spot_img
spot_img

ಹಳೆಯ ಪಿಂಚಣಿ ವ್ಯವಸ್ಥೆ (ಓಪಿಎಸ್) ಜಾರಿ; ಸರ್ಕಾರದ ಕ್ರಮಕ್ಕೆ ಸ್ವಾಗತ – ಇವಣಗಿ

Must Read

- Advertisement -

ಸಿಂದಗಿ: 2006 ಏಪ್ರಿಲ್ 1 ಕ್ಕಿಂತ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸುವ ಸರ್ಕಾರದ ನಿರ್ಧಾರ ಅತ್ಯಂತ ಸೂಕ್ತವಾದದ್ದು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ತಾಲೂಕು ಘಟಕ ಸಿಂದಗಿಯ ನಿರ್ದೇಶಕರಾದ ರಾಯಪ್ಪ ಇವಣಗಿ ಅಭಿಪ್ರಾಯ ತಿಳಿಸಿದರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ದ ಮುಂದೆ ಶುಕ್ರವಾರರಂದು ತಾಲೂಕಿನಲ್ಲಿ ಸರ್ಕಾರದ ಈ ಆದೇಶಕ್ಕೆ ಒಳಪಡಲಿರುವ 32 ಜನ ಶಿಕ್ಷಕರ ಅಭಿಮತ ಅರ್ಜಿಯನ್ನು  ಸರಕಾರಕ್ಕೆ ಅವರು ಸಲ್ಲಿಸಿ  ಮಾತನಾಡಿದರು.

ಅಭಿಮತ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಪತ್ರಾಂಕಿತ ವ್ಯವಸ್ಥಾಪಕರಾದ ಅಶೋಕ  ಗಜಾಕೋಶರವರು, ತಾವುಗಳೆಲ್ಲ ಸಲ್ಲಿಸಿದ ಅಭಿಮತ ಅರ್ಜಿಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.

- Advertisement -

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಧೀಕ್ಷಕರಾದ  ಎಸ್ ಎ ಬಂದೆ,  ಚಿದಾನಂದ ಹಿರೇಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಸೋಮಪುರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಮಹಾಂತೇಶ ಗುಂದಗಿ, ಎಂ ಎನ್ ವಡೆಯರ, ಎ ಎಂ ಮರ್ತೂರ, ಅಬ್ಬಾಸಲಿ ಮಣೂರ, ಶ್ರೀಶೈಲ ರೋಡಗಿ ಶಿಕ್ಷಕರಾದ  ಎಸ್ ಎ ಬಿರಾದಾರ, ಸಾಹೇಬಗೌಡ ಹರನಾಳ, ಭೀಮರಾಯ ಕೊಟಾರಗಸ್ತಿ, ಜಗದೀಶ ಹಿಕ್ಕನಗುತ್ತಿ, ಅನ್ನಪೂರ್ಣ ತುಂಬಗಿ, ವಿಜಯಲಕ್ಷ್ಮಿ ಎಚ್ ಕೆ, ವಿಜಯಾ ಹತ್ತಳ್ಳಿ, ಕವಿತಾ ಬ್ಯಾಳಿ, ಧನಲಕ್ಷ್ಮಿ ವಿ, ಸುಜಾತಾ ಕೋರಿ, ಸುಮಯ್ಯ ಝಂಡೆ, ಶಂಕರಗೌಡ ಬೋರಾವತ, ಬಿ ಜಿ ಯಂಕಂಚಿ, ಬಿಸಿ ಕೆರಕಿ, ಪ್ರಕಾಶ ದೋರನಳ್ಳಿ, ನವೀನ ಕುಲಕರ್ಣಿ, ಅಶೋಕ ದಿಂಡವಾರ, ಚರಲಿಂಗಯ್ಯ ಹಿರೇಮಠ, ಮಹಮ್ಮದ್ ಆರೀಫ್ ಮೇಲಿನಮನಿ, ಆಯೇಶಾ ಅತ್ತಾರ್, ಬಾಲಪ್ಪ ಕೋಟಿ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group