- Advertisement -
ಮುರಘಾಮಠದ ವಿದ್ಯಾರ್ಥಿಗಳ ಪಾದಯಾತ್ರೆ
ಮೂಡಲಗಿ: ಧಾರವಾಡದ ಮುರಘಾಮಠದ ಪ್ರಸಾದ ನಿಲಯದ ವಿದ್ಯಾರ್ಥಿಗಳ ಪಾದಯಾತ್ರೆಯು ಮೂಡಲಗಿಗೆ ಆಗಮಿಸಿತು.
ಸ್ಥಳೀಯ ಎಂಇಎಸ್ ಕಾಲೇಜು ಬಳಿಯಲ್ಲಿ ಪಾದಯಾತ್ರಿ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡರು.
- Advertisement -
ಈ ಸಂದರ್ಭದಲ್ಲಿ ಪಿ.ಕೆ. ರಡ್ಡೇರ ಮಾತನಾಡಿ ‘ಅನ್ನ ಮತ್ತು ಜ್ಞಾನ ದಾಸೋಹಕ್ಕೆ ಹೆಸರಾಗಿರುವ ಧಾರವಾಡದ ಮುರಘಾಮಠವು ಅನೇಕ ಗ್ರಾಮೀಣ ಮತ್ತು ಬಡ ಮಕ್ಕಳಿಗೆ ಆಸರೆಯಾಗಿ ಬೆಳೆಸಿದೆ’ ಎಂದರು.
ಮೃತ್ಯುಂಜಯಪ್ಪಗಳು ನೂರು ವರ್ಷಗಳ ಪೂರ್ವದಲ್ಲಿ ಸ್ಥಾಪಿಸಿರುವ ಪ್ರಸಾದ ನಿಲಯವು ನಿರಂತರವಾಗಿ ನಡೆದುಕೊಂಡು ಬಂದಿರುವುದು ಮಠದ ದಾಸೋಹ ಪರಂಪರೆಯು ವಿಶೇಷವಾಗಿದೆ ಎಂದರು.
ಪಾದಯಾತ್ರೆಯಲ್ಲಿ ಆಗಮಿಸಿ ೪೦ಕ್ಕೂ ಅಧಿಕ ವಿದ್ಯಾರ್ಥಿಗಳ ಪಾದಸೇವೆ ಮತ್ತು ಪ್ರಸಾದ ಸೇವೆ ಜರುಗಿತು. ಮೂಡಲಗಿಯಿಂದ ಪಾದಯಾತ್ರೆಯ ಮೂಲಕ ಅಥಣಿಯ ಮುರಘಾಮಠಕ್ಕೆ ಸಾಗಿದರು.
- Advertisement -
.