ನಂದಗೋಕುಲ ಶಾಲೆಯಲ್ಲಿ ಸ್ನೇಹ ಸಮ್ಮೇಳನ

0
348

ಮೂಡಲಗಿ: ಮಕ್ಕಳೇ ಸಂಪತ್ತಾಗಿದ್ದರಿಂದ ಅವರಿಗೆ ಸಂತೋಷವಾಗಿರಲು ಶಿಕ್ಷಣ ನೀಡಿ, ಮಕ್ಕಳು ಬೆಳೆದಮೇಲೆ ಅವರ ಇಚ್ಛೆಯ ಪ್ರಕಾರ ವಸ್ತುಗಳ ಮೌಲ್ಯವನ್ನು ತಿಳಿದುಕೊಳ್ಳುತ್ತಾರೆ ಹಾಗೂ ತಂದೆ -ತಾಯಿಯೊಂದಿಗೆ ಗೌರವದಿಂದ ಇರುತ್ತಾರೆ ಎಂದು ಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ ಹೇಳಿದರು.

ಅವರು ಪಟ್ಟಣದ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ಶ್ರೀಮತಿ ಎನ್.ಎನ್.ಸೋನವಾಲ್ಕರ ಮತ್ತು ನಂದಗೋಕುಲ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಶಾಲೆಯಲ್ಲಿ ಪಾಠದೊಂದಿಗೆ ಪಠೇತರ ಚಟುವಟಿಕೆ ಹಾಗೂ ವಿವಿಧ ಶಾಲೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸುತ್ತಿರುವುದಾಗಿ ತಿಳಿಸಿದ ಅವರು, ಮಕ್ಕಳು ಗುಲಾಬಿ ಹೂಗಳಂತೆ, ಅವುಗಳು ಬಾಡದಂತೆ ನೋಡಿಕೊಂಡು ಸದಾ ಲವಲವಿಕೆಯಿಂದ ಬೆಳೆಸಲು ಪ್ರಯತ್ನಿಸಬೇಕು. ಆಟ ಪಾಠಗಳ ಜೊತೆಗೆ ನೈತಿಕತೆ ಮತ್ತು ಎಲ್ಲಾ ಕ್ಷೇತ್ರಗಳ ಪ್ರಚಲಿತ ಘಟನೆಗಳ ಬಗ್ಗೆ ಜ್ಞಾನ ನೀಡುತ್ತ ಒಳ್ಳೆಯ ಪ್ರಜೆಗಳನ್ನಾಗಿ ನಿರ್ಮಿಸಬೇಕು ಎಂದರು.

ಈ ಸಮಯದಲ್ಲಿ ಶಿಕ್ಷಕಿಯರಾದ ರುಬಿನಾ ಚೌದರಿ, ಮಂಜುಳಾ ಅಂಗಡಿ, ಶಾಮಲಾ ಪಾಟೀಲ, ಅಮೃತಾ ಉಪ್ಪಿನ, ಸೌಭಾಗ್ಯಾ ಸ್ವಾಮಿ, ಶಮೀನಾ ಅಥಣಿ, ಶಿರೀನ ಬಾಗವಾನ, ರೂಪಾ ಹಳ್ಳೂರ, ಮದಿನಾ ಮಕಾಂದಾರ ಮತ್ತಿತರು ಇದ್ದರು.