ಗುರ್ಲಾಪೂರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Must Read

ಗುರ್ಲಾಪೂರ– ಸ್ಥಳೀಯ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ದಿ.20 ರಂದು ಮುಂಜಾನೆ 9.ಗಂಟೆಗೆ ಜಿಲ್ಲಾ ಅಂಧತ್ವ ನಿವಾರಣಾ ಕಛೇರಿ ಬೆಳಗಾವಿ,ಮೂಡಲಗಿ ಲಯನ್ಸ ಕ್ಲಬ್ ಪರಿವಾರ ಹಾಗು ಡಾ ಸಚಿನ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸನಾ ಶಿಬಿರ ನೆರವೇರಿತು.

ಈ ಶಿಬಿರದಲ್ಲಿ ಡಾ. ಸಚಿನ ಟಿ ಇವರು ಶಿಬಿರದ ಲಾಭ ಪಡೆಯಲು ಆಗಮಿಸಿದವರಿಗೆ ಪ್ರತಿಯೊಬ್ಬರಿಗೆ ಕಣ್ಣು ಎಷ್ಟು ಮಹತ್ವ ಪಡೆದಿದೆ ಕಣ್ಣು ಕಳೆದುಕೊಂಡವರ ನೋವನ್ನು ನೀವು ಕಂಡಿದ್ದೀರಿ ಆದಕಾರಣ ಪ್ರತಿಯೊಬ್ಬರು ಕಣ್ಣನ್ನು ಅತಿ ಜಾಗರೂಕತೆಯಿಂದ ಕಾಪಾಡಿಕೂಳ್ಳಬೇಕು ಎನ್ನುತ್ತಾ, ನಾವು ನಿಮ್ಮೂರಿಗೆ ಆಗಮಿಸಿ ನೇತ್ರ ತಪಾಸಣೆ ಶಿಬಿರ ಮಾಡಲು ಮೂಡಲಗಿ ಲಯನ್ಸ ಕ್ಲಬ್ ಪರಿವಾರ ಕಾರಣ ಅವರು ಶಿಬಿರ ಏರ್ಪಡಿಸಿದ ಕಾರಣ ನಾವು ನಮ್ಮ ಸೇವೆಯನ್ನು ಗುರ್ಲಾಪೂರದ ಜನತೆಗೆ ಉಚಿತವಾಗಿ ಮಾಡಲು ಆಗಮಿಸಿದ್ದೇವೆ ಇದರ ಲಾಭವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು ಎಂದರು.

ಮೂಡಲಗಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಡಾ.ಎಸ್ ಎಸ್ ಪಾಟೀಲರವರು ವೃತ್ತಿಯಲ್ಲಿ ವೈದ್ಯರಾದರೂ ತಮ್ಮ ಸೇವೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ದೂರೆಯಲಿ ಎಂದು ಈ ಲಯನ್ಸ ಕ್ಲಬ್ ಪರಿವಾರದ ಅಧ್ಯಕ್ಷರಾಗಿ ಇಂತಹ ಕಾರ್ಯದಲ್ಲಿ ತೊಡಗಿ ಕಣ್ಣನ್ನು ಕಾಪಾಡಿಕೂಳ್ಳಲು ನಾವೆಲ್ಲರು ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಸುತ್ತಾ, ಪಾಲಕರು ತಮ್ಮ ಮಕ್ಕಳಿಗೆ ಇದರ ಬಗ್ಗೆ ತಿಳಿಸಿ ಅವರ ಕಣ್ಣಗಳನ್ನು ಕಾಪಾಡಬೇಕೆಂದರು.

ಈ ಶಿಬಿರದಲ್ಲಿ ಸುಮಾರು 90 ಜನ ಇದರ ಲಾಭ ಪಡೆದರೆ ನಮ್ಮಗೆ ತೃಪ್ತಿ ಇರುವದಿಲ್ಲ ಪ್ರತಿಯೊಬ್ಬರು ಇಂತಹ ಶಿಬಿರದ ಲಾಭಪಡೆದುಕೂಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಸಂಗಮೇಶ ಕೌಜಲಗಿ ಶಿವಬೋಧ ಯರಝರವಿ, ಕೃಷ್ಣಾ ಕೆಂಪಸತ್ತಿ, ಶಿವಾನಂದ ಗಾಡವಿ, ಸಚಿನ ಟಿ, ವೆಂಕಟೇಶ ಸೋನವಾಲ್ಕರ, ಶ್ರೀಶೈಲ ಲೋಕಣ್ಣವರ, ಕಾಶಿನಾಥ ಅಂಬಿಗೇರ ಆಸ್ಪತ್ರೆ ಸಿಬ್ಬಂದಿ ಹಾಗು ಪರಿವಾರದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group