spot_img
spot_img

ಈ ಸಲ ಜೆಡಿಎಸ್ ಅಧಿಕಾರಕ್ಕೆ – ಸಿ ಎಂ ಇಬ್ರಾಹಿಮ್ ವಿಶ್ವಾಸ

Must Read

- Advertisement -

ಮೂಡಲಗಿ – ಯಾರು ಯಾವ ಪಕ್ಷಕ್ಕೆ ಹೋದರೂ ಧೃತಿಗೆಡಬೇಡಿ. ಇಲ್ಲಿ ಸಿದ್ಧಾಂತವಿಲ್ಲದ ರಾಜಕಾರಣ ನಡೆದಿದೆ. ಹೋಗುವವರು ಹೋಗಲಿ ನೀವು ಧೈರ್ಯಗೆಡಬೇಡಿ ಎಂದು ಜಾತ್ಯತೀತ ಜನತಾ ದಳದ ರಾಜ್ಯ ಉಪಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದರು.

ಇಲ್ಲಿನ ಮಹಾಲಕ್ಷ್ಮಿ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಕರೆಯಲಾಗಿದ್ದ ಜೆಡಿಎಸ್ ಅರಭಾವಿ ಮತಕ್ಷೇತ್ರದ ಪದಾಧಿಕಾರಿಗಳ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಜನತಾ ದಳ ಹೇಗೆ ಕಟ್ಟಬೇಕೆಂದು ನನಗೆ ಗೊತ್ತು. ನನ್ನ ನಾಡು, ಸಂಸ್ಕೃತಿ ನನಗೆ ಗೊತ್ತಿದೆ.  ಮಾನವಿಲ್ಲದ ಸ್ಥಾನ ಏನು ಮಾಡೋದು ಅಂತ ಹೇಳಿ ಕಾಂಗ್ರೆಸ್ ಮುಖಕ್ಕೆ ಎಸೆದು ಬಂದೆ. ಎಮ್ಎಲ್ಸಿ ಸ್ಥಾನ ಬಂದರೂ, ರಾಜ್ಯಸಭಾ ಸ್ಥಾನ ಬಂದರೂ ಬೇಡ ಅಂದೆ. ನಾನು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಬೇರೆ ಪಕ್ಷಕ್ಕೆ ಹೋದವರನ್ನು ನಾನು ವಿರೋಧಿಸುತ್ತೇನೆ. ಯಾರೂ ಧೃತಿಗೆಡಬೇಡಿ ಎಲ್ಲರೂ ಸೇರಿ ಹೋರಾಡೋಣ ಎಂದರು.

- Advertisement -

ಬಸವಣ್ಣನವರ ವಚನಗಳನ್ನು ಮೇಲಿಂದ ಮೇಲೆ ಉದಹರಿಸಿದ ಇಬ್ರಾಹಿಮ್ ನಮ್ಮ ಪಕ್ಷ ಎಲ್ಲರನ್ನು ಕರೆದುಕೊಂಡು ಕೆಲಸ ಮಾಡುತ್ತದೆ ಎಂದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗದಿದ್ದರೆ ನಾನು ರಾಜಕೀಯದಿಂದ ನಿವೃತ್ತನಾಗುತ್ತೇನೆ ಎಂದು ಈ ಹಿಂದೆ ಹೇಳಿದ್ದೇನೆ ಅದಕ್ಕೆ ಬದ್ಧನಾಗಿದ್ದೇನೆ. ರಾಜ್ಯದ ಒಂದು ಭಾಗದಲ್ಲಿಜೆಡಿಎಸ್ ಗೆ  ಈಗಾಗಲೇ ೭೦ ಸೀಟು ಬಂದಾಗಿದೆ. ಈ ಕಡೆಯ ಸ್ಥಾನಗಳು ಉಪ್ಪಿನಕಾಯಿಯಂತೆ ಬೇಕಾಗಿದೆ.

- Advertisement -

ಎಲ್ಲಾ ಕಡೆ ಕುರುಬ, ಮುಸ್ಲಿಮ್ ಸಮುದಾಯಗಳು ಶೇ. ೧೦೦ ರಷ್ಟು ನಮ್ಮ ಕಡೆ ಬಂದಿವೆ ಎಂದರು.

ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಬಡಿದಾಟ ನಡೆದಿದೆ, ಬಿಜೆಪಿಯಲ್ಲಿ ನಾಯಕತ್ವವಿಲ್ಲ. ಗುಡಿ ಗುಂಡಾರ ಕಟ್ಟುವುದು ಸರ್ಕಾರದ ಕೆಲಸ ಅಲ್ಲ ಬಡವರ ಮನೆ ಕಟ್ಟುವುದು ರಾಜ್ಯ ಸರ್ಕಾರದ ಕೆಲಸ. ಕುಮಾರಸ್ವಾಮಿಯವರ ಈ ಹಿಂದಿನ ಕಾರ್ಯಶೈಲಿ ನೋಡಿ ಈ ಸಲ ಆಶೀರ್ವಾದ ಮಾಡಿ ಎಂದು ಸಿಎಂ ಇಬ್ರಾಹಿಮ್ ಹೇಳಿದರು.

ಕಾಂಗ್ರೆಸ್ ನಲ್ಲಿ ಯಾರಿಗೂ ಬೆಲೆ ಇಲ್ಲ. ಕಾರ್ಯಕರ್ತರನ್ನು ತುಚ್ಛವಾಗಿ ಕಾಣುತ್ತಾರೆ ಎಂದು ಆರೋಪಿಸಿದ ಅವರು,  ಸಿದ್ರಾಮಯನ ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್ ಸೇರಿದೆ. ಪಾದಯಾತ್ರೆ ಮಾಡಿದೆ. ಆದರೂ ನನಗೆ ಬೆಲೆ ಸಿಗಲಿಲ್ಲ ಎಂದರು.

ಜೆಡಿಎಸ ನ ಪಂಚರತ್ನ ಕಾರ್ಯಕ್ರಮ ಜನವರಿಯಲ್ಲಿ ಈ ಭಾಗಕ್ಕೆ ಬರಲಿದೆ. ಈ ಕಾರ್ಯಕ್ರಮ ದಲ್ಲಿ ಆರೋಗ್ಯ ಉಚಿತವಾಗಿದೆ, ಅಂತಾರಾಷ್ಟ್ರೀಯ ಮಟ್ಟದ  ಶಾಲೆಗಳು ಉಚಿತ, ೬೫ ವಯಸ್ಸಿನವರಿಗೆ ಪ್ರತಿತಿಂಗಳು ೫೦೦೦ ರೂ. ಮಾಸಾಶನ ಒಂದು ಮನೆಗೆ ೫ ಲಕ್ಷ ರೂ.,  ನಿರುದ್ಯೋಗಿ ಯುವಕರಿಗೆ ಬಸ್ ರೂಟ್ ಕೊಟ್ಟು ಉದ್ಯೋಗ ಕೊಡುತ್ತೇವೆ ಎಂದು ಇಬ್ರಾಹಿಂ ಆಶ್ವಾಸನೆ ಕೊಟ್ಟರು

ಈ ಸಲ ನಮ್ಮದೇ ಸರ್ಕಾರ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು,  ಸರ್ಕಾರ ಬಂದ ಮೂರು ತಿಂಗಳಲ್ಲಿ ಕಾರ್ಯಕರ್ತರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಗ್ಯಾರಂಟಿಯಾಗಿ ಕೊಡುತ್ತೇವೆ ಎಂದರು.

ಮೊದಲಿಗೆ ಸಂಗಪ್ಪ ಕಳ್ಳಿಗುದ್ದಿ ಸ್ವಾಗತಿಸಿದರು.

ಅರಭಾವಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಈರಣ್ಣ ಕೊಣ್ಣೂರ ಪ್ರಾಸ್ತಾವಿಕ ಮಾತನಾಡಿದರು. ಜೆಡಿಎಸ್ ಮುಖಂಡರಾದ ಪ್ರತಾಪರಾವ್ ಪಾಟೀಲ, ಶಂಕರ ಮಾಡಲಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ  ಮುಗಳಖೋಡ ಪುರಸಭೆಯ ಮಾಜಿ ಮಾಜಿ ಅಧ್ಯಕ್ಷರು ಬಿಜೆಪಿಯಿಂದ ಜೆಡಿಎಸ್ ಗೆ ಸೇರ್ಪಡೆಯಾದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group