ಅಗಲಿದ ಭಜನಾ ಕಲಾವಿದ ಸತ್ಯಪ್ಪ ಮಂಟೂರ ಅವರಿಗೆ ಇಂದು ‘ಗಾನ ಶೃದ್ಧಾಂಜಲಿ’

Must Read

ಮೂಡಲಗಿ: ತಾಲ್ಲೂಕಿನ ಕಲ್ಲೋಳಿಯ ಭಜನಾ ಕಲಾವಿದ ಸತ್ಯಪ್ಪ ಮಂಟೂರ ಅವರು ಇತ್ತೀಚೆಗೆ ನಿಧನರಾಗಿದ್ದು ಅವರಿಗೆ ಭಜನಾ ಕಲಾವಿದರಿಂದ ನಾಳೆ ಜುಲೈ 23, ಶುಕ್ರವಾರದಂದು ಬೆಳಿಗ್ಗೆ 10ಕ್ಕೆ ಪಟ್ಟಣದ ಸಿದ್ಧಾರೂಢ ಮಠದಲ್ಲಿ ‘ಗಾನ ಶೃದ್ದಾಂಜಲಿ’ ಕಾರ್ಯಕ್ರಮವನ್ನು ಏರ್ಪಡಿಸಿರುವರು.

ಇದೇ ಸಂದರ್ಭದಲ್ಲಿ ಜರುಗುವ ನುಡಿ ನಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೀಮಪ್ಪ ಕಡಾಡಿ ವಹಿಸುವರು. ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಾಹಿತಿ ಬಾಲಶೇಖರ ಬಂದಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಸತೀಶ ಕಡಾಡಿ ಭಾಗವಹಿಸುವರು.

ಹುಲ್ಯಾಳ ಮಹಾದೇವಪ್ಪ, ಬಸಲಿಂಗಯ್ಯ ಹಿರೇಮಠ, ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ, ಕುಳಲಿ ಲಕ್ಷ್ಮೀಬಾಯಿ, ನಂದೇಶ್ವರ ಪ್ರಭು, ಚಿಕ್ಕಲಕಿ ಕುಂಬಾರ, ಹೊಸಳ್ಳಿ ನಾಗಪ್ಪ, ದುಂಡಪ್ಪ ಬೀಸನಕೊಪ್ಪ, ನಿರುಪಾದಿ ಹಿರೇಮಠ, ದ್ರೌಪದಿ ಶಿಂಧಿಕುರಬೇಟ ಅವರು ಗಾನ ನಮ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಸಂಘಟಕ ರಮೇಶ ಕೌಜಲಗಿ ತಿಳಿಸಿದ್ದಾರೆ.

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group