ಸವದತ್ತಿಯಲ್ಲಿ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ

Must Read

ಸವದತ್ತಿಃ ತಾಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶಾಸಕರಾದ ವಿಶ್ವಾಸ ವೈದ್ಯ ಧ್ವಜಾರೋಹಣ ನೆರವೇರಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎನ್ ಬ್ಯಾಳಿ ಪೂಜಾ ಕಾಯಕ ನೆರವೇರಿಸಿದರು. ರತ್ನ ಸೇತಸನದಿ ಸ್ವಾತಂತ್ರ್ಯ ಗೀತೆಯನ್ನು ಹಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಗೃಹ ರಕ್ಷಕ ದಳದ ಎಂ.ಎಸ್.ಕಿತ್ತೂರ ತಮ್ಮ ವಿಶೇಷ ಕವಾಯತ್ ಮೂಲಕ ಶಾಸಕರನ್ನು ಧ್ವಜಾರೋಹಣ ನೆರವೇರಿಸಲು ಆಮಂತ್ರಿಸಿದರು.

ಎಸ್.ಬಿ.ಬೆಟ್ಟದ ಸ್ವಾಗತಿಸಿದರು. “ಸ್ವಾತಂತ್ರ್ಯದ ಈ ದಿನ ಪ್ರಗತಿಪರ ಚಿಂತನೆ. ಜಾಗತೀಕರಣ ಇವುಗಳ ಜೊತೆಗೆ ನಮ್ಮ ದೇಶಕ್ಕೆ ಸ್ವಾತಂತ್ರ್ಯಕ್ಕೆ ಕಾರಣಕರ್ತರಾದ ಮಹನೀಯರ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಅವರ ಸ್ಮರಣೆಯೊಂದಿಗೆ ಈ ದಿನ ಆಚರಿಸಬೇಕು”ಎಂದು ಶಾಸಕ ವಿಶ್ವಾಸ ವೈದ್ಯ ಕರೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ.ಎನ್.ಬ್ಯಾಳಿ ಸ್ವಾತಂತ್ರ್ಯದ ಮಹತ್ವ ಕುರಿತು ಮಾತನಾಡಿದರು.ಈ ಸಂದರ್ಭದಲ್ಲಿ ರಾಣಿ ಅಬ್ಬಕ್ಕದೇವಿ ಸ್ನೇಹ ಕೊಡ್ಲಿಮಠ, ವರ್ಷ ಅರಬಾವಿ, ಕಿತ್ತೂರ ರಾಣಿ ಚನ್ನಮ್ಮ ವೈಷ್ಣವಿ ಮುನವಳ್ಳಿ ಸಫಿಯಾ ಕುರೇಶ, ಅಸದ್ ಶಹಪುರ ವಿವಿಧ ವೇಷಭೂಷಣಗಳಲ್ಲಿ ಗಮನ ಸೆಳೆದರು.

ಬಿ.ಐ.ಇ.ಆರ್.ಟಿಗಳಾದ ದುರಗಪ್ಪ ಭಜಂತ್ರಿ. ವೈ.ಬಿ.ಕಡಕೋಳ, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವೀರಯ್ಯ ಹಿರೇಮಠ, ರಾಜು ಭಜಂತ್ರಿ.ರತ್ನ ಸೇತಸನದಿ, ಎಂ.ಎನ್ ಕರಡಿಗುಡ್ಡ, ಡಾ.ಬಿ.ಐ.ಚಿನಗುಡಿ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ರವಿ ನಲವಡೆ, ರಾಮಚಂದ್ರಪ್ಪ.ಪಿ.ಸಿ ಫರೀಟ, ಎಚ್.ಎಲ್.ನದಾಫ, ಮೌಲಾನಾ ಆಜಾದ ಶಾಲೆಯ ಶಿಕ್ಷಕರಾದ ಎಸ್.ಎಸ್.ಹುಡೇದಮನಿ, ಶಿಕ್ಷಕಿಯರಾದ ಸುಮೇರ ಶಹಪುರ, ಸಾನಿಯಾ ಮಕಾನದಾರ, ಆಯೇಶಾ ನದಾಫ, ಗೌರವ್ವ ಚಾಡಗೌಡರ, ಜ್ಯೋತಿ ಯಲಿಗಾರ, ಮಾಶಾಭಿ ಯಡೊಳ್ಳಿ, ಜಿ,.ಎಸ್.ಸಿದ್ಲಿಂಗನವರ, ಈರಪ್ಪ ಅವರಾದಿ, ದ್ಮಾಮನಗೌಡ ಗೌಡರ, ಮಹೇಶ ಕವಲಾಪುರ ಗೃಹ ರಕ್ಷಕ ದಳದ ಎಂ.ಎಸ್.ಕಿತ್ತೂರ, ಪ್ರಭಾರಿ ಘಟಕಾಧಿಕಾರಿಗಳಾದ ಎಸ್.ಎಂ.ಕರಲಿಂಗನವರ, ಮಹೇಶ ಕವಲಾಪುರ ಮೊದಲಾದವರು ಉಪಸ್ಥಿತರಿದ್ದರು.

Latest News

ಲೇಖನ : ಜೀವನವನ್ನು ಉನ್ನತೀಕರಿಸಿಕೊಳ್ಳಬೇಕೇ ಹೊರತು ಜೀವನಶೈಲಿಯನ್ನಲ್ಲ

ಬದುಕೆಂಬುದು ಮೇಲ್ನೋಟಕ್ಕೆ ಎಲ್ಲರಿಗೂ ಒಂದೇ ರೀತಿ ಕಾಣುತ್ತದೆ. ಆದರೆ ಕೆಲವರ ಬದುಕು ಸಾರ್ಥಕತೆಯನ್ನು ಪಡೆದುಕೊಳ್ಳದೇ ಕೇವಲ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತಾಗುತ್ತದೆ. ಹಗಲು ರಾತ್ರಿ...

More Articles Like This

error: Content is protected !!
Join WhatsApp Group