಮಹಾನಂದಾ ಮುತ್ನಾಳ ಸ್ವಾಗತಿಸಿದರು. ವಿದ್ಯಾರ್ಥಿನಿ ಸೌಜನ್ಯಾ ಮೂಡಲಗಿ ನಿರೂಪಿಸಿದರು. ಶಶಿಕಾಂತ ಲಂಗೋಟಿ ವಂದಿಸಿದರು.