ಮೂಡಲಗಿ – ಪವಾಡ ಪುರುಷರ ಪುಣ್ಯ ಭೂಮಿ ಮೂಡಲಗಿ ಶ್ರೀ ರೇವಣಸಿದ್ಧೇಶ್ವರು ಸಂಚರಿಸಿ ಧಾರ್ಮಿಕ ಬೋಧನೆ ಮಾಡಿರುವ ಸಾವಿರಾರು ಊರುಗಳಲ್ಲಿ ಮೂಡಲಗಿಯೂ ಒಂದು. ಇವರ ಬೋಧನೆ ಸ್ವೀಕರಿಸಿದ ಮಹಾಪುರುಷ ಶ್ರೀ ಶಿವಬೋಧರಂಗರು ಇಲ್ಲಿಯೇ ಮೂಡಣ ದಿಕ್ಕಿನಲ್ಲಿ ನೆಲೆನಿಂತರು. ಆ ಕಾರಣ ಮೂಡಲಗಿರಿಯೆನಿಸಿಕೊಂಡಿದ್ದ ಊರು ಬರುಬರುತ್ತ ಮೂಡಲಗಿಯಾಯಿತು. ಇಬ್ಬರು ಮಹಾಪುರುಷರು ನಡೆದಾಡಿದ ಈ ಭೂಮಿ ಸ್ವರ್ಗವಾಗಿದೆ. ಆಮೇಲೆ ಸಿದ್ಧ ಸಂಸ್ಥಾನ ಪೀಠ ಎನಿಸಿಕೊಂಡ ಶ್ರೀ ಶಿವಬೋಧರಂಗ ಸ್ವಾಮೀಜಿಗಳ ಮಠವು ಸುತ್ತ ಮುತ್ತಲ ಪ್ರದೇಶದಲ್ಲಿ ಹೆಸರುವಾಸಿಯಾಗಿದೆ.
ಪ್ರತಿ ವರ್ಷದಂತೆ ಈ ವರ್ಷವು ಈ ಸಿದ್ಧಸಂಸ್ಥಾನ ಪೀಠದ ಮಠದಲ್ಲಿ ಶ್ರೀ ಶಿವಬೋಧ ಸ್ವಾಮೀಜಿಯವರ ಪುಣ್ಯ ತಿಥಿ ಅತೀ ವಿಜೃಂಭಣೆಯಿಂದ ನಡೆಯುತದೆ. ಸಹಸ್ರಾರು ಭಕ್ತರು ರಾತ್ರಿ ಧೀರ್ಘದಂಡ ನಮಸ್ಕಾರ ಹಾಕುತ್ತಾರೆ,ಮಧ್ಯಾಹ್ನ 12 ಗಂಟೆಗೆ ಫಲ್ಲಕಿ ಉತ್ಸವ ಜರಗುವುದು ಮತ್ತು ರಾತ್ರಿ ಸಕ್ಕರೆ ಹಂಚುತ್ತಾರೆ. ಈ ಪವಾಡ ಪುರುಷನ ಹೆಸರಿನಲ್ಲಿ ತಮ್ಮ ಕಾರ್ಯಸಿದ್ಧಿಗಾಗಿ ಕ್ವಿಂಟಲ್ ಗಟ್ಟಲೆ ಸಕ್ಕರೆಯನ್ನು ಬಡವರಿಗೆ ಹಂಚುವುದಾಗಿ ಭಕ್ತರು ಬೇಡಿಕೊಂಡಿರುತ್ತಾರೆ ಹಾಗೂ ಅದರಂತೆ ನಡೆದುಕೊಳ್ಳುತ್ತಾರೆ. ಅದರ ಪರಿಣಾಮ ಪ್ರತಿವರ್ಷ ಇಲ್ಲಿ ಟನ್ ಗಟ್ಟಲೆ ಸಕ್ಕರೆ ಸಂಗ್ರಹವಾಗುತ್ತದೆ.
ಮೂರು ದಿನಗಳು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನ ಪ್ರಸಾದ ವ್ಯವಸ್ಥೆ ಬಂಧ ಭಕ್ತರಿಗೆ ಇರುತ್ತದೆ.
ಮೇ,17 -2024ರಂದು ಇಡೀ ರಾತ್ರಿ ಧೀರ್ಘದಂಡ ನಮಸ್ಕಾರ ಹಾಕುತ್ತಾರೆ, ಮೇ,18 ರಂದು ಫಲ್ಲಕಿ ಉತ್ಸವ (ಮೇಲಿನ ಮಠದಿಂದ ಕೆಳಗಿನ ಮಠದವರೆಗೆ)ಮೇ 20,ಕ್ಕೆ ಸಾಮೂಹಿಕವಾಗಿ ಭಕ್ತರಿಂದ ಸಕ್ಕರೆ ಹಚ್ಚುವ ಕಾರ್ಯ ನಡೆಯುತ್ತದೆ.ಈ ಕಾರ್ಯಕ್ರಮದಲ್ಲಿ ಸುತ್ತಲಿನ ಹಳ್ಳಿಗಳಿಂದ ಭಕ್ತರ ದಂಡೇ ಹರಿದು ಬರುತ್ತದೆ. ಶ್ರೀ ಶಿವಬೋಧರ ಪುಣ್ಯ ತಿಥಿಯಲ್ಲಿ ಜನರು ಪಾಲ್ಗೊಳ್ಳುವುದನ್ನು ಕಂಡರೆ ಇದೊಂದು ಮಹಾಸಾಗರದಂತೆ ಕಾಣುತ್ತದೆ. ಹರಕೆ ತೀರಿಸಿಕೊಳ್ಳಲು ಇದೊಂದೆ ಅವಕಾಶ ಇರುವುದು ಅಂತ ಜನರು ಹೆಚ್ಚಾಗಿ ಸೇರಿ ಜಾತ್ರೆ ಹಾಗೆ ಇದ್ದನ್ನು ಕಂಡು ಎಲ್ಲರ ಜೊತೆಯಲ್ಲಿ ಸಂತೋಷ ಹರುಷದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.
ಈ ಸಲದ ಶ್ರೀ ಮಾರುತಿದೇವರ ಓಕುಳಿ ಗುರುವಾರ ಮೇ,23-2024ಕ್ಕೆ ಇದೆ. ಹೊಂಡ ಪೂಜೆ ( ಕೊಂಡ ಪೂಜೆ ) ಶುಕ್ರವಾರ ಮೇ, 24ಕ್ಕೆ , ನಡೋಕುಳಿ ಶನಿವಾರ ಮೇ,25ಕ್ಕೆ ಕಡೆಯ ಓಕುಳಿ ಮತ್ತು ಸೋಮವಾರ ಮೇ, 27ಕ್ಕೆ ಶ್ರೀರೇವಣಸಿದ್ಧೇಶ್ವರ ಗವಿಯಲ್ಲಿ ಜಾತ್ರೆ ಸಡಗರ.,ಗವಿಯಿಂದ ಶ್ರೀ ರೇವಣಸಿದ್ಧೇಶ್ವರ ಫಲ್ಲಕಿ ಬಂದ ನಂತರ ಅಂದೆ ಸಂಜೆ 6 ಗಂಟೆಗೆ ಶ್ರೀ ಮಾರುತಿ ದೇವಸ್ಥಾನ ದಿಂದ ಶ್ರೀ ಬಸವೇಶ್ವರ ದೇವಸ್ಥಾನದ ವರೆಗೆ ಶ್ರೀ ರೇವಣಸಿದ್ಧೇಶ್ವರ ರಥೋತ್ಸವ ಜರುಗುವುದು.