ಸಿಂದಗಿ; ತಾಲೂಕಿನಲ್ಲಿ ಶಾಸಕರು ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರ ಸಮ್ಮುಖದಲ್ಲಿ ನಡೆಯುತ್ತಿರುವ ಆರನೇಯ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇನಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಐದು ಸಾಹಿತಿಗಳ ಹೆಸರುಗಳಲ್ಲಿ ಆಯ್ಕೆ ಮಾಡಲು ಸಿಂದಗಿ ಕನ್ನಡ ಸಾಹಿತ್ಯ ಪರಿಷತ್ತು ಪದಾಧಿಕಾರಿಗಳು ಒಬ್ಬರನ್ನು ಆಯ್ಕೆ ಮಾಡಲು ಜಿಲ್ಲಾದ್ಯಕ್ಷರಿಗೆ ಜವಾಬ್ದಾರಿಯನ್ನು ನೀಡಲಾಗಿತ್ತು ಅದರಲ್ಲಿ ಒಬ್ಬರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಹಿರಿಯ ಸಾಹಿತಿಗಳ ಹಾಗೂ ಎಲ್ಲರ ಅಭಿಪ್ರಾಯಗಳನ್ನು ಮೌಖಿಕವಾಗಿ ಸಂಪರ್ಕಿಸಿ ಎಲ್ಲ ಸಾಧಕ ಬಾಧಕಗಳನ್ನು ಕಲೆ ಹಾಕಿ ಒಂದು ತೀರ್ಮಾನಕ್ಕೆ ಬಂದು ಹಿರಿಯ ಸಾಹಿತಿ ಹಾಗೂ ಮಕ್ಕಳ ಸಾಹಿತಿ ರಾ.ಶಿ. ವಾಡೇದ ಇವರು ಇಲ್ಲಿಯವರೆಗೆ ಅವಕಾಶ ವಂಚಿತರಾಗಿದ್ದನ್ನು ಪರಿಗಣಿಸಿ ಎಲ್ಲರ ಸಲಹೆ ಹಾಗೂ ಜಿಲ್ಲಾ ಸಮಿತಿಯ ಸಲಹೆ ಮೇರೆಗೆ ರಾ. ಶಿ. ವಾಡೇದ ಇವರನ್ನು ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಆರನೇಯ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸೀಂಪೀರ ವಾಲೀಕಾರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶಿವಾನಂದ ಬಡಾನೂರ, ಮಾಜಿ ಅಧ್ಯಕ್ಷ ಸಿದ್ದಲಿಂಗ ಚೌಧರಿ, ರಾಜ್ಯ ಪರಿಷತ್ತು ಸದಸ್ಯ ಸಂಗನಗೌಡ ಪಾಟೀಲ ಅಗಸಬಾಳ, ಕೆರೂಟಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಹಾಂತೇಶ ಯಡ್ರಾಮಿ, ಮಾದ್ಯಮ ಪ್ರತಿನಿಧಿ ಪಂಡಿತ ಯಂಪೂರೆ, ಸಂ.ಕಾರ್ಯದರ್ಶಿ ರಮೇಶ ಪೂಜಾರ ಇದ್ದರು.