ಸಿಂದಗಿ: ವಿದ್ಯಾರ್ಥಿಗಳಾದವರು ತಂದೆ, ತಾಯಿ, ಗುರು ಹೇಳಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಆರ್.ಡಿ.ಪಾಟೀಲ ಪ.ಪೂ.ಕಾಲೇಜಿನ ಪ್ರಾಚಾರ್ಯ ವಿಮಲಕಾಂತ ಪಾಟೀಲ ಹೇಳಿದರು.
ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ದಿ. ಭಾಗೀರಥಿಬಾಯಿ ಎನ್.ಬಿರಾದಾರ ಸ್ಮರಣಾರ್ಥವಾಗಿ ಉಪನ್ಯಾಸಕ ಬಿ.ಎನ್.ಬಿರಾದಾರ ಅವರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ವಿಷಯಗಳ ಉಚಿತ ಪಠ್ಯಪುಸ್ತಕ ವಿತರಣೆ ಸಮಾರಂಭದಲ್ಲಿ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ಎಲ್ಲ ದಾನಗಳಲ್ಲಿ ಪುಸ್ತಕ ಶ್ರೇಷ್ಠದಾನ. ಪುಸ್ತಕ ನಮಗೆ ಜ್ಞಾನದ ಬೆಳಕನ್ನು ನೀಡುವ ಮೂಲಕ ನಮ್ಮ ದೇಶದ ಗಣ್ಯವ್ಯಕ್ತಿಗಳ, ಇತಿಹಾಸದ, ಸಂಸ್ಕಾರ ಮತ್ತು ಚಿತ್ರಕಥೆಗಳ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತವೆ. ಪುಸ್ತಕಗಳು ತನ್ನದೆಯಾದ ಸ್ಥಾನಮಾನ ಹೊಂದಿದೆ ಹಾಗಾಗಿ ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಳೆದ 5 ವರ್ಷಗಳಿಂದ ಈ ಸರಕಾರಿ ಪ.ಪೂ.ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕ ಬಿ.ಎನ್.ಬಿರಾದಾರ ಅವರ ತಾಯಿ ಭಾಗೀರಥಿ ಬಿರಾದಾರ ಸ್ಮರಣಾರ್ಥವಾಗಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾದದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎನ್.ಆರ್.ಗಂಗನಳ್ಳಿ ಮಾತನಾಡಿ, ನಮ್ಮೆಲ್ಲರ ಜೀವನದಲ್ಲಿ ಪುಸ್ತಕಗಳು ಪ್ರಮುಖ ಪಾತ್ರವಹಿಸುತ್ತವೆ. ಪುಸ್ತಕಗಳು ಒಳ್ಳೆಯ ಗೆಳೆಯರಿದ್ದಂತೆ ಹಾಗೂ ಗುರುವಿದ್ದಂತೆ ವಿದ್ಯಾರ್ಥಿಗಳ ಮನಸ್ಸಿನ ವಿಕಾಸಕ್ಕೆ ಪುಸ್ತಕಗಳು ಅವಶ್ಯವಾಗಿದೆ. ಈಗ ಉಪನ್ಯಾಸಕರ ಪರಿಶ್ರಮದಿಂದ ನಮ್ಮ ಸರಕಾರಿ ಪ.ಪೂ.ಕಾಲೇಜು ಜಿಲ್ಲೆಯಲ್ಲಿಯೇ ಮಾದರಿ ಕಾಲೇಜುವಾಗಿ ಪರಿವರ್ತನೆಗೊಂಡಿದೆ. ಬೆಳೆಯುತ್ತಿರುವ ತಂತ್ರಜ್ಞಾನ ಯುಗದಲ್ಲಿ ಓದಿನ ಅಭಿರುಚಿ ಕಡಿಮೆಯಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕರಾದ ಬಿ.ಎನ್.ಬಿರಾದಾರ, ಮೌಲಾಲಿ ಯಾಳಗಿ, ಜಟ್ಟಿಂಗರಾಯ ಗಾಣಗೇರ್, ಮಲ್ಲಿಕಾರ್ಜುನ ಹೆಬ್ಬಾಳ, ಸಂಗೀತಾ ಪಾಟೀಲ, ಎಸ್.ಎಸ್.ಸುರಪುರ, ಪ್ರಮೋದ ಕಟ್ಟಿ, ಎನ್.ಎಂ.ಶೆಳ್ಳಗಿ, ಮಡಿವಾಳ ಎಸ್, ತೇಜಶ್ವಿನಿ ಬಿ, ಸಹನಾ ತಳಕೇರಿ, ಎಂ.ಜಿ.ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.