spot_img
spot_img

ರೈಲ್ವೇ ಕಾನ್ ಸ್ಟೇಬಲ್ ನಿಂದ ಗುಂಡು: ನಾಲ್ವರ ಸಾವು

Must Read

spot_img
- Advertisement -

ಬೀದರ – ರೈಲ್ವೇ ಪ್ರೊಟೆಕ್ಷನ್​ ಫೋರ್ಸ್​ (ಆರ್​ಪಿಎಫ್​) ಕಾನ್​ಸ್ಟೆಬಲ್ ಒಬ್ಬ ಆರ್​​ಪಿಎಫ್​ ಎಸ್​​ಐ ಮಾತ್ರವಲ್ಲದೆ ಇತರ ಮೂವರನ್ನು ರೈಲೊಳಗೇ ಗುಂಡಿಟ್ಟು ಕೊಂದ ಪ್ರಕರಣ ನಡೆದಿದೆ. ಮೃತರಲ್ಲಿ ಬೀದರ ಮೂಲದವರೂ ಒಬ್ಬರಾಗಿದ್ದಾರೆ.

ಮಹಾರಾಷ್ಟ್ರದ ಪಾಲ್ಘಾರ್ ರೈಲ್ವೇ ಸ್ಟೇಷನ್​ ಬಳಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್​ಪ್ರೆಸ್​ ರೈಲೊಳಗೇ ಈ ಘಟನೆ ನಡೆದಿದೆ.

ಆರ್​​ಪಿಎಫ್​ ಕಾನ್​ಸ್ಟೆಬಲ್ ಚೇತನ್ ಸಿಂಗ್ (34) ನಾಲ್ವರನ್ನು ಕೊಂದ ಆರೋಪಿ. ಈತ ತನ್ನ ಹಿರಿಯ ಸಹೋದ್ಯೋಗಿ, ಆರ್​ಪಿಎಫ್​ ಸಬ್​​ ಇನ್​​ಸ್ಪೆಕ್ಟರ್​ ಟಿಕಾರಾಮ್ ಮೀನಾ ಮಾತ್ರವಲ್ಲದೆ ಮೂವರು ಪ್ರಯಾಣಿಕರನ್ನೂ ಗುಂಡಿಟ್ಟು ಕೊಂದಿದ್ದಾನೆ. ಅಬ್ದುಲ್ ಖಾದಿರ್​ಭಾಯ್​ (48), ಅಖ್ತರ್ ಅಬ್ಬಾಸ್ ಅಲಿ (48) ಮತ್ತು ಸದಾರ್ ಮೊಹಮ್ಮದ್ ಹುಸೇನ್ ಕೊಲೆಗೀಡಾದ ಇತರ ಮೂವರು.

- Advertisement -

ಕೊಲೆ ಮಾಡಿದ ಬಳಿಕ ರೈಲಿನ ಚೈನ್ ಎಳೆಯಲಾಗಿದ್ದು, ಮೀರಾ ರೋಡ್ ಮತ್ತು ದಹಿಸರ್ ಸ್ಟೇಷನ್​ ನಡುವೆ ರೈಲು ನಿಂತಿತ್ತು. ಆಗ ಆರೋಪಿ ಪರಾರಿ ಆಗಲೆತ್ನಿಸಿದ್ದ ಆದರೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರೈಲ್ವೇ ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಕಾನ್​ಸ್ಟೆಬಲ್ ಮುಂಬೈನ ಭಾವ್​ನಗರ ಡಿವಿಜನ್​ನಿಂದ ಕಳೆದ ಮಾರ್ಚ್​​ನಲ್ಲಿ ವರ್ಗಾವಣೆಗೊಂಡಿದ್ದ. ಇತ್ತೀಚೆಗಷ್ಟೇ ತನ್ನ ಊರಾದ ಹತ್ರಾಸ್​ಗೆ ಹೋಗಿದ್ದ ಈತ ಜು. 17ರಂದು ಮತ್ತೆ ಕೆಲಸಕ್ಕೆ ಹಾಜರಾಗಿದ್ದ. ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಿಂಗ್ ಸಂಸಾರದೊಂದಿಗೆ ನೆಲೆಸಿದ್ದು, ಪತ್ನಿ, 6 ಮತ್ತು 8 ವರ್ಷದ ಇಬ್ಬರು ಮಕ್ಕಳು ಹಾಗೂ ಪಾಲಕರು ಜೊತೆಗಿದ್ದಾರೆ.

- Advertisement -
- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group