spot_img
spot_img

ಹೆಣ್ಣು ಜಗದ ಕಣ್ಣು: ಶ್ರೀಮತಿ ವಿದ್ಯಾ ರೆಡ್ಡಿ

Must Read

spot_img

ಕಲ್ಲೋಳಿ: ಮಾನವ ಸಂಸ್ಕೃತಿಯ ಮುಖ್ಯ ಭಾಗ ಹೆಣ್ಣಾಗಿದ್ದರೂ ಜಗತ್ತಿನಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಪಡುವವಳು ಅವಳೇ. ತನ್ನ ಎಲ್ಲಾ ನೋವುಗಳಿಗೂ  ಹೆದರದ ಸ್ತ್ರೀ ಅದನ್ನು ಅನುಭವಿಸಿಯೂ ಅದನ್ನೆಲ್ಲ ಮರೆತು ತನ್ನಂತೆ ನೋವು ಅನುಭವಿಸುವ ಇತರ ಜೀವಿಗಳಿಗೆ ಆಸರೆಯಾಗುತ್ತಾಳೆ ಎಂದು ಗೋಕಾಕದ ಸಾಹಿತ್ಯ ಚಿಂತಕಿ ಶ್ರೀಮತಿ ವಿದ್ಯಾ ರೆಡ್ಡಿ ಹೇಳಿದರು.

ಅವರು ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಹೆಣ್ಣು ಜಗದ ಕಣ್ಣಾಗಿದ್ದಾಳೆ ಅವಳನ್ನು ಪೋಷಣೆ ಮಾಡುವುದು ಎಲ್ಲರ ಹೊಣೆ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ. ಸುರೇಶ ಹನಗಂಡಿ ಮಾತನಾಡಿ ಹೆಣ್ಣು ಮಗಳಾಗಿ, ಸೊಸೆಯಾಗಿ ಹೆಂಡತಿಯಾಗಿ, ತಾಯಿಯಾಗಿ ಅತ್ತೆಯಾಗಿ ಜೀವನದ ವಿವಿಧ ಪಾತ್ರವನ್ನು ನಿರ್ವಹಿಸುತ್ತಾಳೆ. ಅವಳಿಗೆ ಗೌರವ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ. ಜೊತೆಗೆ ಅವಳ  ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಗಟ್ಟಬೇಕು ಎಂದರು.

ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಕೆ.ಎನ್. ಸಂಗಮ್ ಮಾತನಾಡಿ, ಸ್ತ್ರೀಯರ ಸ್ಥಾನಮಾನಗಳು ಇಂದಿಗೆ ಸಾಕಷ್ಟು ಬದಲಾವಣೆಗಳಾಗಿವೆ. ಸ್ತ್ರೀ ಕೂಡ ಪುರುಷರಷ್ಟೇ ಸರಿಸಮನಾದ ಬದುಕನ್ನು ಸಾಗಿಸುತ್ತಿದ್ದಾರೆ. ತಾನು ಅಬಲೆ ಅಲ್ಲ ಸಬಲೆ ಎಂಬುದನ್ನು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಾಬೀತು ಪಡಿಸಿದ್ದಾಳೆ ಎಂದರು. ಉಪನ್ಯಾಸಕಿ ಪರ್ವಿಣ ಅತ್ತಾರ ವಚನಗಾಯನ ಪ್ರಸ್ತುತ ಪಡಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಹಿಳೆಯರನ್ನು ಸತ್ಕರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಬಾಳವ್ವ ಕಂಕಣವಾಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಮತಿ ಶಾಂತಾ ಬಸಗೌಡ ಪಾಟೀಲ, ಶ್ರೀಮತಿ ಚಂದ್ರಾ  ರಾಯಪ್ಪ ಪಾಟೀಲ, ಶ್ರೀಮತಿ ಮಹಾದೇವಿ ಬಾಳಪ್ಪ ಬೆಳಕೂಡ, ಶ್ರೀಮತಿ ನೀಲವ್ವ ಭೀಮಶಿ ಗೋರೋಶಿ,  ಶ್ರೀಮತಿ ಅನಿತಾ ಶಂಕರ ಗೋರೋಶಿ, ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯ ರಾಜು ಉಪ್ಪಾರ, ಪದವಿ ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಂಕರ ಎಂ. ನಿಂಗನೂರ, ಡಿ.ಎಸ್. ಹುಗ್ಗಿ, ಎಂ.ಬಿ.ಕುಲಮೂರ, ಬಿ.ಸಿ. ಮಾಳಿ, ವಿ.ಎಸ್.ಪಂಡಿತ,  ಕೆ.ಎಸ್.ಪರವ್ವಗೋಳ, ಮುಸ್ತಪಾ ಜಾಲಗಾರ, ರಮೇಶ ಬಾಗೋಜಿ, ವಿವಿಧ ವಿಭಾಗಗಳ ಶಿಕ್ಷಕ-ಶಿಕ್ಷಕಿಯರು, ಉಪನ್ಯಾಸಕರು, ಕಛೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಶ್ರೀಮತಿ ಗೀತಾ ಗೋರಬಾಳ ನಿರೂಪಿಸಿದರು. ಕುಮಾರಿ ಸುಶ್ಮೀತಾ ಖಾನಾಪೂರ ಪ್ರಾರ್ಥಿಸಿದರು, ಎನ್.ಆರ್. ಪಾಟೀಲ ಪ.ಪೂ. ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ವಿ. ಬಿ. ಪಂಡಿತ ಸ್ವಾಗತಿಸಿದರು, ಶ್ರೀಮತಿ ವ್ಹಿ.ವಾಯ್. ಕಾಳೆ  ಅತಿಥಿಗಳನ್ನು ಪರಿಚಯಿಸಿದರು.‌ ಶ್ರೀಮತಿ ರಾಜಶ್ರೀ ಎನ್.  ತೋಟಗಿ ವಂದಿಸಿದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿದ್ಯುತ್ ಕಳ್ಳತನ ಮಹಾಪರಾಧ: ಎಇಇ ಧರೆಪ್ಪಗೋಳ

ಸಿಂದಗಿ: ವಿದ್ಯುತ್ ಕಳ್ಳತನ ಮಹಾಪರಾಧ, ಕಳ್ಳತನ ಮಾಡಿದ ಗ್ರಾಹಕರಿಗೆ ಜೈಲುವಾಸ ಮತ್ತು ದಂಡ ಕಟ್ಟಿಟ್ಟಬುತ್ತಿ ಎಂದು ಸಿಂದಗಿ ಸಹಾಯಕ ಕಾರ್ಯನಿರ್ವಾಹಕ ವಿಶಾಲ್ ಧರೆಪ್ಪಗೋಳ ಹೇಳಿದರು. ತಾಲೂಕಿನ ಮೋರಟಗಿ...
- Advertisement -

More Articles Like This

- Advertisement -
close
error: Content is protected !!