spot_img
spot_img

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ಪ್ರವೇಶ ಪತ್ರ ವಿತರಣೆ

Must Read

- Advertisement -

ಮೈಸೂರು -ನಗರದ ವಿನಾಯಕನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ಪ್ರವೇಶ ಪತ್ರ ವಿತರಣೆ ಸಮಾರಂಭವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಶಾಲೆಗೆ ಸಹಾಯ ನೀಡುವಂತಹ ಹಲವಾರು ಗಣ್ಯರು ಭಾಗವಹಿಸಿದ್ದರು. ಪರೀಕ್ಷೆಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೆ ಶುಭವನ್ನು ಕೋರಿದರು. ಲಯನ್ ವೆಂಕಟೇಶ್ ಪ್ರಸಾದ್‍ರವರು ಲೇಖನ ಸಾಮಗ್ರಿಗಳನ್ನು ಒದಗಿಸಿದ್ದರು. ಕೆ.ಆರ್.ಯೋಗಾನರಸಿಂಹನ್ (ಮುರುಳಿ) ಎಲ್ಲರಿಗೂ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಎಂ.ಜಿ.ಮಂಜುನಾಥ್ ಶಾರದೆ ಪೂಜೆಯನ್ನು ನೆರವೇರಿಸಿದರು. 

ಈ ಸಂದರ್ಭದಲ್ಲಿ ಶಾಲೆಗೆ ಸಹಕಾರ ನೀಡಿದ ಪಣೀಶ್, ಮುಖ್ಯಸ್ಥರು, ಎಡಿನ್ ಬ್ರಿಡ್ಜ್ ಫೌಂಡೇಶನ್ ಹಾಗೂ ಗಣೇಶ್ ಮಂಜುನಾಥ್, ಕ್ಲೊಬರ್ ಲ್ಯೂಬ್ರಿಕೇಶನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. 

- Advertisement -

ಎಸ್‍ಡಿಎಂಸಿ ಅಧ್ಯಕ್ಷ ಸ್ವಾಮಿ, ಶಾಲಾ ಮುಖ್ಯ ಶಿಕ್ಷಕ ಟಿ.ಜೆ.ಆನಂದ್, ಗುರುಪ್ರಸಾದ್. ಡಿ.ಆರ್.ಶೇಷಾಚಲ, ಜಿತಿನ್ ಸಾಲ್ಡಾನಾ, ಶ್ರೀಮತಿ ಜಯಂತಿ, ವೆಂಕಟಾಚಲ, ಬಾಲಸುಬ್ರಹ್ಮಣ್ಯ, ಗಿರೀಶ್, ಕಾಡುಬಸವ ಟ್ರಾವೆಲ್ಸ್ ಮಾಲೀಕ ಬಸವರಾಜು, ಚೇತನ್, ಸುಬ್ರಹ್ಮಣ್ಯ, ಶ್ರೀಮತಿ ಕಾವ್ಯ, ಶಾಲಾ ಶಿಕ್ಷಕರು, ಕಛೇರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ಭಾಷಾ ಶಿಕ್ಷಕ ಎಸ್.ಆನಂದ ಕಾರ್ಯಕ್ರಮ ನಿರೂಪಿಸಿದರು.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group