spot_img
spot_img

ಆಮರಣಾಂತ ಉಪವಾಸ ಸತ್ಯಾಗ್ರಹ ; ಮುಖಂಡ ಬಂಗಾರೆಪ್ಪಗೌಡ ಬಿರಾದಾರ ಹೇಳಿಕೆ

Must Read

- Advertisement -

ಬೇಡಿಕೆ ಈಡೇರುವರೆಗೆ ಕದಲುವ ಮಾತೇ ಇಲ್ಲ

ಸಿಂದಗಿ: ಬೇಡಿಕೆ ಈಡೇರುವವರೆಗೆ ಸತ್ಯಾಗ್ರಹ ಜಾಗೆ ಬಿಟ್ಟು ಕದಲುವುದಿಲ್ಲ, ಅಧಿಕಾರಿಗಳಿಗೆ ಹೇಳಿ ಹೇಳಿ ಸಾಕಾಗಿದೆ, ಮನವಿಯನ್ನೂ ಸಲ್ಲಿಸಲಾಗಿದೆ, ಸಮಸ್ಯೆಗೆ ಸ್ಪಂದನೆ ಸಿಕ್ಕಿಲ್ಲ  ನಾಳೆಯಿಂದ ಆಮರಣಾಂತ  ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡ ಬಂಗಾರೆಪ್ಪಗೌಡ ಬಿರಾದಾರ ಹೇಳಿದರು.

ಆಲ್ಮೆಲ್ ತಾಲೂಕಿಗೆ ಸೇರ್ಪಡೆಯಾದ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಮರಳಿ ಸಿಂದಗಿ ತಾಲೂಕಿಗೆ ಸೇರಿಸುವಂತೆ ಪಟ್ಟಣದ ಖಾಸಗಿ ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

- Advertisement -

ಲೋಕಸಭೆ ಚುನಾವಣೆಯಲ್ಲಿ ನಾವ್ಯಾರೂ ಹಕ್ಕು ಚಲಾಯಿಸುವುದಿಲ್ಲ, ಹೋರಾಟ ನಿಲ್ಲಿಸುವುದಿಲ್ಲ. ಆಲಮೇಲ ಪಟ್ಟಣ ತಾಲೂಕಾಗಿ ಪರಿವರ್ತನೆಯಾಗುತ್ತಿದ್ದಂತೆ ಗಬಸಾವಳಗಿ ಹಾಗೂ ಬಿಸನಾಳ ಗ್ರಾಮಗಳನ್ನು ಸಮೀಪದ ಸಿಂದಗಿಯನ್ನು ಬಿಟ್ಟು ಆಲಮೇಲ ತಾಲೂಕಿಗೆ ಸೇರಿಸಿರುವುದೇ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಗಬಸಾವಳಗಿಯಲ್ಲಿ ಉಭಯ ಗ್ರಾಮಸ್ಥರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ನ್ಯಾಯಾಲಯ, ತಾಲೂಕು ಕಚೇರಿ ಕೆಲಸಗಳಿಗೆ 40 ಕಿ.ಮೀ.ದೂರದ ಆಲಮೇಲ ಪಟ್ಟಣಕ್ಕೆ ತೆರಳಬೇಕಾಗಿದೆ. ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು ಯಾವುದೇ ಪ್ರಮಾಣ ಪತ್ರ ಅಥವಾ ಸರ್ಕಾರಿ ಸೌಲಭ್ಯ ಪಡೆಯಲು ಆಲಮೇಲಕ್ಕೆ ಅಲೆದಾಡಿ ಸಾಕಾಗಿದೆ. ಬರದಿಂದ ಮೊದಲೇ ಕಂಗೆಟ್ಟಿರುವ ನಮಗೆ ಈ ಅಲೆದಾಟ ಹೊರೆಯಾಗಿದೆ. ನಮ್ಮೂರಿಂದ ಆಲಮೇಲಕ್ಕೆ ಸರಿಯಾದ ವಾಹನ ಸೌಲಭ್ಯಗಳೂ ಇಲ್ಲ. ಸರ್ಕಾರ ನಿಯಮಗಳನ್ನು ಸಾರ್ವಜನಿಕರ ಹಿತಕ್ಕಾಗಿ ರೂಪಿಸಬೇಕು  ಸಿಂದಗಿ ಪಟ್ಟಣ ಕೇವಲ 13 ಕಿ.ಮೀ.ದೂರದಲ್ಲಿದ್ದು, ಎರಡು ಗ್ರಾಮಗಳನ್ನು ಸಿಂದಗಿ ತಾಲೂಕು ವ್ಯಾಪ್ತಿಗೆ ಸೇರಿಸಬೇಕು. ಇದರಿಂದ ನಿತ್ಯದ ಕೆಲಸಗಳಿಗೆ ಅನುಕೂಲವಾಗುತ್ತದೆ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ. ಈ ಕುರಿತು ಸಂಬಂಧಿಸಿದ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಅನಿವಾರ್ಯ ಕಾರಣಗಳಿಂದ ಹೋರಾಟದ ಹಾದಿ ಹಿಡಿಯಬೇಕಾಗಿದೆ. ನ್ಯಾಯ ಸಿಗುವವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಮುಂದುವರೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಭುಗೌಡ ಬಿರಾದಾರ ಅಧ್ಯಕ್ಷರು ಹೋರಾಟ ಸಮಿತಿ, ಸಾಹೇಬಗೌಡ ಬಿರಾದಾರ, ಬಾಬಾಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಗಂಗಪ್ಪಗೌಡ ಬಿರಾದಾರ, ಶಿವಶರಣ ಹೇಳವರ, ಮಲ್ಲಯ್ಯ ಹಿರೇಮಠ, ಬಸನಗೌಡ ಬಿರಾದರ, ಬಾಬುರೆಡ್ಡಿ ಬಿರಾದರ.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group