ಮೂಡಲಗಿ: ಶಾಲೆಗಳಲ್ಲಿ ಮೇಲಿಂದ ಮೇಲೆ ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಪೂರಕವಾಗುವುದರ ಜೊತೆಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸದೃಢಗೊಳಿಸುತ್ತವೆ ಎಂದು ಮೂಡಲಗಿ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯೆ ಹಾಗೂ ಶಿಕ್ಷಕರಾದ ಲಕ್ಷ್ಮೀ ಹೆಬ್ಬಾಳ ಹೇಳಿದರು.
ಅವರು ತುಕ್ಕಾನಟ್ಟಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಶುಕ್ರವಾರ ಸಂಜೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಶಾಲೆಯಲ್ಲಿ ಕಳೆದ 5-6 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ಬಹುಮುಖ ಪ್ರತಿಭೆಗೆ ಅವಕಾಶ ಮಾಡಿಕೊಡುವ ಶುಕ್ರವಾರ ಸಂಜೆ ಎಂಬ ಕಾರ್ಯಕ್ರಮವನ್ನು ವಾರಕ್ಕೆ ಒಂದು ಸಲ ನಡೆಸಲಾಗುತ್ತಿದೆ. ಇದರಲ್ಲಿ ಭಕ್ತಿ ಗೀತೆ, ಭಾವಗೀತೆ, ರಸಪ್ರಶ್ನೆ, ಜನಪದ ಗೀತೆ, ರಂಗೋಲಿ ಹೀಗೆ ನಾನಾ ಸ್ಪರ್ಧೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯಿಂದಲೇ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ಈ ವಾರ ವಿದ್ಯಾರ್ಥಿಗಳಿಗೆ ಶರಣರ ವಚನಗಳ ಕಂಠ ಪಾಠವನ್ನು ಮೂರು ವಿಭಾಗದಲ್ಲಿ ನಡೆಸಲಾಗುತ್ತಿದೆ. ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಹೊಸತನವನ್ನು ನೀಡುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಧಾನ ಗುರುಗಳಾದ ಎ.ವ್ಹಿ. ಗಿರೆಣ್ಣವರ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪುಷ್ಪಾ ಭರಮದೆ, ವಿಮಲಾಕ್ಷಿ ತೋರಗಲ್, ಕುಸುಮಾ ಚಿಗರಿ, ಶೀಲಾ ಕುಲಕರ್ಣಿ, ರೂಪಾ ಗದಾಡಿ, ಜ್ಯೋತಿ ಉಪ್ಪಾರ, ಶಿವಲೀಲಾ ಹುಲಕುಂದ, ಖಾತುನ ನದಾಫ್, ಎಸ್.ಡಿ. ಲಮಾಣಿ, ಮಹಾದೇವ ಗೋಮಾಡಿ, ಕಿರಣ ಭಜಂತ್ರಿ, ಹೊಳೆಪ್ಪ ಗದಾಡಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು 8ನೇ ವರ್ಗದ ವಿದ್ಯಾರ್ಥಿ ಸಿಂಚನಾ ಪತ್ತಾರ ನಿರೂಪಿಸಿದರು.