ಪ್ರಪಂಚದಾದ್ಯಂತ ಇಂದು ಆಗುತ್ತಿರುವ ಪ್ರವಾಹದ ತೀವ್ರತೆಯನ್ನು ಗಮನಿಸಿದರೆ ಮುಂದಿನ ಪ್ರವಾಹದ ವೇಳೆಗೆ ಬಹುಶಃ ನಾವುಗಳು ಇರೋದೇ ಡೌಟು.
1. ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಗತಿಯು ಎಷ್ಟೇ ಮುಂಚೂಣಿಯಲ್ಲಿದ್ದರು ಕೂಡ, ನೈಸರ್ಗಿಕ ವಿಕೋಪಗಳನ್ನು ತನ್ನ ಹತೋಟಿಯಲ್ಲಿ ಇಡೋವಷ್ಟು ಮಾನವ ಬೆಳೆದಿಲ್ಲ /ಬೆಳೆಯೋದು ಸಾಧ್ಯಾನು ಇಲ್ಲಾ…
2. “ಸರ್ವಧರ್ಮ ಸಮನ್ವಯ ಮತ್ತು ಸಮಾನತೆ” ನಮಗೆಲ್ಲ ನಿಸರ್ಗ ಕಲಿಸಿದ ದೊಡ್ಡ ಪಾಠ. ಬಡವ-ಶ್ರೀಮಂತ, ವಿದ್ಯಾವಂತ-ಅವಿದ್ಯಾವಂತ, ಯಾರೇ ಇರಲಿ, ಈಗ ಸರ್ವರಿಗೂ ಗಂಜಿಕೇಂದ್ರವೇ ಮದ್ದು…
3. ನಿಮ್ಮ ತೋಳುಬಲ ಮತ್ತು ಜ್ಞಾನಬಲ ಎಷ್ಟೇ ವಿಶಾಲ ಬಲಿಷ್ಠ ಮತ್ತು ಅಗಾಧವಾಗಿದ್ದರೂ ಕೂಡ ದೈವಬಲದ ಮುಂದೆ ಇವೆಲ್ಲಾ ಶೂನ್ಯ. ಕೆಲಸಕ್ಕೆ ಬರೋದಿಲ್ಲ…
4. ಎಲ್ಲೆಲ್ಲಿ ಮಾನವ ಸಂಕುಲ/ಪ್ರಾಣಿ ಸಂಕುಲ ಅಪಾಯಕ್ಕೆ ಒಳಗಾಗುತ್ತದೆಯೋ, ಅವಾಗ ಮಾತ್ರ ಈ ದೇಶದ ಸೈನಿಕರು, ಆರಕ್ಷಕರು, ಅಗ್ನಿಶಾಮಕ ಸಿಬ್ಬಂದಿ, ಆಸ್ಪತ್ರೆಯ ವಾಹನ ಚಾಲಕರು (ಹೇ. ಚಿ) ನೆನಪಾಗುತ್ತಾರೆ ಹೊರತು, ಉಳಿದ ಸಮಯದಲ್ಲಿ ಅವರ ಕರ್ತವ್ಯ ಮತ್ತು ಯೋಗ್ಯತೆಗಳೆರಡು ನಮ್ಮಗಳ ನೆನಪಿಗೆ ಬರೋದೇ ಇಲ್ಲ….
5. ಕೋಟಿ ಇದ್ದರೇನು? ಮಾನವೀಯತೆ ಮೌಲ್ಯವಿಲ್ಲದ ಜೀವನ ನಿರರ್ಥಕ. ಜೀವನವೆಂಬುದು ಕೇವಲ ಹಣದಿಂದ ಸಾಗುವ ದೋಣಿಯಲ್ಲ, ಅದಕ್ಕೆ ಮಾನವೀಯತೆ ಎಂಬ ನಾವಿಕ ಮತ್ತು ದಾನ-ಧರ್ಮ ಎಂಬ ಹುಟ್ಟು ಅತ್ಯವಶ್ಯಕ…
6. ಸೃಷ್ಟಿಕರ್ತನ ಸೃಷ್ಟಿಯಲ್ಲಿ ಮನುಷ್ಯ ಮತ್ತು ಮೂಕ ಪ್ರಾಣಿಗಳ ದೇಹ, ಗಾತ್ರ, ಆಕಾರ ಮತ್ತು ಬುದ್ಧಿಶಕ್ತಿಯಲ್ಲಿ ಕ ಶಿ ಬ ವ್ಯತ್ಯಾಸವಿದ್ದರು ಕೂಡ ಬಾಯಾರಿಕೆ, ಹಸಿವು, ನೋವು ಮತ್ತು ಜೀವ ಒಂದೇಯಾಗಿದೆ. ಮೂಕ-ಪ್ರಾಣಿಗಳ ಮೇಲೆ ಕರುಣೆ ಮತ್ತು ದಯೆ ಇರಲಿ…
7. ಕಣ್ಣಿಗೆ ಕಂಡ ಮೊದಲ ದೇವರು ತಂದೆ-ತಾಯಿಗಳಾದರೆ, ಜೀವದ ಹಂಗು ತೊರೆದು ನಮ್ಮನ್ನು ರಕ್ಷಿಸಿದ ದೇಶದ ಸೈನಿಕರು ಮತ್ತು ಆರಕ್ಷಕರು, ನೆರಳು ನೀಡಿದ ಆಶ್ರಯದಾತರು, ಅನ್ನ ನೀಡಿದ ಅನ್ನದಾತರು/ರೈತರು, ನಮ್ಮ ನೆರವಿಗೆ ಧಾವಿಸಿದ ದಾಸೋಹಿಗಳು ಭೂಮಿಯ ಮೇಲಿನ ನಿಜವಾದ ದೇವರುಗಳು…
8. ಮಾನವಕುಲ ಸಂಕಷ್ಟಕ್ಕೊಳಗಾದಾಗ ನಮಗೆ ಅಭಯಹಸ್ತ ನೀಡುವವವರು ನಮ್ಮ ಬಂಧುಗಳು, ಆಪ್ತರು, ಅಕ್ಕ-ಪಕ್ಕದ ಸಂಬಂಧಿಕರೇ ಹೊರತು.. ಬೇರೆ ಯಾವುದೇ ಮುತ್ಸದ್ದಿಗಳಲ್ಲಾ…
9. ಇವತ್ತಿನ ಈ ನಮ್ಮ ಪರಿಸ್ಥಿತಿಗೆ, ಪ್ರತ್ಯಕ್ಷವಾಗಿ/ಪರೋಕ್ಷವಾಗಿ ನಾವೇ ನೇರ ಹೊಣೆಗಾರರು. ಹಾಗಾಗಿ ಈ ನೋವನ್ನು ನಾವೇ ಅನುಭವಿಸಬೇಕು….
10. ತಂದೆ-ತಾಯಿ ಮಾತಿಗಿಲ್ಲದ ಕಿಮ್ಮತ್ತು, ಹಿರಿಯರಿಗಿಲ್ಲದ ಮರ್ಯಾದೆ, ಗುರುವಿಗಿಲ್ಲದ ಗೌರವ, ಪ್ರಾಣಿ-ಪಕ್ಷಿಗಳ ಮೇಲಿಲ್ಲದ ದಯೆ, ಭವಿಷ್ಯದಲ್ಲಿ ಮತ್ತೊಂದು ಕ್ರೂರ ಮತ್ತು ಘನಘೋರ ಮಹಾಪ್ರಳಯಕ್ಕೆ ನಾಂದಿ…!!!!
ಮುಂದಿನ ಮಹಾ ಪ್ರಳಯವೇನಾದರೂ ಸಂಭವಿಸಿದಲ್ಲಿ ಬಹುಶಃ ಮಾನವ ಕುಲ ಉಳಿಯುವುದೇ ಅನುಮಾನ. ಅಷ್ಟರೊಳಗೆ ಎಚ್ಚೆತ್ತುಕೊಳ್ಳೋಣ.
ಹೇಮಂತ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ