ಸೌಂದರ್ಯಕ್ಕಿಂತ ಶಿಕ್ಷಣ ಶ್ರೇಷ್ಠ ಬದುಕು ಮುಖ್ಯ ಎಂದವರು ಡಾ ಬಿ ಆರ್ ಅಂಬೇಡ್ಕರ್ :ಸಂಗಣ್ಣ ಹವಾಲ್ದಾರ.

Must Read

ಬಾಗಲಕೋಟೆ : ಸಂವಿಧಾನ ಶಿಲ್ಪಿ ಸಮಾನತೆಯ ಹರಿಕಾರ ನಮ್ಮ ದೇಶದ ಪ್ರಥಮ ಕಾನೂನು ಸಚಿವರು, ಮಹಾನ ವ್ಯಕ್ತಿ,ಡಾ ಬಾಬಾಸಾಹೇಬ ಅಂಬೇಡ್ಕರರವರು ಭಾರತದ ಕಾನೂನು ಸುವ್ಯವಸ್ಥೆ, ಅಸ್ಪೃಶ್ಯತೆ ನಿವಾರಣೆ, ಸಮಾನತೆ ಶಿಕ್ಷಣ ಸೇರಿದಂತೆ ಮಾನವ ಜೀವಿಗೆ ಅವರ ಸೌಂದರ್ಯಕ್ಕಿಂತ ಶಿಕ್ಷಣ, ಶ್ರೇಷ್ಠವಾದ ಬದುಕು, ಅರೋಗ್ಯ ಜೀವನ ಮುಖ್ಯ ಎಂದು ತಿಳಿಸಿಕೊಟ್ಟವರು ಡಾ. ಬಿ ಆರ್ ಅಂಬೇಡ್ಕರರವರು ಎಂದು ಗ್ರಾಮದ ವಿಶ್ವಚೇತನ ಪಬ್ಲಿಕ್ ಶಾಲೆಯ ಮುಖ್ಯಸ್ತರಾದ ಸಂಗಣ್ಣ ಹವಾಲ್ದಾರ ಹೇಳಿದರು.

ಅವರು ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ ಗ್ರಾಮದ ಡಾ ಬಿ ಆರ್ ಅಂಬೇಡ್ಕರವರ 134 ನೇ ಜಯoತ್ಯುತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಗ್ರಾಮದ ಪ್ರಗತಿಪರ ರೈತರಾದ ಚನ್ನಪ್ಪಗೌಡ್ರ ನಾಡಗೌಡ್ರ ಕಾರ್ಯಕ್ರಮ ಉದ್ಘಾಟನೆ ಮಾಡಿದರು ಶಿಕ್ಷಕರಾದ ಯಲ್ಲಪ್ಪ ಚಲವಾದಿ ಅಧ್ಯಕ್ಷತೆ ವಹಿಸಿದ್ದರು.

ಮಂಜುನಾಥ್ ಮರಕಮಲದಿನ್ನಿ ವಿಶೇಷ ಉಪನ್ಯಾಸ ನೀಡಿದರು. ಮಾಜಿ ಗ್ತಾಮ ಪಂಚಾಯತ್ ಅಧ್ಯಕ್ಸರುಗಳಾದ ಪಂಪಣ್ಣ ಸಜ್ಜನ ಹಾಗೂ ಮಹಮ್ಮದಸಾಬ್ ಭಾವಿಕಟ್ಟಿ ಮಾತನಾಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಸವರಾಜ್ ಅಳ್ಳೊಳ್ಳಿ, ಪ್ರಮುಖರಾದ ರವಿಕುಮಾರ್ ಕಂಠಿ, ಅಮಾತೆಪ್ಪ ಯರದಾಳ,ಹನಮಂತ ಕಿಳ್ಳಿ, ಅಮರಪ್ಪ ಗೆಜ್ಜೆಲಗಟ್ಟಿ, ಶಿವಪ್ಪ ಭಜಂತ್ರಿ, ಅಮೀನಪ್ಪ ಬಾರಕೇರ, ಅಮರೇಶ ಕೊಡಕೇರಿ, ಮಹಾಂತೇಶ ವಡ್ಡರ, ಶಂಕ್ರಪ್ಪ ಚಲವಾದಿ, ಪರಶುರಾಮ ಮೈತ್ರಿ, ಕ್ರಷ್ಣ ಹರಣಸಿಕಾರಿ, ಆನಂದ ಜವಾನರ, ಚಂದ್ರಶೇಖರ ಜಂಗ್ಲಿ ಖಾಜೇಸಾಬ ಕುದರಿ, ಗೂಳಪ್ಪ ಪೂಜಾರಿ, ಹಣಮಂತ ದಾಸರ, ರಾಮಪ್ಪ ಚೌಡಕಿ, ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಈ ಸಲದ ದ್ವಿತೀಯ ಪಿ ಯು ಸಿ ವಿಜ್ಞಾನ ವಿಭಾಗದ ಪರೀಕ್ಷೆಯಲ್ಲಿ ಶೇ 92/5 ರಷ್ಟು ಅಂಕಗಳಿಸಿ ಕಂದಗಲ್ಲ ಗ್ರಾಮದ ಕೀರ್ತಿ ಹೆಚ್ಚಿಸಿದ ಬಸವರಾಜ್ ವಿ ಶಿಂಪಿ, ನಿವ್ರತ್ತ ಲೋಕೋಪಯೋಗಿ ಇಲಾಖೆಯ ನೌಕರರಾದ ಬಸಪ್ಪ ಚಲವಾದಿ, ಗುರುಗಳಾದ ಯಲ್ಲಪ್ಪ ಚಲವಾದಿ, ಆವಿಷ್ಕಾರಿ ರೈತ ಪ್ರಶಸ್ತಿ ಪುರಸ್ಕೃತರಾದ ರಾಜಮಹ್ಮದ ಪಿಂಜಾರ, ಅಭಿವೃದ್ಧಿ ಅಧಿಕಾರಿ ವೀರನಗೌಡ ಮರಟಗೇರಿ, ಅವರನ್ನು ಸನ್ಮಾನಿಸಲಾಯಿತು, ಮೊದಲಿಗೆ ಅಹಿಂದ ಘಟಕದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ಬಸರಗಿಡದರವರು ಮೆರವಣಿಗೆಗೆ ಚಾಲನೆ ನೀಡಿದರು, ಗ್ರಾನೈಟ್ ಉದ್ದಿಮೆದಾರ ಹೇಮಂತ್ ಚಲವಾದಿ ಪ್ರಸಾದ ವ್ಯವಸ್ಥೆ ಮಾಡಿದ್ದರು,

ಶಂಕರ ಕಾಳಿಪ್ರಸಾದ ಸ್ವಾಗತಿಸಿದರು, ಬಸವರಾಜ್ ಜಂಗ್ಲಿ ವಂದಿಸಿದರು, ರಮೇಶ್ ದಾಸರ ನಿರೋಪಿಸಿದರು.
ಕಾರ್ಯಕ್ರಮದಲ್ಲಿ ಮಹಿಳೆಯರು ಮಕ್ಕಳು ಹಾಗೂ ಕಂದಗಲ್ಲ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group