ಮುನವಳ್ಳಿ: .”ರೈತರು ಆಧುನಿಕ ತಂತ್ರಜ್ಞಾನವನ್ನು ತಮ್ಮ ಕಬ್ಬಿನ ಬೇಸಾಯದಲ್ಲಿ ಆಳವಡಿಸಬೇಕು ಮತ್ತು ಕಬ್ಬಿನ ಇಳುವರಿ ಹೆಚ್ಚಿಸಿ ಆರ್ಥಿಕವಾಗಿ ಸಬಲರಾಗಬೇಕು” ಎಂದು ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆಯ ಕೇನ್ ವಿ ಪಿ, ಎನ್ ಎಸ್ ಮುಗಳಖೋಡ ಹೇಳಿದರು.
ಸಮೀಪದ ತೆಗ್ಗಿಹಾಳ ಗ್ರಾಮದ ಕಿರೋಜಿ ಅವರ ಹೊಲದಲ್ಲಿ ನಡೆದ ಶ್ರೀ ರೇಣುಕಾ ಸಕ್ಕರೆ ಕಾರ್ಖಾನೆ ಮತ್ತು ಸಾಲಿಡೈರಡ ಕಂ., ಇವರ ಜಂಟಿ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಗೊಣ್ಣೆ ಹುಳು ನಿಯಂತ್ರಣ ಮತ್ತು ಕಬ್ಬಿನ ಸುಸ್ಥಿರ ಬೇಸಾಯ ಕಾರ್ಯಕ್ರಮದಲ್ಲಿ ಅವರು ರೈತರನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಬೆಳಗಾವಿಯ.ಅಧಿಕಾರಿ ಡಾ. ಚೌಡರೆಡ್ಡಿ ಮಾತನಾಡಿ ” ಕಬ್ಬಿನ ಬೆಳೆಗೆ ಗೊಣ್ಣೆ ಹುಳು ಆಗುವುದಕ್ಕೆ ಮೊದಲು ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು.ಇಲ್ಲದಿದ್ದರೆ ಕಬ್ಬಿನ ಬೆಳೆಗೆ ಗೊಣ್ಣೆ ಹುಳು ಬಾಧೆ ತಗುಲಿದ ಮೇಲೆ ನಿಯಂತ್ರಣ ಕಷ್ಟ ಹಾಗು ಸಾವಿರಾರು ರೂಪಾಯಿ ಖರ್ಚು ಮಾಡಿ ರೈತರು ಬೆಳೆ ಉಳಿಸಿಕೊಳ್ಳಲು ಪರದಾಡ ಬೇಕಾಗುತ್ತದೆ.” ಎಂದು ತಿಳಿಸಿದರು.
ಸಾಲಿಡೈರಡೆ ಕಂಪನಿಯ ಸಮೀರ ಮಿರ್ಜಾ,ಡಿ ಆಯ್.ಹೆಗಡೆ.,ಕಬ್ಬಿನ ಇಳುವರಿ ಹೆಚ್ಚಿಸಲು ರೈತರಿಗೆ ನಮ್ಮ ಕಂಪನಿಯು ಸಹಾಯ ಮಾಡುವದಾಗಿ ತಿಳಿಸಿದರು. ಇದೆ ಸಂದರ್ಭದಲ್ಲಿ ಕಾರ್ಖಾನೆ ಯ ಅಧಿಕಾರಿಗಳಾದ ಕೇನ ಮ್ಯಾನೇಜರ್ ಎಸ್ ಆರ್ ಕರಿಕಟ್ಟಿ, ಎ.ಸಿ.ಎಮ್ ಬಿ ಎ.ಶೇಗುಣಿಸಿ, ಗುರವ, ಬಟಕುರ್ಕಿ,ಚಟ್ನಿಸ್,ಕವಳಿಕಾಯ,ಕಾಂಬಳೆ ಹಾಗು ಕಾರ್ಖಾನೆಯ ಸಿಬ್ಬಂದಿಯಾದ ವಂಟಮೊರಿ, ಸಾವಂತ, ಮಡಿವಾಳರ, ಕಡಕೊಳ,ಜೈನ್, ಕೊಟ್ಟರಶೆಟ್ಟಿ, ಮಾಳಗಿ, ಪಾಟೀಲ, ನಂದಗಾಂವ, ಡಾಂಗಿಮಠ , ತೆಗ್ಗಿಹಾಳ. ಗ್ರಾಮದ ರೈತರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು ಕಾರ್ಖಾನೆಯ ಎ.ಜಿ.ಎಮ್ ಮಹಾವೀರ ಮಲಗೌಡ್ರ ಕಾರ್ಯಕ್ರಮ ನಡೆಸಿಕೊಟ್ಟರು ಮತ್ತು ರಾಘವೇಂದ್ರ ಗುದಗಾಪೂರ ವಂದನಾರ್ಪನೆ ಮಾಡಿದರು.