ಸಿಂದಗಿ: ವಿಶ್ವ ಏಡ್ಸ್ ದಿನವನ್ನು ಅಂದಿನಿಂದ ಇಂದಿನವರೆಗೂ ನಾವು ಆಚರಿಸಿಕೊಂಡು ಬಂದಿದ್ದೇವೆ. ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ ಎಂಬ ಸಂಕಲ್ಪವಾಗಿದೆ. ನಮಗೆಲ್ಲರಿಗೂ ಬದುಕುವ ಹಕ್ಕಿದೆ ಇದನ್ನು ಆ ಸೃಷ್ಟಿಕರ್ತನೇ ಕೊಟ್ಟಿರುತ್ತಾನೆ ಎಂದು ಸರಕಾರಿ ಆಸ್ಪತ್ರೆ ಆಪ್ತ ಸಮಾಲೋಚಕ ಮಲ್ಲಪ್ಪ ಸಾಗರ ತಿಳಿಸಿದರು,
ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದ ಆಶ್ರಯದಲ್ಲಿ ಡಿ.13 ರಂದು ವಿಶ್ವ ಏಡ್ಸ್ ಹಾಗೂ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಮಲ್ಲಪ್ಪ ಅವರು, ಮನುಷ್ಯನಲ್ಲಿ ಏಡ್ಸ್ ನ ಮೊಟ್ಟ ಮೊದಲ ಪ್ರಕರಣವು 5 ಜೂನ್ 1981 ರಲ್ಲಿ ವರದಿಯಾಯಿತು. ಪ್ರಸ್ತುತ ವಿಶ್ವದಲ್ಲಿ ಮೂರು ರಾಷ್ಟ್ರಗಳಾದ ದಕ್ಷಿಣ ಆಫ್ರಿಕಾ, ಚೀನಾ ಮತ್ತು ಭಾರತದಲ್ಲಿ ಹೆಚ್ಚಿನ ರೋಗಿಗಳು ಇದ್ದಾರೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ ಕರ್ನಾಟಕದಲ್ಲಿ ವಿಜಯಪೂರ, ಬಾಗಲಕೋಟ ಮತ್ತು ಬೆಳಗಾವಿಯ ಸವದತ್ತಿಯಲ್ಲಿ ಹೆಚ್ಚು ಪ್ರಕರಣಗಳು ಇವೆ. ಮನುಷ್ಯನನ್ನು ಹೆಚ್ಚಾಗಿ ಬಾಧಿಸುವ ವೈದ್ಯಕೀಯ ಲೋಕಕ್ಕೆ ದೊಡ್ಡ ಸವಾಲಾಗಿರುವ ಸೋಂಕು ಏಡ್ಸ್ .ಇದರ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮತ್ತು ಅದರ ಬಗ್ಗೆ ಶಿಕ್ಷಣ ಮಟ್ಟವನ್ನು ಹೆಚ್ಚಿಸಲು ಸಾಧ್ಯ ಎಂದರು.
ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜ ಮಾತನಾಡಿದರು ಸಮಸ್ಯೆಗಳಿಲ್ಲದ ವ್ಯಕ್ತಿ ಇಲ್ಲ ನಾವೆಲ್ಲರು ಅದಕ್ಕೆ ಭಯ ಪಟ್ಟು ಎದೆಗುಂದದೆ ಸಮಸ್ಯೆಯನ್ನು ಮೆಟ್ಟಿ ನಿಲ್ಲುವಂತವರಾಗಬೇಕು. ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ ಎಲ್ಲರನ್ನೂ ನಾವು ಗೌರವದಿಂದ ಕಾಣಬೇಕು. ನಾವೆಲ್ಲರು ಸಂಗಮ ಸಂಸ್ಥೆಯ ಒಂದು ಕುಟುಂಬ ಸದಸ್ಯರು ಇದ್ದ ಹಾಗೆ ತಮಗೆ ಯಾವುದೇ ಸಮಸ್ಯೆ ಬಂದರೂ ಸಂಗಮ ಸಂಸ್ಥೆಯು ನಿಮ್ಮ ಜೊತೆ ಇರುತ್ತದೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಕರ್ನಾಳ ಮಾತನಾಡಿ, ಪ್ರತಿಯೊಂದು ಗ್ರಾಮಪಂಚಾಯತಿಯಲ್ಲಿ ಅಂಗವಿಕಲರಿಗೆ ಅನುದಾನದ ಶೇಕಡಾ 5% ರಷ್ಟು ಮೀಸಲಿಡಲು ಸರ್ಕಾರ ಸೂಚಿಸಿದೆ ಆದರೆ ಇದು ಬರೀ ಪೇಪರ್‍ನಲ್ಲಿ ಮಾತ್ರ ಇದೆ ನಮಗೆ ಯಾವುದೇ ಸೌಲಭ್ಯ ದೊರತಿಲ್ಲ ಈ ಎಲ್ಲ ಸೌಲಭ್ಯವನ್ನು ಪಡೆಯಬೇಕಾದರೆ ನಾವು ಒಗ್ಗಟ್ಟಾಗಬೇಕು ಅಂದಾಗ ಮಾತ್ರ ನಾವು ಈ ಸೌಲಭ್ಯಗಳನ್ನು ಪಡೆಯಬಹುದು ಹಾಗೂ ಪ್ರತಿ ಅಂಗವಿಕಲರು ಗ್ರಾಮ ಪಂಚಾಯತಿ ಹಾಗೂ ತಾಲೂಕ ಪಂಚಾಯತಿಗೆ ಭೇಟಿ ನೀಡಿ ಕೇಳಬೇಕು ನಾವು ಕೇಳುವರೆಗೂ ನಮಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ. ಅಂಗವಿಕರ ಸಬಲೀಕರಣಕ್ಕೆ ಇದ್ದ ಅನುದಾನವನ್ನು ಅಂಗವಿಕರಿಗೆ ಕೊಡದೇ ಇತರ ಅಭಿವೃದ್ಧಿಗೆ ಪಂಚಾಯತಿಗಳಲ್ಲಿ ಉಪಯೋಗಿಸುತ್ತಾರೆ. ನಿಜವಾಗಿ 75% ಅಂಗವಿಕಲತೆ ಇದ್ದ ವ್ಯಕ್ತಿಗೆ ವೈದ್ಯಾಧಿಕಾರಿಗಳು ಪ್ರಮಾಣ ಪತ್ರ ಕೊಡದೇ ಅಂಗವಿಕಲತೆ ಕಡಿಮೆ ದರದಲ್ಲಿ ಇದ್ದವರಿಗೆ ಪ್ರಮಾಣ ಪತ್ರ ಕೊಡುತ್ತಾರೆ ಅದ್ದರಿಂದ ನಿಜವಾದ ಅಂಗವಿಕಲರು ವಂಚಿತರಾಗುತ್ತಾರೆ. ಆದ ಕಾರಣ ಇದರ ವಿರುದ್ದ ನಾವೆಲ್ಲರು ಸೇರಿ ವೈದ್ಯರ ವಿರುದ್ದ ಧ್ವನಿ ಎತ್ತಬೇಕು ಎಂದರು.
ಸರಕಾರಿ ಆಸ್ಪತ್ರೆ ಕ್ಷಯ ರೋಗ ಮಾಹಿತಿಗಾರರು ಹೇಮಂತ ಕಲಾಲ ಮಾತನಾಡಿ, ಕ್ಷಯ ರೋಗವು ಹೆಚ್ಚಾಗಿ ಏಡ್ಸ್ ಇದ್ದವರಿಗೆ ಬರುವಂತಹ ರೋಗ. ಇದೊಂದು ಮಾರಕ ರೋಗ. ಈ ರೋಗ ಮುಂದೆ ದೇಹದ ಹಲವು ಅಂಗಾಂಗಗಳ ಮೇಲೆ ತನ್ನ ದುಷ್ಪರಿಣಾಮ ಬಿರುತ್ತದೆ. ಈ ರೋಗದ ಲಕ್ಷಣಗಳು ಯಾವುದೆಂದರೆ ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ಇರುವುದು ಅಥವಾ ಕಫ ಮಿಶ್ರಿತ ಕೆಮ್ಮು, ರಾತ್ರಿ ಜ್ವರ ಅಥವಾ ಹೆಚ್ಚು ಬೆವರು ಮತ್ತು ಗಣನೀಯ ಪ್ರಮಾಣ ತೂಕ ಇಳಿಕೆ ಆಗುತ್ತದೆ. ಇದನ್ನು ಹೋಗಲಾಡಿಸಲು ಸಮೀಪದ ಸರ್ಕಾರಿ ಆಸ್ಪತ್ರೆಗೆ ಹೋಗಿ ಕಫ ಪರೀಕ್ಷೆ ಮಾಡಿಸಬೇಕು ಒಂದು ವೇಳೆ ಒಬ್ಬ ವ್ಯಕ್ತಿಗೆ ಕ್ಷಯ ರೋಗ ಇದ್ದರೆ ಸಂಪೂರ್ಣ ಉಚಿತ ಚಿಕಿತ್ಸೆ ಸಿಗುವುದು ಎಂದು ಹೇಳಿದರು.
ಸಂಗಮ ಸಂಸ್ಥೆಯ ಸಹ ನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಪ್ರಾಸ್ತಾವಿಕ ವಾಗಿ ಮಾತನಾಡಿದರು,
ತೇಜಶ್ವಿನಿ ಹಳ್ಳದಕೇರಿನ ನಿರೂಪಿಸಿದರು, ಹಾಗೂ ರಾಜೀವ ಕುರಿಮರಿ, ಸ್ವಾಗತಿಸಿದರು ಶ್ರೀಧರ ಕಡಕೋಳ ವಂದಿಸಿದರು.
ಈ ಸಂದರ್ಭದಲ್ಲಿ ಪೃಥ್ವಿ, ರೊನಾಲ್ಡ್, ವಿಶೇಷ ಚೇತನರು, ಮಕ್ಕಳು, ಮತ್ತು ಸಂಗಮ ಸಂಸ್ಥೆಯ ಸಿಬ್ಬಂದಿಗಳಾದ ವಿಜಯ ವ್ಹಿ ಬಂಟನೂರ, ಬಸಮ್ಮ, ಮಲಕಪ್ಪ ಹಲಗಿ ಅನೇಕರು ಇದ್ದರು.