spot_img
spot_img

ಉಚಿತವಾಗಿ ಸಾಧನ ಸಲಕರನೆಗಳ ಸಮರ್ಪಣೆ ಹಾಗೂ ವಿತರಣಾ ಕಾರ್ಯಕ್ರಮ

Must Read

spot_img
- Advertisement -

ಹಿರಿಯ ನಾಗರಿಕರ ಅಭಿವೃದ್ದಿಗೆ ಸರ್ಕಾರ ಸಿದ್ಧ:ಸಂಸದ ಈರಣ್ಣ ಕಡಾಡಿ

ಗೋಕಾಕ: ಹಿರಿಯ ನಾಗರಿಕರಿಗಾಗಿ ಕೇಂದ್ರ ಸರ್ಕಾರವು ರಾಷ್ಟ್ರೀಯ ವಯೋಶ್ರೀ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಿರಿಯರಿಗಾಗಿ ವಿಶೇಷ ಸ್ಥಾನ ನೀಡುವ ಮೂಲಕ ಗಾಲಿ ಕುರ್ಚಿ ಸೇರಿದಂತೆ ಅನೇಕ ಸಲಕರಣೆಗಳ ಅನುಕೂಲ ಕಲ್ಪಿಸಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದರು.

ನಗರದ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ, ವಿಕಲಚೇತನರ ಹಾಗು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಬುಧವಾರ ಅಲಿಂಕೊ ಸಂಸ್ಥೆ ಆಯೋಜಿಸಿದ ಕೇಂದ್ರ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆಗಳ ಸಮರ್ಪಣೆ ಹಾಗೂ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಕಡಾಡಿ ಅವರು, ರಾಷ್ಟ್ರೀಯ ವಯೋಶ್ರೀ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುವ ಹಿರಿಯ ನಾಗರಿಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು 2017 ರಲ್ಲಿ ಆರಂಭಿಸಲಾಗಿದೆ ಎಂದರು.

- Advertisement -

ದೇಶದಲ್ಲಿ ಸುಮಾರು 10.38 ಕೋಟಿ ಹಿರಿಯ ನಾಗರಿಕರಿದ್ದಾರೆ ಅವರಲ್ಲಿ ಶೇ 70 ರಷ್ಟು ಮಂದಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಅನೇಕರು ದುರ್ಬಲರು ಮತ್ತು ಅಸಹಾಯಕರಾಗಿದ್ದರೆಂದರು.

ಗೋಕಾಕ ಮತ್ತು ಮೂಡಲಗಿ ತಾಲೂಕಿನ ಹಿರಿಯ ನಾಗರಿಕರಿಗೆ 336 ಫಲಾನುಭವಿಗಳಿಗೆ ರೂ 6.80 ಲಕ್ಷಗಳ ಸಾಧನ ಸಲಕರಣೆಗಳಾದ ಗಾಲಿಕುರ್ಚಿ, ವಾಕರ್, ಕನ್ನಡಕ, ಕೃತಕ ದಂತ, ಶ್ರವಣ ಸಾಧನ ಸೇರಿದಂತೆ ಅನೇಕ ಸಲಕರಣೆಗಳನ್ನು ವಿತರಿಸಿದರು.

- Advertisement -

ಡಾ.ಅಶೋಕ ಮುರಗೊಡ, ಸೋಮಶೇಖರ ಮಗದುಮ್ಮ, ಬಸವರಾಜ ಹುಳ್ಳೇರ, ಶಕೀಲ ಧಾರವಾಡ್ಕರ, ಬಸವರಾಜ ಹೀರೆಮಠ, ಶ್ರೀದೇವಿ ತಡಕೊಡ, ಶ್ರೀಕಾಂತ ಮಹಾಜನ, ಆನಂದ ಮುಡಲಗಿ, ಲಕ್ಕಪ್ಪ ತಹಸಿಲ್ದಾರ, ಸದರ ಜೋಶಿ, ಶ್ರೀಶೈಲ ಪೋಜೇರಿ ಶ್ರೀಕಾಂತ ಕೌಜಲಗಿ, ಅಲಿಂಕೋ ಸಂಸ್ಥೆಯ ಸಿಬ್ಬಂದಿ ನರಸಿಂಹ ಮೂರ್ತಿ ಸೇರಿದಂತೆ ಹಿರಿಯ ನಾಗರೀಕರು, ಪಾಲಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group